ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕ್ಷುಲ್ಲಕ ಕಾರಣಕ್ಕೆ ಕಾರು ಗುದ್ದಿ ಟೆಕ್ಕಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸಂಜಯ್ ಕೊಲೆಯಾಗಿರುವ ಟೆಕ್ಕಿ. ಅಪಘಾತದಿಂದ ಸಾವು ಎಂದು ತಿಳಿದಿದ್ದ ಪೊಲೀಸರಿಗೆ ತನಿಖೆ ಬಳಿಕ ಕೊಲೆ ಎಂಬುದು ಗೊತ್ತಾಗಿದೆ. ಪ್ರತೀಕ್ ಎಂಬಾತ ಕೊಲೆ ಮಾಡಿರುವ ವ್ಯಕ್ತಿ.
ಸಿಗರೇಟ್ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆರಂಭವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕನಕಪುರ ರಸ್ತೆಯ ವಸಂತಪುರ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಸಿಗರೇಟ್ ಸೇದಲೆಂದು ಸಂಜಯ್ ಹಾಗೂ ಕಾರ್ತಿಕ್ ಕಚೇರಿಯಿಂದ ಹೊರ ಬಂದಿದ್ದರು. ರಸ್ತೆ ಬದಿ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿ ಅಲ್ಲಿಯೇ ಸೇದುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರತೀಕ್ ಎಂಬಾತ ಕಾರಿನಿಂದ ಇಳಿಯದೇ ಸಿಗರೇಟ್ ತಮ್ದು ಕೊಡುವಂತೆ ಸಂಜಯ್ ಗೆ ಹೇಳಿದ್ದನಂತೆ. ಇದಕ್ಕೆ ಕೋಪಗೊಂಡ ಸಂಜಯ್ ಹಾಗೂ ಕಾರ್ತಿಕ್, ಪ್ರತಿಕ್ ಜೊತೆ ಜಗಳವಾಡಿದ್ದಾರೆ. ಗಲಾಟೆ ತಾರಕ್ಕೇರಿದೆ. ಅಂಗಡಿಯಾತ ಜಗಳ ಬಿಡಿಸಿ ಮೂವರನ್ನು ಸ್ಥಳದಿಂದ ಕಳುಹಿಸಿದ್ದರು.
ಬಳಿಕ ಸಂಜಯ್ ಹಾಗೂ ಕಾರ್ತಿಕ್ ಬೈಕ್ ನಲ್ಲಿ ತೆರಳುತ್ತಿದ ವೇಳೆ ವೇಗವಗೈ ಕಾರಿನಲ್ಲಿ ಬಂದ ಪ್ರತೀಕ್ ಬೇಕಂತಲೇ ಕಾರನ್ನು ಬೈಕ್ ಗೆ ಗುದ್ದಿದ್ದಾನೆ. ಕೆಳಗೆ ಬಿದ್ದ ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಂಭೀರವಗೈ ಗಾಯಗೊಂಡಿರುವ ಕಾರ್ತಿಕ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರುಗೆ ಇದೊಂದು ಕೊಲೆ ಎಂಬುದು ಗೊತ್ತಾಗಿದೆ. ಆರೋಪಿ ಪ್ರತೀಕ್ ನನ್ನು ಬಂಧಿಸಲಾಗಿದೆ.