ದಿನದ ಖರ್ಚಿಗೆ 5 ಸಾವಿರ ಬೇಡಿಕೆ: ಮಕ್ಕಳಾದರೆ ಬ್ಯೂಟಿ ಹಾಳಾಗುತ್ತೆ; ಒತ್ತಾಯ ಮಾಡಿದ್ರೆ ಆತ್ಮಹತ್ಯೆ ಬೆದರಿಕೆ: ಪತ್ನಿ ಕಾಟಕ್ಕೆ ನೊಂದು ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತಿ

ಬೆಂಗಳೂರು: ಕುಟುಂಬದವರೇ ನೋಡಿ ಮದುವೆ ಮಾಡಿದ್ದ ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಇದೀಗ ಪತ್ನಿ ಕಾಟಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಟೆಕ್ಕಿ ಶ್ರೀಕಾಂತ್ 2022ರಲ್ಲಿ ಯುವತಿಯಿಬಳನ್ನು ವಿವಾಹವಾಗಿದ್ದ. ಮದುವೆಯಾದಾಗಿನಿಂದಲೂ ಪತ್ನಿ ಕಿರುಕುಳ ನೀಡುತ್ತಲೇ ಇದ್ದಾಳಂತೆ. ಪ್ರತಿದಿನ ದಿನದ ಖರ್ಚಿಗೆ 5000 ರೂಪಾಯಿ ಕೇಳುತ್ತಾಳಂತೆ. ಬ್ಯೂಟಿ ಹಾಳಾಗುತ್ತೆ ಎಂದು ಮಕ್ಕಳನ್ನು ಮಡಿಕೊಳ್ಳಲು ರೆಡಿ ಇಲ್ಲವಂತೆ. ಸ್ವಂತ ಮಕ್ಕಳು ಬೇಡ ದತ್ತು ಮಕ್ಕಳನ್ನು ಪಡೆಯೋಣ ಎನ್ನುತ್ತಾಳಂತೆ.

ಒತ್ತಾಯ ಮಾಡಲು ಹೋದರೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾಳಂತೆ. ವರ್ಕ ಫ್ರಂ ಹೋಂ ಕೆಲಸ ಮಾಡುತ್ತಿದ್ದ ಶ್ರೀಕಾಂತ್ ಗೆ ಕೆಲಸಕ್ಕೆ ಕುಳಿತರೆ ಪತ್ನಿ ಜೋರಾಗಿ ಸಾಂಗ್ ಹಾಕಿ ಡಾನ್ಸ್ ಮಡುವುದು, ಕೆಲಸಕ್ಕೆ ಡಿಸ್ಟರ್ಬ್ ಮಾಡುವುದು ಮಾಡುತ್ತಾಳಂತೆ. ಒಂದು ದಿನವೂ ಮದುವೆಯಾದ ಖುಷಿ , ಸಂತೋಷ ಎಂಬುದೇ ಇಲ್ಲ. ಪತ್ನಿಯ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಶ್ರೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಿಚ್ಛೇದನ ಕೇಳಿದರೆ 45 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾಳಂತೆ. ಬೇಸತ್ತ ಶ್ರೀಕಾಂತ್ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ನಿ ಹಾಗೂ ಕುಟುಂಬದವರ ವಿರುದ್ಧ ಎನ್ ಸಿಆರ್ ದಾಖಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read