ಟಿ ಟ್ವೆಂಟಿ ವಿಶ್ವಕಪ್: ನಾಳೆ ಮೊದಲ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಲಿವೆ ದಕ್ಷಿಣ ಆಫ್ರಿಕಾ ಹಾಗೂ ಆಫ್ಘಾನಿಸ್ತಾನ

ಈ ಬಾರಿಯ t20 ವಿಶ್ವಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗಿದ್ದು, ಭರ್ಜರಿ ಮನರಂಜನೆ ನೀಡಿವೆ. ಟ್ವೆಂಟಿ ವಿಶ್ವಕಪ್ ಇನ್ನೇನು ಕೊನೆಯ ಘಟ್ಟ ತಲುಪಿದ್ದು, ನಾಲ್ಕು ತಂಡಗಳು ಫೈನಲ್ ಗಾಗಿ ಭರ್ಜರಿ ಹೋರಾಟ  ನಡೆಸಲಿವೆ.

ನಾಳೆ ಟಿ20 ವಿಶ್ವಕಪ್ನ ಮೊದಲ ಸೆಮಿ ಫೈನಲ್ ನಡೆಯಲಿದ್ದು, ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗುತ್ತಿವೆ.

ಅಫ್ಘಾನಿಸ್ತಾನ ತಂಡ ಟಿ20 ವಿಶ್ವಕಪ್ನ ಸೆಮಿ ಫೈನಲ್ ಗೆ ಪ್ರವೇಶಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಆಸ್ಟ್ರೇಲಿಯಾ ತಂಡವೇ ಸೆಮಿ ಫೈನಲ್ ನಿಂದ ಹೊರ ಬಿದ್ದಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿದೆ.

ಪ್ರತಿ ಬಾರಿಯೂ ಚೋಕರ್ಸ್ ಎಂದೆ ಕರೆಸಿಕೊಳ್ಳುವ ದಕ್ಷಿಣ ಆಫ್ರಿಕಾ ತಂಡ  ಈ ಬಾರಿಯಾದರೂ t20 ವಿಶ್ವಕಪ್ ಗೆದ್ದು ಇದರಿಂದ ಹೊರಬರಲಿದೆಯಾ ಕಾದು ನೋಡಬೇಕಾಗಿದೆ. ಇನ್ನು ಅಫ್ಘಾನಿಸ್ತಾನ ತಂಡ ಇವರನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿದರೆ ಮತ್ತೊಂದು ಇತಿಹಾಸ ಬರೆಯಬಹುದಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read