ಶಾಲಾ ಮಕ್ಕಳಿಗೆ ‘ಹೆಬ್ಬುಲಿ’ ಕೇಶ ವಿನ್ಯಾಸ ಮಾಡಬೇಡಿ; ಶಿಕ್ಷಕರಿಂದ ಪತ್ರ

KICHHA SUDEEPA HAIRCUT OF 'HEBBULI': HEADMASTER WRITES TO BARBER | 24 July, 2023 – Film Information

ಶಾಲಾ ವಿದ್ಯಾರ್ಥಿಗಳು ಖ್ಯಾತ ನಟ ಕಿಚ್ಚ ಸುದೀಪ್ ಅವರು ತಮ್ಮ ‘ಹೆಬ್ಬುಲಿ’ ಚಿತ್ರದಲ್ಲಿ ಮಾಡಿಸಿಕೊಂಡಿದ್ದ ಕೇಶ ವಿನ್ಯಾಸವನ್ನು ಮಾಡಿಸಿಕೊಂಡು ಶಾಲೆಗೆ ಬರುತ್ತಿರುವ ಕಾರಣ ಶಿಕ್ಷಕರೊಬ್ಬರು ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ನಗರದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಎಂ. ಶಾಂತರಾಜು ಅವರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಚಶೆಟ್ಟಿಯವರಿಗೆ ಪತ್ರ ಬರೆದು ಶಾಲಾ ವಿದ್ಯಾರ್ಥಿಗಳಿಗೆ ‘ಹೆಬ್ಬುಲಿ’ ಕಟಿಂಗ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ಶಾಲೆಗೆ ಬರಬೇಕೆಂಬುದು ಶಿಕ್ಷಣ ಇಲಾಖೆಯ ನಿಯಮವಾಗಿದ್ದು, ಆದರೆ ಮಕ್ಕಳು ಹೆಬ್ಬುಲಿ, ಸ್ಪೈಕ್ ಸೇರಿದಂತೆ ಚಿತ್ರ ವಿಚಿತ್ರ ಕೇಶ ವಿನ್ಯಾಸ ಮಾಡಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಮಕ್ಕಳನ್ನು ಗುರುತು ಹಿಡಿಯುವುದೇ ಕಷ್ಟವಾಗಿದೆ ಎಂದು ಶಿಕ್ಷಕ ಶಾಂತರಾಜು ಅಳಲು ತೋಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read