ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಉಲ್ಲೇಖಿತ ವೇಳಾಪಟ್ಟಿಯಂತೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು ನೀಡಿದ ಮಾಹಿತಿಯನ್ವಯ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಆಗಿರುವಂತೆ ಕೌನ್ಸಿಲಿಂಗ್‌ಗೆ ಆದ್ಯತಾ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಉಲ್ಲೇಖಿತ ಅಧಿಸೂಚನೆಯಲ್ಲಿನ ವೇಳಾಪಟ್ಟಿಯಂತೆ ಆಯಾ ಜಿಲ್ಲೆಯ ಉಪನಿರ್ದೇಶಕರ ಕಚೇರಿಯಲ್ಲಿಯೇ ಗಣಕೀಕೃತ ಕೌನ್ಸಿಲಿಂಗ್ ಅನ್ನು ನಡೆಸಲಾಗುವುದು. ವಿಭಾಗದೊಳಗಿನ ವರ್ಗಾವಣೆಯಲ್ಲಿ ಆಯಾ ವಿಭಾಗದೊಳಗಿನ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು ಹಾಗೂ ಅಂತರವಿಭಾಗೀಯ ವರ್ಗಾವಣೆಯಲ್ಲಿ ಆಯಾ ವಿಭಾಗವನ್ನು ಹೊರತುಪಡಿಸಿ ಕೋರಿರುವ ಅಂತರ್ ವಿಭಾಗಗಳ ಖಾಲಿ ಹುದ್ದೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳತಕ್ಕದ್ದು.

ಈ ಬಗ್ಗೆ ಪ್ರೋಗ್ರಾಮರ್‌ಗಳೊಂದಿಗೆ ಹಾಜರಿದ್ದು, ಯಾವುದೇ ಲೋಪಗಳಾಗದಂತೆ ಕೌನ್ಸಿಲಿಂಗ್‌ಗೆ ಸಂಬಂಧಿಸಿದ ಎಲ್ಲಾ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಿ ಸಮರ್ಪಕವಾಗಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ತಿಳಿಸಿದೆ.

ಕೌನ್ಸಿಲಿಂಗ್‌ ಪ್ರಕ್ರಿಯೆ ನಡೆಯುವ ದಿನದಂದು ಕೌನ್ಸಿಲಿಂಗ್ ಪಟ್ಟಿಯಲ್ಲಿರುವ ಅಧಿಕಾರಿಗಳು ಸಮಯ ಮತ್ತು ದಿನಾಂಕಗಳಲ್ಲಿ ಕಡ್ಡಾಯವಾಗಿ ಹಾಜರಾಗಲು ತಮ್ಮ ಹಂತದಲ್ಲಿ ಸೂಚನೆಯನ್ನು ನೀಡತಕ್ಕದ್ದು ಎಂದು ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read