ಬೆಂಗಳೂರು ನಗರ ತನ್ನದೇ ಆದ ವೈಶಿಷ್ಟ್ಯತೆಗಳಿಗೆ ಮತ್ತು ಹೆಚ್ಚು ಚರ್ಚೆಗೆ ಒಳಪಡುವ “ಪೀಕ್ ಬೆಂಗಳೂರು” ಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಾವು ಬುಕ್ ಮಾಡಿದ ಕ್ಯಾಬ್‌ನ ಚಾಲಕ ತಮ್ಮ ಕಚೇರಿಯ ಟೀಮ್ ಲೀಡ್ ಎಂದು ಬಹಿರಂಗಪಡಿಸಿದ್ದಾರೆ. ಅವರ ಈ ಕಥೆ ಕೆಲವರಲ್ಲಿ ಕುತೂಹಲ ಮೂಡಿಸಿದರೆ, ಇನ್ನು ಕೆಲವರು ಹಲವು ಪ್ರಶ್ನೆಗಳನ್ನು ಕೇಳಿ ಗೊಂದಲಕ್ಕೊಳಗಾಗಿದ್ದಾರೆ.
ಈ ಮಹಿಳೆ ತಮ್ಮ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಆ ಚಾಟ್‌ನಲ್ಲಿ, ಟೀಮ್ ಲೀಡ್‌ಗೆ ಬೋರ್ ಹೊಡೆಯುತ್ತಿತ್ತು ಮತ್ತು ಸ್ವಲ್ಪ ಮೋಜು ಮಾಡಲು ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. “ನಿನಗೆ ಗೊತ್ತಾ, ತಮಾಷೆಯ ಘಟನೆಯೊಂದು ನಡೆಯಿತು. ನಾನು ಊಬರ್ ಕ್ಯಾಬ್ ಬುಕ್ ಮಾಡಿದೆ ಮತ್ತು ನನ್ನನ್ನು ಪಿಕ್ ಅಪ್ ಮಾಡಿದ ವ್ಯಕ್ತಿ ನನ್ನ ಕಚೇರಿಯ ಟೀಮ್ ಲೀಡ್ ಆಗಿದ್ದನು,” ಎಂದು ಚಾಟ್ ಸಂದೇಶದಲ್ಲಿ ಹೇಳಲಾಗಿದೆ. “ಅವನು ಮೋಜು ಮಾಡಲು ಮತ್ತು ಬೇಸರ ಕಳೆಯಲು ಇದನ್ನು ಮಾಡುತ್ತಿದ್ದೇನೆ ಎಂದನು” ಎಂದು ಮತ್ತಷ್ಟು ಹೇಳಿಕೆ ಸೇರಿಸಲಾಗಿದೆ.
ಈ ಪೋಸ್ಟ್ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಕೆಲವರು ಇದನ್ನು ಸರಳವಾಗಿ ತಮಾಷೆಯಾಗಿದೆ ಎಂದು ಕಂಡುಕೊಂಡರೆ, ಇನ್ನು ಕೆಲವರು ಆತಂಕ ವ್ಯಕ್ತಪಡಿಸಿ, ಯಾರಾದರೂ ಮೋಜು ಮಾಡಲು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಏಕೆ ಡ್ರೈವ್ ಮಾಡುತ್ತಾರೆ ಎಂದು ಆಶ್ಚರ್ಯಪಟ್ಟಿದ್ದಾರೆ.
“ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದು – ಸಮಯ ಕಳೆಯಲು? ಅನುಮಾನಾಸ್ಪದವಾಗಿದೆ!” ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು, “ಟೀಮ್ ಲೀಡ್‌ಗೆ ಇಷ್ಟು ಬಿಡುವಿನ ಸಮಯ ಹೇಗೆ ಸಿಗುತ್ತದೆ?” ಎಂದು ಪ್ರತಿಕ್ರಿಯಿಸಿದ್ದಾರೆ. ಮೂರನೆಯ ವ್ಯಕ್ತಿ, “ಬೆಂಗಳೂರಿನ ಜನರಿಗೆ ಅಷ್ಟು ಸಮಯವಿದೆಯೇ?” ಎಂದು ಹೇಳಿದ್ದಾರೆ.
ಒಬ್ಬರು “ಟೀಮ್ ಲೀಡ್ ಹುಡುಗಿಯರನ್ನು ಪಿಕ್ ಅಪ್ ಮಾಡುವುದು ಹೇಗೆಂದು ಕಲಿಯಲು ಪ್ರಯತ್ನಿಸುತ್ತಿದ್ದನು” ಎಂದು ತಮಾಷೆ ಮಾಡಿದ್ದರೆ. ಮತ್ತಷ್ಟು ಜನ ಇದು ಕೇವಲ ಮೋಜಿನ ಚಟುವಟಿಕೆ ಆಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆ ಟೀಮ್ ಲೀಡ್ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರಬಹುದು ಮತ್ತು ಹೆಚ್ಚುವರಿ ಆದಾಯದ ಮೂಲವಾಗಿ ಚಾಲನೆ ಬಳಸಿಕೊಳ್ಳುತ್ತಿರಬಹುದು ಎಂದು ಅವರು ಊಹಿಸಿದ್ದಾರೆ. “ಯಾರೂ ಇದನ್ನು ಮೋಜು ಮಾಡಲು ಮಾಡುವುದಿಲ್ಲ, ಬಹುಶಃ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರಬಹುದು” ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು “ಹೆಚ್ಚುವರಿ ಹಣ ಯಾವಾಗಲೂ ಉಪಯೋಗಕ್ಕೆ ಬರುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇಂತಹ ಘಟನೆಗಳು ಹೊಸದೇನಲ್ಲ. ಪೂರ್ಣಾವಧಿ ಉದ್ಯೋಗವಿದ್ದರೂ ಕ್ಯಾಬ್ ಚಾಲಕರಾಗಿ ಮತ್ತು ರಾಪಿಡೋ ಚಾಲಕರಾಗಿ ಕೆಲಸ ಮಾಡುವ ಜನರ ಕಥೆಗಳು ರೆಡ್ಡಿಟ್‌ನಲ್ಲಿ ಚರ್ಚೆಯಾಗಿವೆ.
