ಕುಂಭಮೇಳದಲ್ಲಿ ದೋಣಿಗಳನ್ನು ಓಡಿಸುವ ಮೂಲಕ ಪಿಂಟು ಮಹಾರಾ ಎಂಬುವವರು 45 ದಿನಗಳಲ್ಲಿ 30 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. 130 ದೋಣಿಗಳನ್ನು ಹೊಂದಿರುವ ಪಿಂಟು ಮಹಾರಾ ದಿನಕ್ಕೆ ಸುಮಾರು 23 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ವಿಧಾನಸಭೆಯಲ್ಲಿ ದೃಢಪಡಿಸಿದ್ದಾರೆ. 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯದ ಮೇಲೆ ಶೇಕಡಾ 30 ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಲೆಕ್ಕಾಚಾರದ ಪ್ರಕಾರ, ಪಿಂಟು ಮಹಾರಾ ಸುಮಾರು 12.80 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಪಿಂಟು ಮಹಾರಾ ಮಾತ್ರವಲ್ಲದೆ, ಆಟೋ, ಟ್ಯಾಕ್ಸಿ, ಬಸ್, ದೋಣಿ ಚಾಲಕರು ಮತ್ತು ಪ್ರವಾಸಿ ವಾಹನ ಚಾಲಕರು ಸಹ ಮಹಾ ಕುಂಭದಿಂದ ಭಾರಿ ಲಾಭ ಗಳಿಸಿದ್ದಾರೆ. ಆಟೋ ಮತ್ತು ಟ್ಯಾಕ್ಸಿ ಚಾಲಕರು ದಿನಕ್ಕೆ 3,000-5,000 ರೂ, ಬಸ್ಸುಗಳು ಮತ್ತು ಪ್ರವಾಸಿ ವಾಹನಗಳು ದಿನಕ್ಕೆ 5,000-10,000 ರೂ, ದೋಣಿ ಚಾಲಕರು ದಿನಕ್ಕೆ 2,000-4,000 ರೂ, ಹೋಟೆಲ್ ಬುಕಿಂಗ್ ದಿನಕ್ಕೆ 5,000-10,000 ರೂ ಗಳಿಸಿದ್ದಾರೆ. ಪ್ರಯಾಗ್‌ರಾಜ್ ಕುಂಭಮೇಳದಿಂದ ಉತ್ತರ ಪ್ರದೇಶಕ್ಕೆ 1 ಲಕ್ಷ ಕೋಟಿ ರೂ. ಲಾಭದ ನಿರೀಕ್ಷೆ ಇದೆ ಎಂದು ಸರ್ಕಾರ ಹೇಳಿದೆ.