ಪ್ರೀತಿ ನಿರಾಕರಿಸಿದ್ದಕ್ಕೆ ಘೋರ ಕೃತ್ಯ; ಬಾಟಲಿಯಿಂದ ಇರಿದು ಕಾಲೇಜು ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಆಘಾತಕಾರಿ ಘಟನೆಯೊಂದರಲ್ಲಿ, 22 ವರ್ಷದ ಯುವಕನೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದಳೆಂಬ ಕಾರಣಕ್ಕೆ ಕಾಲೇಜು ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಮಡಗುಪಟ್ಟಿಯಲ್ಲಿ ಗುರುವಾರ ನಡೆದಿದೆ.

ಶಿವಗಂಗೆಯ ಮಹಿಳಾ ಸರ್ಕಾರಿ ಕಲಾ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿ ಎಂ. ಮೋನಿಶಾ (20) ಎಂಬಾಕೆಯನ್ನು ಯುವಕ ಆಕಾಶ್ ಏಕಮುಖವಾಗಿ ಪ್ರೀತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಕಾಶ್ ಸಂಬಂಧಿಯಾಗಿರುವ ಹುಡುಗಿ ಆತನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ್ದಳು.

ಆಕೆ ತನ್ನ ಪ್ರೀತಿಯನ್ನು ತಿರಸ್ಕರಿಸಿದ ಬಳಿಕ ಆಕಾಶ್ ಗುರುವಾರ ಬೆಳಗ್ಗೆ ಆಕೆಯ ತಂದೆಯನ್ನು ಭೇಟಿಯಾಗಿ ಆಕೆಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾನೆ. ಬಾಲಕಿಯ ಪೋಷಕರೂ ಈ ಮನವಿಯನ್ನು ತಿರಸ್ಕರಿಸಿದ್ದರು.

ಮೋನಿಶಾ ಮತ್ತು ಆಕೆಯ ಪೋಷಕರ ನಿರಾಕರಣೆಯಿಂದ ಕೋಪಗೊಂಡ ಆಕಾಶ್, ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಒಳ ನುಗ್ಗಿ ಮಾತಿನ ಚಕಮಕಿಯ ನಂತರ ಒಡೆದ ಬಾಟಲಿಯಿಂದ ಅನೇಕ ಬಾರಿ ಇರಿದಿದ್ದಾನೆ ನಂತರ ಅದೇ ಬಾಟಲಿಯಿಂದ ತಾನೂ ಇರಿದುಕೊಂಡಿದ್ದಾನೆ.

ಕೂಡಲೇ ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಡಗುಪಟ್ಟಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read