‘ಶ್ರೀರಾಮ’ ನಾಮ ಬರೆದವರಿಗೆ ಉಚಿತ ಟೀ ನೀಡಿದ ಹೋಟೆಲ್ ಮಾಲೀಕ…..!

ಜನವರಿ 22ರ ಸೋಮವಾರದಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆದಿದೆ. ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಅತಿ ಗಣ್ಯರು, ಗಣ್ಯರು ಹಾಗೂ ಭಕ್ತಾದಿಗಳು ಕಣ್ತುಂಬಿಕೊಂಡಿದ್ದಾರೆ. ಇನ್ನು ದೇಶ – ವಿದೇಶದಲ್ಲಿ ಕೋಟ್ಯಾಂತರ ಮಂದಿ ಟಿವಿ ಪರದೆಯ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ದೇಶ – ವಿದೇಶದ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದರ ಜೊತೆಗೆ ಹಲವರು ಇದೇ ಸಂದರ್ಭದಲ್ಲಿ ತಮ್ಮ ಕೈಲಾದ ಮಟ್ಟಿಗೆ ಶ್ರೀರಾಮನ ಸೇವೆಯನ್ನು ಮಾಡಿದ್ದಾರೆ. ದೇಶದ ಬಹುತೇಕ ದೇವಾಲಯಗಳಲ್ಲಿ ಆಗಮಿಸಿದ್ದ ಭಕ್ತಾದಿಗಳಿಗೆ ಪಾನಕ, ಕೋಸಂಬರಿ ವಿತರಿಸಲಾಗಿದ್ದು, ಇದರ ಮಧ್ಯೆ ಬಿಹಾರದ ಹೋಟೆಲ್ ಮಾಲೀಕರೊಬ್ಬರು ವಿಭಿನ್ನ ರೀತಿಯಲ್ಲಿ ಈ ಸಂಭ್ರಮವನ್ನು ಆಚರಿಸಿದ್ದಾರೆ.

ಬಿಹಾರದ ಮುಂಗೇರ್ ಜಿಲ್ಲೆಯಲ್ಲಿನ ಟೀ ಅಂಗಡಿ ಮಾಲೀಕರೊಬ್ಬರು ತಮ್ಮ ಹೋಟೆಲ್ ಗೆ ಬಂದ ಗ್ರಾಹಕರು 11 ಬಾರಿ ‘ರಾಮಲಲ್ಲಾ’ ನಾಮ ಬರೆದರೆ ಅವರಿಗೆ ಉಚಿತ ಟೀ ನೀಡುವುದಾಗಿ ಘೋಷಿಸಿದ್ದು, ಅದರಂತೆ ನಡೆದುಕೊಂಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಬಂದ ಪುರುಷ ಹಾಗೂ ಮಹಿಳಾ ಭಕ್ತರು ನೋಟ್ ಬುಕ್ ನಲ್ಲಿ ರಾಮ ನಾಮ ಬರೆದು ಉಚಿತ ಟೀ ಸವಿದಿದ್ದಾರೆ. ಇದೇ ರೀತಿ ದಾನಾಪುರ್ ಮಾರುಕಟ್ಟೆಯಲ್ಲೂ ಸಹ ಆಗಮಿಸಿದ್ದ ಗ್ರಾಹಕರಿಗೆ ಉಚಿತ ಟೀ ವಿತರಿಸಲಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read