ಟಿ ಟ್ವೆಂಟಿ ಟ್ರೈ ಸೀರೀಸ್ ನಾಳೆ ನೇಪಾಳ ಮತ್ತು ನೆದರ್ಲ್ಯಾಂಡ್ ನಡುವಣ ಫೈನಲ್ ಪಂದ್ಯ

ಅಂತರಾಷ್ಟ್ರೀಯ ಟಿ ಟ್ವೆಂಟಿ ವಿಶ್ವಕಪ್ ಗೆ ಅವಕಾಶ ಪಡೆದುಕೊಳ್ಳಲು ಸಣ್ಣ ಪುಟ್ಟ ತಂಡಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದು, ಯಾವ ಹೊಸ ತಂಡಗಳು  ಸೇರ್ಪಡೆಯಾಗಲಿವೆ ಇನ್ನೇನು ಶೀಘ್ರದಲ್ಲೇ ಇದಕ್ಕೆ ತೆರೆ ಬೀಳಲಿದೆ. ನಮೀಬಿಯಾ ಸೇರಿದಂತೆ ಐರ್ಲೆಂಡ್, ಸ್ಕಾಟ್ಲೆಂಡ್, ಜಿಂಬಾಂಬೆ, ನೆದರ್ಲ್ಯಾಂಡ್,  ತಂಡ ಐಸಿಸಿ ಟಿ20 ರಾಂಕಿಂಗ್ ನಲ್ಲಿ ಒಳ್ಳೆಯ ರೇಟಿಂಗ್ ನಲ್ಲಿದ್ದು,ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಸ್ಥಾನ ಪಡೆದುಕೊಳ್ಳಲು ಹೋರಾಟ ನಡೆಸುತ್ತಿವೆ.

ನೇಪಾಳದಲ್ಲಿ ನಡೆಯುತ್ತಿರುವ ಟಿ ಟ್ವೆಂಟಿ ಟ್ರೈ ಸಿರೀಸ್ ಸಾಕಷ್ಟು ಮನರಂಜನೆ ನೀಡಿದ್ದು, ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಬಲಿಷ್ಠ ನಮೀಬಿಯಾ ತಂಡ ಈಗಾಗಲೇ ಫೈನಲ್ ಕನಸನ್ನು ನುಚ್ಚುನೂರು  ಮಾಡಿಕೊಂಡಿದೆ.

ನಾಳೆ ಫೈನಲ್ ನಲ್ಲಿ ನೇಪಾಳ ಹಾಗೂ ನೆದರ್ಲ್ಯಾಂಡ್ ಮುಖಾಮುಖಿಯಾಗುತ್ತಿದ್ದು, ನೇಪಾಳ ತಂಡ ತನ್ನ ಓಂ ಗ್ರೌಂಡ್ ನಲ್ಲಿ ಟ್ರೋಫಿ ಎತ್ತಿ ಹಿಡಿಯಲಿದೆಯಾ ಕಾದು ನೋಡಬೇಕಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read