alex Certify ವೈರಲ್ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುವಂತಿದೆ ಗಿನ್ನೆಸ್‌ ವಿಶ್ವದಾಖಲೆಯ ಈ ವಿಡಿಯೋ

ಗಿನ್ನೆಸ್​ ವರ್ಲ್ಡ್ ರೆಕಾರ್ಡ್​ನಲ್ಲಿ ಹೆಸರು ನಮೂದಾಗುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲಿ ಮಾಡುವ ದಾಖಲೆಗಳು ಒಂದೊಂದೂ ಒಂದೊಂದು ರೀತಿಯಲ್ಲಿ ವಿಸ್ಮಯ ಮೂಡಿಸುತ್ತದೆ. ಅಂಥದ್ದರಲ್ಲಿ ಒಂದು ಡೆನ್ಮಾರ್ಕ್‌ನ ಲಾರ್ಸ್ ಆಂಡರ್ಸನ್ Read more…

ರಸ್ತೆ ಮಧ್ಯೆಯೇ ಒಂದೇ ನಿಮಿಷದಲ್ಲಿ ನಡೆಯಿತು ಪ್ಲಾಸ್ಟಿಕ್​ ಸರ್ಜರಿ: ಈ ಪವಾಡವನ್ನು ನೀವೂ ಒಮ್ಮೆ ನೋಡಿಬಿಡಿ

ಟಿ.ವಿ ಧಾರಾವಾಹಿಗಳು ಇಂದಿನ ಹೆಚ್ಚಿನ ಜನರ ಅದರಲ್ಲಿಯೂ ಮಹಿಳೆಯರ ಅವಿಭಾಜ್ಯ ಅಂಗವಾಗಿದೆ. ದಿನಪೂರ್ತಿ ಧಾರಾವಾಹಿಗಳನ್ನು ಬಯ್ಯುತ್ತಲೇ ಒಂದು ದಿನವೂ ಮಿಸ್​ ಮಾಡಿಕೊಳ್ಳುವುದಿಲ್ಲ. 8-10 ವರ್ಷ ಎಳೆಯುತ್ತಲೇ ಧಾರಾವಾಹಿ ಸಾಗಿದರೂ, Read more…

30ರ ದಶಕದಲ್ಲಿಯೇ ಮಹಿಳೆಯ ಕೈಯಲ್ಲಿತ್ತಾ ಮೊಬೈಲ್​ಫೋನ್​…..? ವೈರಲ್​ ಫೋಟೋ ಕಂಡು ನಿಬ್ಬೆರಗಾಗುತ್ತಿರುವ ಜನ

ನ್ಯೂಯಾರ್ಕ್​: ಲ್ಯಾಂಡ್​ಲೈನ್​ನಿಂದ ಸ್ಮಾರ್ಟ್​ಫೋನ್​ ವರೆಗೆ ಕೆಲವೇ ದಶಕಗಳಲ್ಲಿ ಆಗಿರುವ ಬದಲಾವಣೆ ಅಷ್ಟಿಷ್ಟಲ್ಲ. ಆದರೆ ​30 ರ ದಶಕದಲ್ಲಿ ಮಹಿಳೆಯೊಬ್ಬರು ವೈರ್‌ಲೆಸ್ ಫೋನ್ ಬಳಸಿದ್ದರಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. Read more…

ಮದುವೆಗೆ ಬರುವವರು 24 ಸಾವಿರ ರೂ. ನೀಡೋದು ಕಡ್ಡಾಯ…! ವಧು ಇಟ್ಟ ಬೇಡಿಕೆ ಕೇಳಿ ದಂಗಾದ ಅತಿಥಿಗಳು

ಜಗತ್ತಿನಲ್ಲಿ ವಿಚಿತ್ರವಾದ ವಿವಾಹ ಪದ್ಧತಿಗಳಿವೆ ಮತ್ತು ಅವು ನಮ್ಮನ್ನು ಬೆರಗುಗೊಳಿಸುತ್ತವೆ. ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಬೆತ್ತ ಅಥವಾ ಒಣಗಿದ ಮೀನಿನಿಂದ ವರನ ಪಾದಗಳಿಗೆ ಹೊಡೆಯುವ ವಿಚಿತ್ರ ಪದ್ಧತಿ ಇದೆ. Read more…

ಚಳಿಗಾಲಕ್ಕೆ ತಯಾರಾಯ್ತು ವಿಚಿತ್ರ ಮಿನಿ ಸ್ಕರ್ಟ್…​! ಬೆಲೆ ಕೇಳಿದ್ರೆ ಹೌಹಾರ್ತಿರಾ…!!

ಇಟಾಲಿಯನ್ ಐಷಾರಾಮಿ ಬಟ್ಟೆ ಕಂಪೆನಿಯಾಗಿರುವ ಡೀಸೆಲ್, ವಿಲಕ್ಷಣ ಬಟ್ಟೆಗಳಿಗೆ ಸಕತ್​ ಫೇಮಸ್​. ಇದೀಗ ಅಂಥದ್ದೇ ವಿಚಿತ್ರ ಬಟ್ಟೆಯೊಂದನ್ನು ಇದು ತಯಾರಿಸಿದ್ದು, ನೆಟ್ಟಿಗರ ಹುಬ್ಬೇರಿಸಿದೆ. ಡೀಸೆಲ್ ಈ ವರ್ಷದ ಆರಂಭದಲ್ಲಿ Read more…

ಮಾಲೀಕನಂತೆ ಜಿಗಿದು ಜಿಗಿದು ಜಾಗಿಂಗ್​ ಮಾಡಿದ ಶ್ವಾನ….! ವಿಡಿಯೋ ವೈರಲ್​

ನಾಯಿಗಳ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. ಅದರಲ್ಲಿಯೂ ಇತ್ತೀಚಿಗೆ ಹೆಚ್ಚು ವೈರಲ್​ ಆಗುತ್ತಿರುವ ಪ್ರಾಣಿ ಎಂದರೆ ಅದು ನಾಯಿ. ತನ್ನ ಮಾಲೀಕ ಹೇಳಿದಂತೆ ಕೇಳುವ ಕ್ಯೂಟ್​ ಎನಿಸುವ ಹಲವಾರು ವಿಡಿಯೋಗಳು Read more…

ಪ್ರೀತಿಯಲ್ಲಿ ಬೀಳೋದಿದ್ರೆ ಹೀಗೆ ಬೀಳಿ, ಇಲ್ಲಾಂದ್ರೆ ವೇಸ್ಟ್​….! ಏನಪ್ಪಾ ಇದು ಅಂತೀರಾ ?

ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಾಯಕ-ನಾಯಕಿಯರನ್ನು ಅಸಹಜವಾಗಿ ತೋರಿಸುವುದು ಸಾಮಾನ್ಯ. ನಿಜ ಜೀವನದಲ್ಲಿ ಆಗದ ಸಾಹಸಮಯ ದೃಶ್ಯಗಳನ್ನು ಅವರು ಮಾಡುತ್ತಾರೆ, ಇದು ರೀಲ್​ ಎಂದು ತಿಳಿದಿದ್ದರೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, Read more…

ಜಪಾನ್ ವಿದ್ಯಾರ್ಥಿಗಳಿಂದ ‘ಶುದಾನ್ ಕೌಡೌ’: ವೈರಲ್​ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ಅತ್ಯಂತ ನವೀನ ತಂತ್ರಜ್ಞಾನಗಳನ್ನು ರಚಿಸುವುದರಿಂದ ಹಿಡಿದು ಅತ್ಯಂತ ಹೃದಯಸ್ಪರ್ಶಿ ಚಲನಚಿತ್ರಗಳನ್ನು ತಯಾರಿಸುವವರೆಗೆ ಜಪಾನ್​ ದೇಶವನ್ನು ಮೀರಿಸುವವರು ಇಲ್ಲ. ಆಟೋಟಗಳು ಹಾಗೂ ಮಕ್ಕಳಲ್ಲಿ ಶಿಸ್ತಿನ ವಿಷಯ ಬಂದಾಗಲೂ ಜಪಾನ್​ ಸದಾ Read more…

ಬರಿಯ ಕಡಲತೀರವಲ್ಲವಯ್ಯಾ…… ಹೂವಿನ ತೋಟ….. ಒಡಿಶಾದ ಕಣ್ಮನ ಸೆಳೆಯುವ ಬೀಚ್​ ಫೋಟೋ ವೈರಲ್​

ಒಡಿಶಾ: ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಲವಾರು ಕುತೂಹಲಕರವಾಗಿರುವ ವಿಡಿಯೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿದ್ದು, ಅವುಗಳು ಸಾಕಷ್ಟು ವೈರಲ್​ ಆಗುತ್ತಿವೆ. ಇದೀಗ ಒಡಿಶಾದ ಸಮುದ್ರ ತೀರಗಳ ಸುಂದರ Read more…

ಹೆಂಗಸರು ಕಿತ್ತಾಡ್ತಿದ್ರೆ ಅದನ್ನು ನೋಡಲು ನಾಯಿಗೂ ಇಷ್ಟು ಕುತೂಹಲನಾ ? ಎಂದೂ ನೋಡಿರದ ವಿಡಿಯೋ ವೈರಲ್….​!

ಎಲ್ಲೋ ಜಗಳದ ಸದ್ದು ಕೇಳ್ತಿರುವ ಸಂದರ್ಭದಲ್ಲಿ ಇಣುಕಿ ಇಣುಕಿ ನೀಡುವುದು ಮನುಷ್ಯ ಸಹಜ ಗುಣ. ಕಾಂಪೌಂಡ್​ ಆಚೆ ಮಹಿಳೆಯರು ಕಚ್ಚಾಡುತ್ತಿದ್ದರಂತೂ ಹಲವರಿಗೆ ಕುತೂಹಲವನ್ನು ತಡೆಯಲಿಕ್ಕೆ ಆಗುವುದಿಲ್ಲ. ಹೇಗಾದರೂ ಮಾಡಿ Read more…

20 ವರ್ಷಗಳ ಕಾಲ ಪ್ರತಿದಿನವೂ ಮಗಳ ವಿಡಿಯೋ ಮಾಡಿದ ತಂದೆ; ಇದಲ್ಲವೇ ಅದ್ಭುತ ಬಾಂಧವ್ಯವೆಂದ ನೆಟ್ಟಿಗರು

ಚಿಕ್ಕಮಕ್ಕಳು ಹೇಗೆ ಬೆಳೆಯುತ್ತಾರೆ ಎಂದು ಗೊತ್ತೇ ಆಗದಷ್ಟು ವೇಗದಲ್ಲಿ ಬೆಳೆಯುತ್ತಿರುತ್ತಾರೆ. ಈಗಂತೂ ಮಕ್ಕಳ ಫೋಟೋಶೂಟ್​, ವಿಡಿಯೋ ಎಲ್ಲವೂ ತೀರಾ ಮಾಮೂಲು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಸ್ವಲ್ಪ ಭಿನ್ನವಾಗಿ Read more…

ಕಂಠಪೂರ್ತಿ ಕುಡಿದಿದ್ದ ಯುವತಿಯರಿಂದ ನಡುರಸ್ತೆಯಲ್ಲೇ ಬಿಗ್‌ ಫೈಟ್; ವಿಡಿಯೋ ವೈರಲ್

ಇಂದೋರ್​ (ಮಧ್ಯಪ್ರದೇಶ): ಈಗಂತೂ ಮದ್ಯಪಾನ, ಡ್ರಗ್ಸ್​ ಸೇವನೆ ಎಂದರೆ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಆಧುನಿಕತೆಯ ಸೋಗಿನಲ್ಲಿ ಮಹಿಳೆಯರು ಬೇಡದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಇಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ನಾಲ್ವರು Read more…

ಮುದ್ದಾದ ನಾಯಿಗಳ ಕ್ಯೂಟ್​ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿ-ಪಕ್ಷಿಗಳ ಒಡನಾಟವೇ ಒಂದು ರೀತಿಯ ರೋಚಕ ಅನುಭವಗಳನ್ನು ನೀಡುತ್ತದೆ. ಅದರಲ್ಲಿಯೂ ಸಾಕು ಪ್ರಾಣಿಗಳಿಗೂ ಮನುಷ್ಯರಿಗೂ ಇರುವುದು ಅವಿನಾಭಾವ ಸಂಬಂಧ. ಎಷ್ಟೋ ಸಂದರ್ಭಗಳಲ್ಲಿ ಮನುಷ್ಯರು ಮಾಡದ ಸಾಹಸ ಕಾರ್ಯವನ್ನು ಸಾಕುಪ್ರಾಣಿಗಳು Read more…

ಗುರಿ ಸ್ಪಷ್ಟವಾಗಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎನ್ನುವ ಈ ಬಾಲೆಯ ಸಾಹಸವನ್ನೊಮ್ಮೆ ನೋಡಿ

ಕಷ್ಟಗಳು ಎದುರಾದಾಗ, ಇಚ್ಛಾಶಕ್ತಿಯು ಅದನ್ನು ಹಿಮ್ಮೆಟ್ಟಿಸುವಷ್ಟು ಶಕ್ತಗೊಳಿಸುತ್ತದೆ ಎಂಬ ಮಾತಿಗೆ ಅನ್ವಯ ಆಗುವಂಥ ಅದ್ಭುತ ವಿಡಿಯೋ ಒಂದು ವೈರಲ್​ ಆಗಿದೆ. ಗುರಿ ಸಾಧನೆ ಮಾಡಬೇಕು ಎಂದರೆ ಯಾವ ಕಷ್ಟಗಳೂ Read more…

ಹಿಮಪಾತದ ʼಸೌಂದರ್ಯʼ ಸವಿಯಬೇಕೆ ? ಹಾಗಿದ್ದರೆ ಕಾಶ್ಮೀರದ ಈ ಜಾಗಕ್ಕೆ ಬನ್ನಿ ಎನ್ನುತ್ತಿದ್ದಾರೆ ಪ್ರವಾಸಿಗರು

ನೀವು ಪರ್ವತವನ್ನು ಪ್ರೀತಿಸುತ್ತಿದ್ದು, ಮರಗಳ ಮೂಲಕ ಹಿಮಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬೇಕು ಎನಿಸಿಕೊಂಡಿದ್ದರೆ ಈ ಜಾಗಕ್ಕೊಮ್ಮೆ ಬನ್ನಿ. ಹಿಮಪಾತದಿಂದ ಹಲವು ಬಾರಿ ಸ್ಥಳೀಯರ ಬದುಕು ದುಸ್ಥರವಾಗುತ್ತಿದ್ದರೂ ಪ್ರವಾಸಿಗರಿಗೆ ಕಾಶ್ಮೀರ ಎಂದರೆ Read more…

ಅಡುಗೆ ಮನೆಯಲ್ಲಿ ಹೆಬ್ಬಾವುಗಳ ಮಿಲನ: ಬೆಚ್ಚಿಬಿದ್ದ ಮಹಿಳೆ

ಸ್ಕೂಟರ್​ ಒಳಗೆ, ಕಾರಿನೊಳಗೆ, ಮಂಚದ ಒಳಗೆ ಹೀಗೆ ನಾಗರಹಾವುಗಳ ಇತ್ತೀಚೆಗೆ ಬೆಚ್ಚಗಿನ ಜಾಗ ಹುಡುಕಿ ಬರುವುದು ಮಾಮೂಲಾಗಿಬಿಟ್ಟಿದೆ. ನಾಗರಹಾವುಗಳೆಂದರೆ ಕನಸಿನಲ್ಲಿಯೂ ಬೆಚ್ಚಿಬೀಳುವ ಸಂದರ್ಭ ಇದ್ದಾಗ ಒಂದಲ್ಲ, ಎರಡು ಹೆಬ್ಬಾವುಗಳನ್ನು Read more…

ಹುಲಿ ಮರಿಗಳು ಅಪ್ಪಿ ಮುದ್ದಾಡುತ್ತಿರೋ ಮಹಿಳೆ: ನೋಡುಗರ ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಪ್ರಾಣಿ ಮತ್ತು ಮನುಷ್ಯರ ಸಂಬಂಧ ಕುತೂಹಲಕಾರಿಯಾದದ್ದು. ಪ್ರಾಣಿಗಳು ಸಾಕುಪ್ರಾಣಿಗಳೇ ಆಗಿರಬೇಕೆಂದೇನು ಇಲ್ಲ, ವನ್ಯಜೀವಿಗಳೂ ತಮ್ಮ ಮಾಲೀಕರ ಮೇಲೆ ಅಷ್ಟೇ ಪ್ರೀತಿ, ಸಲುಗೆ ಹೊಂದಿರುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಈ ದಾರಿಯಲ್ಲಿ ಹೋಗಲು ಮಾತ್ರವಲ್ಲ, ವಿಡಿಯೋ ನೋಡಲೂ ಧೈರ್ಯ ಬೇಕು…..! ಚಾಲಕನಿಗೊಂದು ಸಲಾಂ

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಚಂಬಾದಿಂದ ಕಿಲ್ಲರ್ ರಸ್ತೆಯಲ್ಲಿ ಅಪಾಯಕಾರಿಯಾದ ಬಸ್ ಪ್ರಯಾಣದ ವಿಡಿಯೋ ಒಂದು ವೈರಲ್​ ಆಗಿದ್ದು, ಉಸಿರು ಬಿಗಿ ಹಿಡಿದು ನೋಡುವಂತಿದೆ. ಈ ವಿಡಿಯೋ ನೋಡುವಾಗ Read more…

Viral Video: ʼಚುರಾಕೆ ದಿಲ್​ ಮೇರಾʼ ಹಾಡಿಗೆ ಎರಡು ವರ್ಷದ ಪುಟಾಣಿಯಿಂದ ನಾರ್ವೇಯನ್​ ಸ್ಟೈಲ್​ ನೃತ್ಯ

ನಾರ್ವೇಯನ್ ನೃತ್ಯ ತಂಡ, ಕ್ವಿಕ್ ಸ್ಟೈಲ್ ಬಗ್ಗೆ ಹೆಚ್ಚಿನವರು ಕೇಳಿರಬಹುದು. ವಿವಿಧ ರೀತಿಯ ಹಾಡುಗಳಿಗೆ ತಮ್ಮದೇ ಆದ ಕೋರಿಯೋಗ್ರಫಿ ಮಾಡುವ ಈ ತಂಡ ಜಗತ್ಪ್ರಸಿದ್ಧಿಯನ್ನು ಹೊಂದಿದೆ. ಕೆಲವೊಮ್ಮೆ ಹುಚ್ಚುಚ್ಚಾಗಿ Read more…

ಮಗಳನ್ನು ಕಾಲೇಜಿಗೆ ಬಿಡುವಾಗ ಅಪ್ಪನ ಕಣ್ಣೀರ ಕೋಡಿ; ಭಾವುಕ ವಿಡಿಯೋ ವೈರಲ್​

ಮಗಳನ್ನು ಹೊಸ ಕಾಲೇಜಿಗೆ ಬಿಡುವಾಗ ತಂದೆಯೊಬ್ಬರು ಕಣ್ಣೀರು ಹಾಕುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗಳು ಪ್ರೇಕ್ಷಾ ಕೆಲವು ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ Read more…

3.7 ಕೋಟಿ ರೂ. ಐಷಾರಾಮಿ ಬಂಗಲೆ ಕೇವಲ 277 ರೂಪಾಯಿಗೆ ಲಭ್ಯ…! ಇದರಲ್ಲಿದೆ ಒಂದು ಟ್ವಿಸ್ಟ್

ಲಂಡನ್​: ಅದೃಷ್ಟ ಯಾರಿಗೆ, ಹೇಗೆ, ಯಾವ ಸಮಯದಲ್ಲಿ ಲಭಿಸುತ್ತದೆ ಎಂದು ಹೇಳುವುದು ಕಷ್ಟ.‌ ಲಾಟರಿಯಿಂದಾಗಿ ಕಡು ಬಡವನು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಈಗ ಸುಮಾರು 3.7 ಕೋಟಿ Read more…

ಲೋಕಲ್​ ಟ್ರೇನ್​ನಲ್ಲಿ ನೂಕುನುಗ್ಗಲು: ಬಾಗಿಲು ಹಾಕಲಾಗದೇ ಪರದಾಡುತ್ತಿರುವ ಪೊಲೀಸ್; ವಿಡಿಯೋ ವೈರಲ್​

ಸಾರಿಗೆ ವ್ಯವಸ್ಥೆ ಎಷ್ಟೇ ಇದ್ದರೂ ಜನಸಂಖ್ಯೆ ಬೆಳೆದಂತೆಲ್ಲಾ ವಾಹನಗಳಲ್ಲಿ ಜನರು ತುಂಬಿ ತುಳುಕುವುದು ಮಹಾನಗರಗಳಲ್ಲಿ ಸಾಮಾನ್ಯವಾಗಿದೆ. ಕೆಲವೊಮ್ಮೆ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಪ್ರಯಾಣ ಮಾಡುವುದೂ ಇದೆ. ಅಂಥದ್ದೇ ಒಂದು Read more…

ಚಾಕ್​ಪೀಸ್​ನಿಂದ ಬೋರ್ಡ್​ ಮೇಲೆ ಮೂಡಿ ಬಂದ ಅದ್ಭುತ ಕಲಾಕೃತಿ: ವೈರಲ್​ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ವಿವಿಧ ಕಲಾಕೃತಿಗಳನ್ನು ಕಾಣುತ್ತೇವೆ. ಪೇಂಟ್‌ಬ್ರಷ್‌ಗಳಿಂದ ಪೆನ್ಸಿಲ್‌ಗಳವರೆಗೆ, ಕಲಾವಿದರು ತಮ್ಮ ಮೇರುಕೃತಿಗಳನ್ನು ರಚಿಸುತ್ತಾರೆ. ಭಿನ್ನ ಭಿನ್ನ ಎನ್ನುವಂಥ, ಅಚ್ಚರಿ ಮೂಡಿಸುವ ಕಲಾಕೃತಿಗಳನ್ನು ರಚಿಸುತ್ತಾರೆ. ಅಂಥವುಗಳಲ್ಲಿ Read more…

ರೀಲ್ಸ್​ ಮಾಡುವ ಮೊದಲೇ ವೈರಲ್​ ಆದ ಯುವತಿ….! ಡಾನ್ಸ್​ ಮಾಡಲು ಕೈಎತ್ತುತ್ತಿದ್ದಂತೆಯೇ ಆಗಿದ್ದೇನು ನೋಡಿ…..!

ರೀಲ್ಸ್​ ಹುಚ್ಚು ಇಂದು ಹಲವು ಯುವಕ-ಯುವತಿಯರಿಗೆ ಅಂಟಿಕೊಂಡಿದೆ. ಏನಾದರೊಂದು ಮಾಡಿ ರೀಲ್ಸ್​ ರೂಪದಲ್ಲಿ ಅದನ್ನು ಶೇರ್​ ಮಾಡಿಕೊಂಡು ಒಂದಿಷ್ಟು ಲೈಕ್ಸ್​, ಕಮೆಂಟ್​ ಗಳಿಸುವ ಆಸೆ. ಇದೇ ಕಾರಣಕ್ಕೆ ಥಹರೇವಾರಿ Read more…

ಅಪರೂಪದಲ್ಲಿ ಅಪರೂಪದ ಘಟನೆ: ಬಾಡಿಗೆ ತಾಯ್ತನದ ಮೂಲಕ ಮಗನ ಮಗುವಿಗೆ ಜನ್ಮ ನೀಡಿದ ಮಹಿಳೆ….!

ಬೇರೆಯವರ ಮಗುವನ್ನು ತಾನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನ್ಮ ನೀಡುವ ಬಾಡಿಗೆ ತಾಯ್ತನ ಶುರುವಾಗಿ ಹಲವು ವರ್ಷಗಳೇ ಕಳೆದಿವೆ. ಇಂಥ ಘಟನೆಗಳಲ್ಲಿ ಸಾಕಷ್ಟು ರೋಚಕ ಎನಿಸುವ ಘಟನೆಗಳೂ ನಡೆಯುತ್ತವೆ. ಅಂಥದ್ದರಲ್ಲಿ Read more…

ಭಾರತದ ಕೊನೆಯ ಟೀ ಷಾಪ್​ಗೂ ಬಂತು ಡಿಜಿಟಲ್​ ಪೇಮೆಂಟ್​: ಆನಂದ್​ ಮಹೀಂದ್ರಾ ಟ್ವೀಟ್​

ಉತ್ತರಾಖಂಡ: ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪಾವತಿಗಳು ಭಾರಿ ಬೆಳವಣಿಗೆಯನ್ನು ಕಂಡಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂಗಡಿಗಳು UPI ನಂತಹ ಡಿಜಿಟಲ್ ಪಾವತಿ Read more…

ಸಿನಿಮಾದಲ್ಲಿ ನಾಯಕಿಯನ್ನು ನಾಯಕ ಎತ್ತುವಂತೆ ಪತ್ನಿಯೊಂದಿಗೆ ಅನುಕರಿಸಲು ಹೋದ ಪತಿಗಾಯ್ತು ಫಜೀತಿ ! ವಿಡಿಯೋ ವೈರಲ್​

ಸಂಗೀತ ಮತ್ತು ನೃತ್ಯಕ್ಕೆ ಮನಸೋಲದವರು ಬಹಳ ಕಮ್ಮಿ ಎಂದೇ ಹೇಳಬೇಕು. ಅದರಲ್ಲಿಯೂ ಹಲವು ನವ ವಿವಾಹಿತರಿಗೆ ಜೋಡಿಯಲ್ಲಿ ನೃತ್ಯ ಮಾಡುವುದೆಂದರೆ ತುಂಬಾ ಖುಷಿ. ಸಿನಿಮಾದಲ್ಲಿ ನಾಯಕಿ, ನಾಯಕ ಮಾಡುವಂತೆ Read more…

ಸಿಂಹದ ವಿಡಿಯೋ ಮಾಡಲು ಹೋದಾಗ ಆಗಿದ್ದೇನು ಗೊತ್ತಾ ? ನಗು ತರಿಸುತ್ತೆ ಈ ದೃಶ್ಯ

ತ್ರಿಪುರಾ: ಸೆಲೆಬ್ರಿಟಿಗಳು, ಕ್ರೀಡಾ ಪಟುಗಳು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳನ್ನು ಕಂಡಾಗ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಹಾಗೂ ಸೆಲ್ಫೀಗಾಗಿ ಮುಗಿಬೀಳುವವರು ಬಹಳ ಮಂದಿ. ಅದೇ ರೀತಿ ಮೃಗಾಲಯದಲ್ಲಿದ್ದ ಸಿಂಹದ ವಿಡಿಯೋ Read more…

ವಿಶ್ವದ ಅತಿ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣ: ಆರು ಸೀಟು ತೆಗೆದುಹಾಕಿದ ಏರ್​ಲೈನ್ಸ್​

ವಿಶ್ವದ ಅತಿ ಎತ್ತರದ ಮಹಿಳೆ ಎನಿಸಿರುವ ರುಮೇಸಾ ಗೆಲ್ಗಿ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಈಕೆಗಾಗಿ ಎಕಾನಮಿ ಕ್ಲಾಸ್‌ ವಿಮಾನದಲ್ಲಿ 6 ಸೀಟ್‌ಗಳನ್ನು ತೆಗೆದುಹಾಕಬೇಕಾಯಿತು ! Read more…

ಮದ್ಯ ಪ್ರಿಯರಿಗೂ ಇಷ್ಟವಾಗುತ್ತೆ ಗೋವಾದ ಈ ಚಹಾ; ಇದಕ್ಕೆ ಮಿಕ್ಸ್‌ ಮಾಡೋದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಾ…!

ಪಣಜಿ: ಸುಂದರವಾದ ಕಡಲತೀರಗಳು, ಆಲಂಕಾರಿಕ ರೆಸ್ಟೋರೆಂಟ್‌ಗಳ ಜತೆ ಮದ್ಯದ ರಾಜ್ಯ ಎಂದಾಕ್ಷಣ ನೆನಪಾಗುವುದು ಗೋವಾ. ಇಲ್ಲಿ ಮದ್ಯಕ್ಕೆ ವಿಶೇಷ ಆದ್ಯತೆ ಇದ್ದು, ಅದನ್ನು ಸವಿಯುವುದಕ್ಕಾಗಿಯೇ ದೇಶ-ವಿದೇಶಗಳಿಂದ ಜನರು ಬರುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...