ತಮನ್ನಾ ಜೊತೆಗಿನ ಪ್ರೀತಿ ಕುರಿತು ಕೊನೆಗೂ ಬಾಯ್ಬಿಟ್ಟ ವಿಜಯ್​ ವರ್ಮಾ….!

ಸುಜೋಯ್​ ಘೋಷ್​ರ ಸೆಕ್ಸ್​ ವಿತ್​ ಎಕ್ಸ್​ ಸೆಗ್ಮೆಂಟ್​ ಪೋಸ್ಟ್​ ಬಳಿಕ ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್​ ವರ್ಮಾ ಕೊನೆಗೂ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ತೋರಿಸಿಕೊಂಡಿದ್ದಾರೆ. ಇಬ್ಬರ ಆಫ್​ ಸ್ಕ್ರೀನ್​ ಕೆಮಿಸ್ಟ್ರಿ ಇವರು ಪಕ್ಕಾ ಡೇಟಿಂಗ್​ನಲ್ಲಿದ್ದಾರೆ ಎಂದು ಹೇಳುವಂತಿದೆ. ಅನೇಕರು ಇದನ್ನು ಪ್ರಚಾರದ ಗಿಮಿಕ್​ ಎಂದು ಹೇಳಿದ್ದರು. ಆದರೆ ಇದೀಗ ಎಲ್ಲಾ ವದಂತಿಗೆ ಈ ಜೋಡಿ ತೆರೆ ಎಳೆದಿದೆ.

ಈ ವಿಚಾರವಾಗಿ ಮಾತನಾಡಿರುವ ನಟ ವಿಜಯ್​ ವರ್ಮಾ, ಹೌದು ನಾವು ಪರಸ್ಪರ ಡೇಟಿಂಗ್​ನಲ್ಲಿದ್ದೇವೆ. ಈಗ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದೇವೆ. ನಾನು ತಮನ್ನಾರನ್ನು ಪ್ರೀತಿಸುತ್ತಿದ್ದೇನೆ. ನನ್ನ ಖಳನಾಯಕ ಎರಾವನ್ನು ಮುಗಿಸಿ ಇದೀಗ ನಾನು ಪ್ರಣಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಲಸ್ಟ್​ ಸ್ಟೋರಿಸ್​ 2 ಸಹನಟ ವಿಜಯ್ ವರ್ಮಾ ಜೊತೆ ಡೇಟಿಂಗ್​ನಲ್ಲಿ ಇರುವ ಬಗ್ಗೆ ಮಾತನಾಡಿದ್ದ ತಮನ್ನಾ, ಮಹಿಳೆಯರು ತಮ್ಮ ಮೂಲಭೂತ ಭಾವನೆಗಳ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಸದ್ಯ ನಟಿ ತಮನ್ನಾ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಕಾವಾಲಿಯಾ ಸಾಂಗ್​ ಮೂಲಕ ಹೊಸ ಕ್ರೇಜ್​ ಸೃಷ್ಟಿಸಿದ್ದಾರೆ. ಇದರಲ್ಲಿ ತಮನ್ನ ಹೆಜ್ಜೆ ಹಾಕಿದ ರೀತಿ ಸಖತ್​ ಫೇಮಸ್ ಆಗಿದ್ದು ರೀಲ್ಸ್​ಗಳಲ್ಲಿ ಜನರು ಹುಚ್ಚೆದ್ದು ತಮನ್ನಾರನ್ನು ಫಾಲೋ ಮಾಡ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read