ಬೆಂಗಳೂರು : ಜಾತಿ ಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕರೊಬ್ಬರಿಗೆ ವ್ಯಕ್ತಿಯೋರ್ವ ಧಮ್ಕಿ, ಬೆದರಿಕೆ ಹಾಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ.
ಬೆಂಗಳೂರಿನ ದಾಬಸ್ ಪೇಟೆಯಲ್ಲಿ ಈ ಘಟನೆ ನಡೆದಿದೆ. ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ಎಂ ನೂರ್ ಖಾನ್ ಎಂಬಾತ ಧಮ್ಕಿ ಹಾಕಿದ್ದಾನೆ.
ಸಮೀಕ್ಷೆ ಮಾಡುವಾಗ ಶಿಕ್ಷಕನ ತೇಜೋವಧೆ ಮಾಡಿದ್ದು, ಉಪಜಾತಿ ನಮೂದಿಸುವ ವಿಚಾರಕ್ಕೆ ನೂರ್ ಖಾನ್ ಗಲಾಟೆ ಮಾಡಿದ್ದಾನೆ. ಫೇಸ್ ಬುಕ್ ಲೈವ್ ನಲ್ಲಿ ಚಿತ್ರೀಕರಣ ಮಾಡುತ್ತಾ ಹೆಚ್ಚು ಮಾತನಾಡಿದ್ರೆ ಪೊಲೀಸರಿಗೆ ಹೇಳುತ್ತೇನೆಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.