ಎಲ್ಲೆಡೆ ಟೇಲರ್ ಸ್ವಿಫ್ಟ್ ಸಂಗೀತ ಜ್ವರ: ಅಭಿಮಾನಿಗೆ ಕ್ಯಾಪ್​ ನೀಡಿ ಸರ್​ಪ್ರೈಸ್​ ಕೊಟ್ಟ ಗಾಯಕಿ

ಅಮೆರಿಕನ್ ಗಾಯಕಿ-ಗೀತರಚನೆಕಾರ್ತಿ ಟೇಲರ್ ಸ್ವಿಫ್ಟ್ ಅವರ ಹೊಚ್ಚಹೊಸ ‘ಎರಾಸ್’ ಪ್ರವಾಸ ಶುರುವಾಗಿದೆ. ಇದು ವಿಶ್ವದ ಅತಿದೊಡ್ಡ ಸಂಗೀತ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇವರ ಸಂಗೀತ ಕಛೇರಿಯನ್ನು ಹೆಚ್ಚು ಆನಂದಿಸುತ್ತಿರುವಂತೆ ತೋರುತ್ತಿದ್ದರೆ, ಕೆಲವರು ಕಾರ್ಯಕ್ರಮದ ಕೆಲವು ಅದ್ಭುತ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಅಂಥದ್ದೇ ಮತ್ತೊಂದು ಕ್ಷಣ ವೈರಲ್ ಆಗಿದೆ. ವಿಡಿಯೋದಲ್ಲಿ ಟೇಲರ್ ಸ್ವಿಫ್ಟ್ ತಮ್ಮ ಸಹಿ ಮಾಡಿದ ಟೋಪಿಯನ್ನು ಅಭಿಮಾನಿಗೆ ನೀಡುತ್ತಿರುವುದನ್ನು ನೋಡಬಹುದು.

ಪೀಪಲ್ ಮ್ಯಾಗಜೀನ್ ಪ್ರಕಾರ. ಟ್ಯಾಲೋರ್ ಸ್ವಿಫ್ಟ್ ತಮ್ಮ ಟೆಕ್ಸಾಸ್ ಪ್ರವಾಸದ ಮೂರನೇ ರಾತ್ರಿಯಲ್ಲಿ ಫೆಡೋರಾ ಟೋಪಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಇಲ್ಲಿಯೇ ನೃತ್ಯ ಮಾಡುತ್ತಿದ್ದ ಜಯಲಾನ್ ಫೋರ್ಡ್‌ ಎಂಬುವವರನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಫೋರ್ಡ್ ಇದೇ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈಗ ವೈರಲ್ ಆಗಿರುವ ಕ್ಲಿಪ್ ಟೇಲರ್ ಸ್ವಿಫ್ಟ್ ತಮ್ಮ ನೃತ್ಯಗಾರರೊಂದಿಗೆ ’22’ ಹಾಡನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಹಾಗೂ ಕ್ಯಾಪ್​ ಕೊಟ್ಟಿರುವುದನ್ನು ನೋಡಬಹುದು.

https://www.youtube.com/watch?v=IW9_wpaTXhM

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read