SHOCKING NEWS: ಶಿಕ್ಷಕನಿಂದ್ಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಕೊಲೆ ಮಾಡಿ ಶವ ಬಾವಿಗೆ ಎಸೆದು ʼಎಸ್ಕೇಪ್ʼ

17 ವರ್ಷದ ಶಾಲಾ ವಿದ್ಯಾರ್ಥಿನಿ ಮೇಲೆ ಆಕೆಯ ಶಿಕ್ಷಕನೇ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಭೀಕರ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಆರೋಪಿಯನ್ನು ಹಿಂದಿ ಶಿಕ್ಷಕ ಪ್ರಹ್ಲಾದ್ ಅಂಬರಂ ಮೇಘವಾಲ್ ಎಂದು ಗುರುತಿಸಲಾಗಿದೆ. ಆತನನ್ನು ಜೈಪುರದಲ್ಲಿ ಬಂಧಿಸಿರುವ ಪೊಲೀಸರು ಬಾರ್ಮರ್‌ಗೆ ಕರೆತಂದಿದ್ದಾರೆ.

ಹಳ್ಳಿಯೊಂದರ ಬಾವಿಯೊಳಗೆ ಬಾಲಕಿಯ ಶವ ಪತ್ತೆಯಾಗಿರುವ ಬಗ್ಗೆ ಬಾರ್ಮರ್‌ನ ಪೊಲೀಸರಿಗೆ ಭಾನುವಾರ ಮಾಹಿತಿ ಸಿಕ್ಕಿತ್ತು. ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಬಾಲಕಿಯ ತಂದೆ, ಮಗಳ ಶವವನ್ನು ಗುರ್ತಿಸಿದ್ದರು. ನಂತರ ಮೃತಳ ಶಿಕ್ಷಕ ಪ್ರಹ್ಲಾದ್ ವಿರುದ್ದ ಬಾಲಕಿ ತಂದೆ ದೂರು ನೀಡಿದ್ದರು.

ಜೋಧ್‌ಪುರದಲ್ಲಿ ಮದುವೆಗೆಂದು ಬಾಲಕಿಯ ಪೋಷಕರು ಹೋಗಿದ್ದಾಗ ಶನಿವಾರ ಮಧ್ಯರಾತ್ರಿ ಮನೆಗೆ ಬಂದಿದ್ದ ಶಿಕ್ಷಕ, ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.

ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಬಾಲಕಿ ಮೇಲೆ ಹಲ್ಲೆ ಅಥವಾ ಕತ್ತು ಹಿಸುಕಿದ ಯಾವುದೇ ಲಕ್ಷಣಗಳಿಲ್ಲದ ಕಾರಣ ಬಾಲಕಿ ಹೇಗೆ ಸಾವನ್ನಪ್ಪಿದ್ದಾಳೆ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಆರೋಪಿತ ಶಿಕ್ಷಕ ಬಾಲಕಿ ಮೇಲೆ ಆಗಾಗ್ಗೆ ಒತ್ತಡ ಹೇರುತ್ತಿದ್ದ ಎಂದು ಬಾಲಕಿಯ ತಂದೆ ದೂರಿದ್ದರು. IPC ಸೆಕ್ಷನ್ 302 (ಕೊಲೆ), 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆ ಅಡಿಯಲ್ಲಿ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read