T20 World Cup : ಟೀಂ ಇಂಡಿಯಾಕ್ಕೆ ಖುಷಿ ಸುದ್ದಿ, ಫಿಟ್ ಆದ ಸ್ಟಾರ್ ಆಟಗಾರ

ಸದ್ಯ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಆಡ್ತಿರುವ ಭಾರತಕ್ಕೆ ಖುಷಿ ಸುದ್ದಿಯೊಂದಿದೆ. ಭಾರತ ತಂಡದ ಅನೇಕ ದೊಡ್ಡ ಆಟಗಾರರು ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಆದ್ರೆ ಇಂಗ್ಲೆಂಡ್‌ ಟೆಸ್ಟ್‌ ಸರಣಿ ನಂತ್ರ ನಡೆಯುವ ಟಿ20 ವಿಶ್ವಕಪ್ ನಲ್ಲಿ ಆಟಗಾರರು ವಾಪಸ್‌ ಆಗುವ ಸಾಧ್ಯತೆ ದಟ್ಟವಾಗಿದೆ.

ತಂಡದಿಂದ ಹೊರಗಿರುವ ದೀಪಕ್ ಚಾಹರ್ ಬಗ್ಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ದೀಪಕ್ ಫಿಟ್ ಆಗಿದ್ದು, ಮೈದಾನಕ್ಕೆ ಮರಳಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ವರದಿ ಮಾಡಲಾಗಿದೆ. ಡಿಸೆಂಬರ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ 20 ಸರಣಿಯಲ್ಲಿ ದೀಪಕ್‌ ಆಡಿದ್ದರು. ನಂತ್ರ ಅವರು ತಂಡದಿಂದ ಹೊರಗುಳಿದಿದ್ದರು. ವೈಯಕ್ತಿಕ ಕಾರಣದಿಂದ ಅವರು ತಂಡಕ್ಕೆ ಮರಳಿರಲಿಲ್ಲ. ಈಗ ಅವರು ಆಟಕ್ಕೆ ಸಿದ್ಧರಾಗಿದ್ದಾರೆ. ಆದ್ರೆ ಟಿ 2೦ ವಿಶ್ವಕಪ್‌ ಮೊದಲು ಯಾವುದೇ ಟಿ2೦ ಪಂದ್ಯಗಳಿಲ್ಲ. ಹಾಗಾಗಿ ತಮ್ಮನ್ನು ತಾವು ಸಾಭೀತುಪಡಿಸಿಕೊಳ್ಳುವ ಅಗತ್ಯ ದೀಪಕ್‌ ಅವರಿಗಿದೆ. ಇದೇ ಕಾರಣಕ್ಕೆ ಅವರು ಸದ್ಯ ಎನ್‌ಸಿಎಯಲ್ಲಿ ಅಭ್ಯಾಸ ಆರಂಭಿಸಿದ್ದು, ಐಪಿಎಲ್ 2024 ಮತ್ತು ಟಿ20 ವಿಶ್ವಕಪ್ ಗೆ ಸಿದ್ಧರಾಗ್ತಿದ್ದಾರೆ.

ದೀಪಕ್‌ ಅಲ್ಲದೆ, ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್, ವೇಗಿ ಮೊಹಮ್ಮದ್ ಶಮಿ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read