Tag: ಟಾಟಾ ಮೋಟಾರ್ಸ್‌

ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು ಉದ್ಘಾಟಿಸಿದ ʼಟಾಟಾ ಮೋಟಾರ್ಸ್ʼ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಕೋಲ್ಕತ್ತಾದಲ್ಲಿ ತಮ್ಮ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು (ಆರ್ ವಿ ಎಸ್ ಎಫ್) ಉದ್ಘಾಟಿಸಿದೆ. ಈ ಅತ್ಯಾಧುನಿಕ ಘಟಕವು ಟಾಟಾ ಕಂಪನಿಯು ಈ ದೇಶದಲ್ಲಿ ಹೊಂದಿರುವ ಎಂಟನೇ ವಾಹನ ಸ್ಕ್ರ್ಯಾಪಿಂಗ್ ಘಟಕವಾಗಿದೆ. 'ರೀ.ವೈ.ರ್ – ರೀಸೈಕಲ್ ವಿತ್ ರೆಸ್ಪೆಕ್ಟ್' ಎಂಬ ಹೆಸರಿನ ಈ ಅತ್ಯಾಧುನಿಕ ಘಟಕವು ವರ್ಷಕ್ಕೆ 21,000 ಜೀವಿತಾವಧಿ ಮುಗಿದ ವಾಹನಗಳನ್ನು ಸುಸ್ಥಿರವಾಗಿ ಮತ್ತು ಸುರಕ್ಷಿತವಾಗಿ ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಘಟಕವನ್ನು ಟಾಟಾ ಮೋಟಾರ್ಸ್‌ ನ ಪಾಲುದಾರ ಸಂಸ್ಥೆಯಾದ ಸೆಲ್ಲಡೇಲ್ ಸಿನರ್ಜೀಸ್ ಇಂಡಿಯಾ ಪ್ರೈ. ಲಿಮಿಟೆಡ್ ನಿರ್ವಹಿಸಲಿದ್ದು, ಇದು ಎಲ್ಲಾ ಬ್ರಾಂಡ್‌ ಗಳ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಕೂಡ ಸ್ಕ್ರ್ಯಾಪ್ ಮಾಡಲಿದೆ. ರೀ.ವೈ.ರ್ ಘಟಕವನ್ನು ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಸಚಿವ ಸ್ನೇಹಾಸಿಸ್ ಚಕ್ರವರ್ತಿ ಉದ್ಘಾಟಿಸಿದರು. ಕೋಲ್ಕತ್ತಾದ ಮೇಯರ್ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಗರಾಭಿವೃದ್ಧಿ ಮತ್ತು ಪೌರ ವ್ಯವಹಾರಗಳ ಸಚಿವ ಫಿರ್ಹಾದ್ ಹಕೀಂ ಈ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು. ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಸೌಮಿತ್ರ ಮೋಹನ್, ಐಎಎಸ್ ಮತ್ತು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ರಾಜೇಶ್ ಕೌಲ್ ಉಪಸ್ಥಿತರಿದ್ದರು. ಅವರೆಲ್ಲರ ಜೊತೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಾಟಾ ಮೋಟಾರ್ಸ್‌ ನ ಗಣ್ಯರು ಭಾಗವಹಿಸಿದ್ದರು. ಈ ಘಟಕ ಉದ್ಘಾಟನೆಯ ಮೂಲಕ ಟಾಟಾ ಕಂಪನಿಯು ಇದೀಗ ಕೋಲ್ಕತ್ತಾ, ಜೈಪುರ, ಭುವನೇಶ್ವರ, ಸೂರತ್, ಚಂಡೀಗಢ, ದೆಹಲಿ ಎ ಸಿ ಆರ್, ಪುಣೆ ಮತ್ತು ಗುವಾಹಟಿಯಲ್ಲಿ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಹೊಂದಿದಂತಾಗಿದೆ. ಕೋಲ್ಕತ್ತಾದ ಘಟಕವು ಪೂರ್ವ ಭಾರತದಲ್ಲಿನ ಮೂರನೇ ರೀ.ವೈ.ರ್ ಘಟಕವಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಿದೆ.