alex Certify KSRTC | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲು ಸಾಲು ರಜೆ: ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ: KSRTCಯಿಂದ 2000 ಹೆಚ್ಚುವರಿ ಬಸ್

ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುವುದು. ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ 2000ಕ್ಕೂ ಅಧಿಕ ಬಸ್ ಗಳನ್ನು Read more…

ಇನ್ನು ರಾತ್ರಿ ಪಾಳಿ, ದೂರದ ಮಾರ್ಗಗಳ KSRTC ಚಾಲಕರಿಗೆ ಕನಿಷ್ಠ 9 ಗಂಟೆ ವಿಶ್ರಾಂತಿ

ಬೆಂಗಳೂರು: ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಚಾಲಕರನ್ನು ಕರ್ತವ್ಯಕ್ಕೆ ಕಳುಹಿಸುವ ಮೊದಲು ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಸೂಚನೆ Read more…

ಚಾಲಕರು ಮದ್ಯಪಾನ ಮಾಡುವುದನ್ನು ತಡೆಯಲು KSRTC ಯಿಂದ ಉಸಿರು ತಪಾಸಣೆ

ಬೆಂಗಳೂರು: ಕರ್ತವ್ಯದ ಸಂದರ್ಭದಲ್ಲಿ ಚಾಲಕರು ಮದ್ಯಪಾನ ಮಾಡುವುದನ್ನು ತಡೆಯಲು ಕೆಎಸ್ಆರ್ಟಿಸಿಯಿಂದ ನಿಯಮಿತವಾಗಿ ಚಾಲನಾ ಸಿಬ್ಬಂದಿಯ ಉಸಿರು ತಪಾಸಣೆ ಮಾಡಲು ನಿರ್ಧರಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ಗಳಿಂದ ಉಂಟಾಗುವ ಅಪಘಾತಗಳಿಗೆ ಚಾಲನಾ Read more…

BIG NEWS: ಬಸ್ ಚಾಲಕರಿಗೆ ಹೆಚ್ಚುವರಿ ಡ್ಯೂಟಿಯಿಂದ ಮುಕ್ತಿ ನೀಡಿದ KSRTC; ಮಹತ್ವದ ಆದೇಶ

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಿಗೆ ಕೊಂಚ ನಿರಾಳ ಸುದ್ದಿ. ಈ ಹಿಂದೆ ಇದ್ದ ಡಬಲ್ ಡ್ಯೂಟಿ ಅನಿವಾರ್ಯತೆಗೆ ಬ್ರೇಕ್ ಹಾಕಲಾಗಿದ್ದು, ವಿಶ್ರಾಂತಿ ಕಡ್ಡಾಯಗೊಳಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು ಈ Read more…

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ರಾಜ್ಯ ರಸ್ತೆ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ಬೆಂಗಳೂರು: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ SSLC ವಾರ್ಷಿಕ ಪರೀಕ್ಷೆ Read more…

ಮಹಿಳಾ ಕಂಡಕ್ಟರ್ ಗಳಿಗೆ KSRTC ಅಧಿಕಾರಿಗಳಿಂದ ಕಿರುಕುಳ; ಸಿಎಂ ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆದು ದೂರು

ಬೆಂಗಳೂರು: ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ ಕೆ ಎಸ್ ಆರ‍್ ಟಿಸಿ ಅಧಿಕಾರಿಗಳು ಮಹಿಳಾ ಕಂಡಕ್ಟರ್ ಗಳಿಗೆ ಹಗಲು ರಾತ್ರಿ ಶ್ರಮಿಸುವಂತೆ Read more…

KSRTC ಸಿಬ್ಬಂದಿಗೆ ಗುಡ್ ನ್ಯೂಸ್: ಇನ್ನು ಕಿರುಕುಳ ತಡೆಗೆ ರಜೆ, ಹಾಜರಾತಿ ಆನ್ಲೈನ್ HRMS ವ್ಯವಸ್ಥೆ

ಬೆಂಗಳೂರು: ಕೆಎಸ್ಆರ್ಟಿಸಿ ವಿಭಾಗ, ಘಟಕಗಳಲ್ಲಿ ಸಿಬ್ಬಂದಿಗೆ ರಜೆ ನೀಡುವ ವಿಚಾರದಲ್ಲಿ ಆಗುತ್ತಿರುವ ಕಿರುಕುಳ ತಪ್ಪಿಸಲು ಹೆಚ್.ಆರ್.ಎಂ.ಎಸ್.(ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಜಾರಿಗೆ ತರಲಾಗಿದೆ. ಈ ಮೂಲಕ ಸಿಬ್ಬಂದಿ ಇನ್ನು Read more…

KSRTC ಬಸ್ ಡಿಕ್ಕಿ: ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಸೈಕಲ್ ಸವಾರ ಸ್ಥಳದಲ್ಲೇ ಸಾವು

ಚಾಮರಾಜನಗರ: ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ಘಟನೆ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಕೊಳ್ಳೇಗಾಲದ Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: 100 ಹೊಸ ಅಶ್ವಮೇಧ ಕ್ಲಾಸಿಕ್ KSRTC ಬಸ್ ಗಳಿಗೆ ಸಿಎಂ ಚಾಲನೆ; ಬಸ್ ನಲ್ಲಿರುವ ವ್ಯವಸ್ಥೆಗಳೇನು?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 100 ಹೊಸ ಅಶ್ವಮೇಧ ಕ್ಲಾಸಿಕ್ ಬಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಗಳ ಮೇಲೆ Read more…

ಮಕರ ಸಂಕ್ರಾಂತಿ ಹಬ್ಬ: ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು; KSRTC ಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು: ಈ ಬಾರಿ ಮಕರ ಸಂಕ್ರಮಣ ಹಬ್ಬಕ್ಕೆ ಸಾಲು ಸಾಲು ರಜೆಗಳು ಸಿಕ್ಕಿವೆ. ಹಾಗಾಗಿ ಹಬ್ಬಕ್ಕೆ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ Read more…

KSRTC ಬಸ್ ಟಿಕೆಟ್ ದರ ಹೆಚ್ಚಳ: ಹೆಚ್ಚಿಗೆ ಪಡೆದ 1 ರೂ. ಅಪಘಾತ ವಿಮೆಗೆ ಬಳಕೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಗಳಲ್ಲಿ ಜನವರಿ 1ರಿಂದ 50 ರೂಪಾಯಿ ಮೇಲ್ಪಟ್ಟು ಟಿಕೆಟ್ ಖರೀದಿಸುವ ಪ್ರಯಾಣಿಕರಿಂದ ಒಂದು ರೂಪಾಯಿ ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿಯಾಗಿ Read more…

ಉತ್ತರ ಕರ್ನಾಟಕ ಪ್ರಯಾಣಿಕರಿಗೆ ಸಾರಿಗೆ ಸಚಿವರಿಂದ ಗುಡ್ ನ್ಯೂಸ್: 884 ಹೊಸ ಬಸ್ ಖರೀದಿ

ಹುಬ್ಬಳ್ಳಿ: ಬೆಂಗಳೂರು ಹೊರತು ಪಡಿಸಿದರೆ ಹುಬ್ಬಳ್ಳಿಯ ಬಸ್ ನಿಲ್ದಾಣವು ದೊಡ್ಡದಾಗಿದೆ. ಈ ಜಾಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಈಗ 1 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್ : ‘KSRTC’ ಯಿಂದ ಶೀಘ್ರವೇ ‘ಕ್ಯಾಶ್ ಲೆಸ್’ ಟಿಕೆಟಿಂಗ್ ವ್ಯವಸ್ಥೆ ಜಾರಿ

ಬೆಂಗಳೂರು : ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ( KSRTC)   ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಕ್ಯಾಶ್ ಲೆಸ್ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಿದೆ. ಈಗಾಗಲೇ ಈ ವ್ಯವಸ್ಥೆಗಳು Read more…

ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: 2024 ಪ್ರಯಾಣಿಕ ಸ್ನೇಹಿ ವರ್ಷ; ಕೆಎಸ್ಆರ್ಟಿಸಿಯಿಂದ ಹಲವು ಯೋಜನೆ ಜಾರಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು 2024ನ್ನು ಪ್ರಯಾಣಿಕ ಸ್ನೇಹಿ ವರ್ಷ ಎಂದು ಘೋಷಿಸಿದೆ. ಪ್ರತಿವರ್ಷವನ್ನು ಒಂದೊಂದು ಉದ್ದೇಶ ಇಟ್ಟುಕೊಂಡು Read more…

KSRTC ಬಸ್ ನಿಲ್ದಾಣಾಧಿಕಾರಿ ಸಸ್ಪೆಂಡ್

ತುಮಕೂರು: ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಾಧಿಕಾರಿಯನ್ನು ಕರ್ತವ್ಯ ಲೋಪ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ. ಶಿವಕುಮಾರ್ ಅಮಾನತುಗೊಂಡಿರುವ ಬಸ್ ನಿಲ್ದಾಣಾಧಿಕಾರಿ. ಶಿವಕುಮಾರ್ ವಿರುದ್ಧ ಕೆಳಹಂತದ ಸಿಬ್ಬಂದಿಗಳಿಗೆ ಕಿರುಕುಳ, ಲಂಚಕ್ಕೆ ಬೇಡಿಕೆ ಇಟ್ಟ Read more…

ಹೊಸ ವರ್ಷಕ್ಕೆ ಚಾಲಕರು, ನಿರ್ವಾಹಕರಿಗೆ ಗುಡ್ ನ್ಯೂಸ್: ಎಲ್ಲಾ ಕೇಸ್ ವಜಾ

ಬೆಂಗಳೂರು: ಹೊಸ ವರ್ಷಕ್ಕೆ ಚಾಲಕರು, ನಿರ್ವಾಹಕರಿಗೆ ಕೆಎಸ್ಆರ್ಟಿಸಿ ಸಿಹಿ ಸುದ್ದಿ ನೀಡಿದೆ. ಚಾಲಕರು, ನಿರ್ವಾಹಕರ ಮೇಲಿನ ಕೇಸ್ ಗಳನ್ನು ಖುಲಾಸೆಗೊಳಿಸಲಾಗಿದೆ. ಬಿಎಂಟಿಸಿಗೆ 25ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಈ Read more…

ಗುಜರಿಗೆ ಹಾಕಿದ ಬಸ್ ಓಡಿಸುವಂತಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಗುಜರಿಗೆ ಹಾಕಿದ ಬಸ್ ಗಳನ್ನು ಸಂಚಾರಕ್ಕೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಗುಜರಿಗೆ ಸೇರಿದ ಬಸ್ ಗಳನ್ನು ಕೆಎಸ್ಆರ್ಟಿಸಿ ಮತ್ತೆ ಸಂಚಾರಕ್ಕೆ ಬಳಸಬಾರದು. ಸದೃಢತೆ Read more…

BIG NEWS: ಪ್ರಯಾಣಿಕನಿಗೆ ಲಾಠಿಯಿಂದ ಥಳಿಸಿ ಎದೆಗೆ ಒದ್ದ KSRTC ಸಿಬ್ಬಂದಿ; FIR ದಾಖಲು

ಬೆಂಗಳೂರು: ಟಿಕೆಟ್ ಸಮಸ್ಯೆ ಬಗ್ಗೆ ಪ್ರಯಾಣಿಕರೊಬ್ಬರು ಹೇಳಲು ಮುಂದಾಗಿದ್ದ ವೇಳೆ ಕೆ ಎಸ್ ಆರ್ ಟಿಸಿ ಸಿಬ್ಬಂದಿ ಅಮಾನುಷವಾಗಿ ನಡೆದುಕೊಂಡಿದ್ದು, ಲಾಠಿಯಿಂದ ಹೊಡೆದು, ಎದೆಗೆ ಒದ್ದಿರುವ ಘಟನೆ ಬೆಂಗಳೂರಿನಲ್ಲಿ Read more…

ಕ್ರಿಸ್ ಮಸ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ‘KSRTC’ ಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು : ಕ್ರಿಸ್ಮಸ್ ಹಬ್ಬಕ್ಕೆ ಊರಿಗೆ ಹೊರಟವರಿಗೆ KSRTC ಗುಡ್ ನ್ಯೂಸ್ ನೀಡಿದ್ದು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಇಂದಿನಿಂದ ಡಿ.25 ರವರೆಗೆ ವಿವಿಧ Read more…

‘ಕ್ರಿಸ್ಮಸ್’ ಹಬ್ಬಕ್ಕೆ ಊರಿಗೆ ಹೊರಟವರಿಗೆ ಇಲ್ಲಿದೆ ಗುಡ್ ನ್ಯೂಸ್

ಡಿಸೆಂಬರ್ 25ರ ಸೋಮವಾರದಂದು ಕ್ರಿಸ್ಮಸ್ ಹಬ್ಬವಿದೆ. ಸೋಮವಾರ ರಜೆ ಇರುವ ಕಾರಣಕ್ಕಾಗಿ ಶುಕ್ರವಾರ ಸಂಜೆಯಿಂದಲೇ ಬಹುತೇಕರು ಊರಿಗೆ ಹೊರಡಲು ತಯಾರಾಗುತ್ತಾರೆ. ಅಂಥವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ Read more…

ಗಮನಿಸಿ : ಡಿ.26 ರಿಂದ ‘KSRTC’ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಪರೀಕ್ಷೆ : ಇಂದು ಕರಪತ್ರ ಬಿಡುಗಡೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿತಾಂತ್ರಿಕ ಸಹಾಯಕ ಹುದ್ದೆಯ ಅರ್ಹ ಅಭ್ಯರ್ಥಿಗಳಿಗೆ ಡಿ.26ರಿಂದ ಡಿ.28ರವರೆಗೆ ಪರೀಕ್ಷೆ ನಡೆಯಲಿದ್ದು, ಇಂದು ಕರಪತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. Read more…

BIG NEWS : ‘ಸಾರಿಗೆ ಇಲಾಖೆ’ ಆದಾಯ ಹೆಚ್ಚಿಸಲು ಸರ್ಕಾರದಿಂದ ಹೊಸ ಪ್ಲ್ಯಾನ್ : ಡಿ.23 ರಿಂದ ‘KSRTC’ ಕಾರ್ಗೊ ಸೇವೆ ಆರಂಭ

ಬೆಂಗಳೂರು : ತನ್ನ ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಯಾದ ಕೆಎಸ್ಆರ್ಟಿಸಿ ಇದೇ ಮೊದಲ ಬಾರಿಗೆ ಲಾರಿ ಖರೀದಿ ಮಾಡುತ್ತಿದ್ದು, ಡಿಸೆಂಬರ್ 23 ರಿಂದ Read more…

ಯಾವುದೇ ಭ್ರಷ್ಟಾಚಾರ ಸಹಿಸಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಸಿದ್ಧರಾಮಯ್ಯ

ಗದಗ: ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಗದಗದಲ್ಲಿ ಸುದ್ದಿಗಾರರೊಂದಿಗೆ Read more…

‘KSRTC’ ನಮ್ಮದು ಎಂದಿದ್ದ ಕೇರಳಕ್ಕೆ ಹಿನ್ನಡೆ: ಕರ್ನಾಟಕಕ್ಕೆ ಜಯ

ಬೆಂಗಳೂರು: KSRTC ಹೆಸರು ಬಳಕೆ ವಿವಾದದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಜಯ ಸಿಕ್ಕಿದೆ. KSRTC ಹೆಸರು ಬಳಕೆಗೆ ಕೇರಳ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ Read more…

ಫೆಬ್ರವರಿ ಒಳಗೆ 5500 ಬಸ್, 9000 ಕಂಡಕ್ಟರ್, ಮೆಕಾನಿಕ್ ಹುದ್ದೆಗಳ ಭರ್ತಿ: ರಾಮಲಿಂಗಾರೆಡ್ಡಿ

ಬೆಳಗಾವಿ(ಸುವರ್ಣಸೌಧ): ಮುಂದಿನ ಮೂರು ತಿಂಗಳಲ್ಲಿ ಸಾರಿಗೆ ನಿಗಮಗಳಿಗೆ ಹೊಸದಾಗಿ 5,500 ಬಸ್ ಸೇರ್ಪಡೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಶಶಿಲ್ Read more…

KSRTC ಗೆ ‘Global Sustainability Leadership’ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) Global Sustainability Leadership’ ಪ್ರಶಸ್ತಿಗೆ ಭಾಜನವಾಗಿದೆ. ಕೆಎಸ್ಸಾರ್ಟಿಸಿ ಗೆ World Sustainability Congress ನಿಂದ ನೀಡಲಾಗುವ “Global Read more…

BREAKING : ಮಂಡ್ಯದಲ್ಲಿ ಘೋರ ಘಟನೆ : ‘KSRTC’ ಬಸ್ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು

ಮಂಡ್ಯ : ಮಂಡ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಗೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ನ ಹಿಂಬದಿ Read more…

ಒಂದೇ ಆಧಾರ್ ಕಾರ್ಡ್ ನಲ್ಲಿ ಇಬ್ಬರು ಮಹಿಳೆಯರ ಉಚಿತ ಪ್ರಯಾಣ

ಹುಬ್ಬಳ್ಳಿ: ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಹೀಗಿದ್ದರೂ ಮಹಿಳೆಯರಿಬ್ಬರು ಒಂದೇ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಹುಬ್ಬಳ್ಳಿಯ Read more…

ಮಂತ್ರಾಲಯಕ್ಕೆ ಉಚಿತ ಬಸ್ ಸೇವೆ ವಿಸ್ತರಿಸಲು ಸುಬುಧೇಂದ್ರ ಶ್ರೀ ಮನವಿ

ಕೊಪ್ಪಳ: ಕರ್ನಾಟಕ ಮತ್ತು ತೆಲಂಗಾಣ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಆರಂಭಿಸಿರುವ ಉಚಿತ ಪ್ರಯಾಣ ಬಸ್ ಸೇವೆ ನೀಡುವ ಯೋಜನೆಯನ್ನು ಮಂತ್ರಾಲಯದವರೆಗೂ ವಿಸ್ತರಿಸಬೇಕು ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ Read more…

ಎರಡು ‘KSRTC’ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ : 30 ಶಬರಿಮಲೆ ಯಾತ್ರಾರ್ಥಿಗಳಿಗೆ ಗಾಯ

ಪಥನಂತಿಟ್ಟ : ಕೇರಳದ ಪಥನಂತಿಟ್ಟ ಜಿಲ್ಲೆಯ ಪಂಬಾ ಬಳಿ ಶುಕ್ರವಾರ ಮುಂಜಾನೆ ಎರಡು ಕೆಎಸ್ಆರ್ಟಿಸಿ (ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...