ಬಿಟಿಎಸ್ ಬ್ಯಾಂಡ್ ಕ್ರೇಜ್……ವೀಸಾ ಇಲ್ಲದೆ ದಕ್ಷಿಣ ಕೊರಿಯಾಕ್ಕೆ ಹೊರಟ ಬಾಲಕಿಯರು….!

ದಕ್ಷಿಣ ಕೊರಿಯಾದ ಸಂಗೀತ ಮತ್ತು ಸಿನಿಮಾ ಜನಪ್ರಿಯತೆ ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿದೆ. ಭಾರತೀಯರು ಅಲ್ಲಿನ ಸಿನಿಮಾಗಳನ್ನು ಹಾಗೂ ಹಾಡುಗಳನ್ನು ಮೆಚ್ಚಿಕೊಳ್ತಿದ್ದಾರೆ. ದಕ್ಷಿಣ ಕೊರಿಯಾ ನಟರು ಹಾಗೂ ಬಿಟಿಎಸ್ ಬ್ಯಾಂಡ್ ಕ್ರೇಜ್ ಹೆಚ್ಚಾಗಿದ್ದು, ಒಮ್ಮೆ ದಕ್ಷಿಣ ಕೊರಿಯಾಕ್ಕೆ ಹೋಗ್ಬೇಕು ಎನ್ನುವವರು ಬಹಳಷ್ಟು ಮಂದಿ ಇದ್ದಾರೆ. ಈಗ ಇದಕ್ಕೆ ಸಂಬಂಧಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಮಿಳುನಾಡಿದ ಹುಡುಗಿಯರು ಬಿಟಿಎಸ್‌ ಬ್ಯಾಂಡ್‌ ಪ್ರೀತಿಗೆ ಮಾಡಿದ ಕೆಲಸ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದೆ.

ಮೂವರು ಹುಡುಗಿಯರು ಬಿಟಿಎಸ್‌ ಬ್ಯಾಂಡ್‌ ಭೇಟಿಯಾಗುವ ನಿರ್ಧಾರಕ್ಕೆ ಬಂದಿದ್ದಲ್ಲದೆ 14 ಸಾವಿರ ರೂಪಾಯಿ ತೆಗೆದುಕೊಂಡು ಮನೆ ಬಿಟ್ಟಿದ್ದಾರೆ. ಮೂವರು ಹುಡುಗಿಯರು ದಕ್ಷಿಣ ಕೊರಿಯಾಕ್ಕೆ ಹೋಗಲು ಪ್ಲಾನ್‌ ಮಾಡಿದ್ದರು. ಕಡಿಮೆ ಹಣ ಹಾಗೂ ಪಾಸ್ಪೋರ್ಟ್‌ ಇಲ್ಲದೆ ಹೇಗೆ ಹೋಗೋದು ಎನ್ನುವ ಬಗ್ಗೆ ಗೂಗಲ್‌ ನಲ್ಲಿ ಸರ್ಚ್‌ ಮಾಡಿದ್ದರು. ಆದ್ರೆ ಅವರ ಕನಸು ಈಡೇರಲಿಲ್ಲ. ಅವರು ವೆಲ್ಲೂರ್‌ ಗೆ ಬಂದಾಗ ಸಿಕ್ಕಿಬಿದ್ದಿದ್ದಾರೆ. ಮೂರು ಹುಡುಗಿಯರ ವಯಸ್ಸು 13 ವರ್ಷವಾಗಿದ್ದು ಕರೂರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾರೆ.

ಹುಡುಗಿಯರು ಕಡಿಮೆ ಬಜೆಟ್‌ ನಲ್ಲಿ ದಕ್ಷಿಣ ಕೊರಿಯಾಕ್ಕೆ ಹೋಗಲು ಹಡಗನ್ನು ಆಯ್ಕೆ ಮಾಡಿದ್ದರು. ವಿಶಾಖಪಟ್ಟಂನಿಂದ ಹೊರಡುವ ನಿರ್ಧಾರಕ್ಕೆ ಬಂದಿದ್ದರು. ಚೆನ್ನೈಗೆ ಬಂದ ಅವರು ರೂಮ್‌ ಬುಕ್‌ ಮಾಡಿ ಒಂದು ರಾತ್ರಿ ಕಳೆದಿದ್ದಾರೆ. ಈ ವೇಳೆ ತಪ್ಪಿನ ಅರಿವಾಗಿದೆ. ಮನೆಗೆ ವಾಪಸ್‌ ಹೋಗುವ ನಿರ್ಧಾರ ಮಾಡಿದ್ದಾರೆ. ಆದ್ರೆ ಟ್ರೈನ್‌ ತಪ್ಪಿದ ಕಾರಣ ಅವರು ವೆಲ್ಲೂರ್‌ ನಲ್ಲಿ ಪೊಲೀಸರ ಕೈಗೆ ಸಿಕ್ಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read