ತಾಜ್ ಮಹಲ್ ಭೇಟಿ ವೇಳೆ ಪರ್ಸ್‌ ಕಳೆದುಕೊಂಡು ಪರದಾಡಿದ ದಂಪತಿ; ಪೊಲೀಸರ ನೆರವಿನಿಂದ ಸಮಾಧಾನದ ನಿಟ್ಟುಸಿರು…!

ಆಗ್ರಾದ ಪ್ರಸಿದ್ಧ ತಾಜ್ ಮಹಲ್‌ಗೆ ಭೇಟಿ ನೀಡಿದ ತಮಿಳುನಾಡಿನ ದಂಪತಿ ಪ್ರವಾಸದ ಸಮಯದಲ್ಲಿ ಆಕಸ್ಮಿಕವಾಗಿ ತಮ್ಮ ಪರ್ಸ್ ಅನ್ನು ಟ್ಯಾಕ್ಸಿಯಲ್ಲಿ ಬಿಟ್ಟು ಹೋಗಿದ್ದರಿಂದ ಕಂಗಾಲಾಗಿದ್ದು, ಪರ್ಸ್‌ನಲ್ಲಿ ದೊಡ್ಡ ಪ್ರಮಾಣದ ಹಣ ಮತ್ತು ಅಗತ್ಯ ದಾಖಲೆಗಳು ಇದ್ದವು.

ಆದಾಗ್ಯೂ, ಸ್ಥಳೀಯ ಪ್ರವಾಸೋದ್ಯಮ ಪೊಲೀಸರ ತ್ವರಿತ ಕ್ರಮದಿಂದ ಕಳೆದುಹೋದ ಪರ್ಸ್‌ ಅನ್ನು ಕೆಲವೇ ಗಂಟೆಗಳೊಳಗೆ ಸಿಕ್ಕಿದ್ದು, ದಂಪತಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ತಾಜ್ ಮಹಲ್‌ಗೆ ಭೇಟಿ ನೀಡಿದ ದಂಪತಿ ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ತಾವು ಏರಿದ ಆಟೋರಿಕ್ಷಾದಲ್ಲಿ ಪರ್ಸ್ ಅನ್ನು ಮರೆತು ಬಿಟ್ಟಿದ್ದರು. ಇದರಿಂದ ಕಂಗಾಲಾದ ಅವರು ಸ್ಥಳೀಯ ಪ್ರವಾಸೋದ್ಯಮ ಪೊಲೀಸರನ್ನುಸಂಪರ್ಕಿಸಿದ್ದು, ಪರ್ಸ್‌ನಲ್ಲಿ ಸಾವಿರಾರು ರೂಪಾಯಿ ಮತ್ತು ಪ್ರಮುಖ ಗುರುತಿನ ಪತ್ರಗಳಿರುವುದು ಸೇರಿದಂತೆ ಸಂಪೂರ್ಣ ವಿವರಗಳನ್ನು ತಿಳಿಸಿದ್ದರು.

ಕೂಡಲೇ ಪೊಲೀಸರು ಆಗ್ರಾ ಕಂಟೋನ್ಮೆಂಟ್ ಮತ್ತು ತಾಜ್ ಮಹಲ್ ನಡುವಿನ ಮಾರ್ಗದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆಟೋ-ರಿಕ್ಷಾವನ್ನು ಪತ್ತೆಹಚ್ಚಿ ಯಶಸ್ವಿಯಾಗಿ ಪರ್ಸ್‌ ಅನ್ನು ದಂಪತಿಗೆ ಹಿಂದಿರುಗಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read