ನೌಕರರಿಗೆ ಗುಡ್ ನ್ಯೂಸ್: ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ

ನವದೆಹಲಿ: ರಜೆ ನಗರೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಖಾಸಗಿ ವಲಯದ ನೌಕರರು ನಿವೃತ್ತಿ ವೇಳೆ ಪಡೆಯುವ ರಜೆ ನಗದೀಕರಣಕ್ಕೆ ಪಡೆಯಬಹುದಾದ ತೆರಿಗೆ ವಿನಾಯಿತಿ ಮೊತ್ತವನ್ನು 3 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಬಜೆಟ್ ನಲ್ಲಿ ಈ ಕುರಿತು ಘೋಷಣೆ ಮಾಡಿದ್ದು, ಅದರ ಅನ್ವಯ ಆದೇಶ ಹೊರಡಿಸಲಾಗಿದೆ. 2002 ರಲ್ಲಿ ಕೊನೆಯ ಬಾರಿ ಮಾಡಲಾಗಿದ್ದ ತಿದ್ದುಪಡಿ ಅನ್ವಯ ಖಾಸಗಿ ವಲಯದ ನೌಕರರು ನಿವೃತ್ತಿ ಸಂದರ್ಭದಲ್ಲಿ ಪಡೆಯುವ ರಜೆ ನಗರೀಕರಣಕ್ಕೆ ತೆರಿಗೆ ವಿನಾಯಿತಿ ಪಡೆಯಲು 30 ಸಾವಿರ ರೂಪಾಯಿ ಮೂಲವೇತನ ಮತ್ತು 3 ಲಕ್ಷ ರೂಪಾಯಿಯ ಮಿತಿ ಹಾಕಲಾಗಿದ್ದು, ಇದನ್ನು 25 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read