ದಂಗಾಗಿಸುತ್ತೆ ಸ್ವಿಗ್ಗಿಯ ವಾರ್ಷಿಕ ವರದಿ: ಒಂದೇ ವರ್ಷದಲ್ಲಿ ಬರೋಬ್ಬರಿ 42.3 ಲಕ್ಷ ರೂ. ಮೌಲ್ಯದ ಫುಡ್ ಆರ್ಡರ್ ಮಾಡಿದ್ದಾರೆ ಈ ವ್ಯಕ್ತಿ….!

ಮನೆಯಲ್ಲಿ ಅಡುಗೆ ಮಾಡದವರು, ಕಚೇರಿಯಲ್ಲಿ ಕೆಲಸ ಮಾಡುವವರು ಒಂದು ವೇಳೆ ಮನೆಯಿಂದ ಲಂಚ್ ಬಾಕ್ಸ್ ತಂದಿಲ್ಲದಿದ್ದಾಗ ಅಥವಾ ಬ್ಯಾಚುಲರ್ಸ್ ತಕ್ಷಣ ಊಟಕ್ಕಾಗಿ ಆನ್ ಲೈನ್ ನಲ್ಲಿ ಬುಕ್ ಮಾಡ್ತಾರೆ.

ಇಂತವರಿಗಾಗಿಯೇ ಅನ್ ಲೈನ್ ನಲ್ಲಿ ಆಹಾರ ವಿತರಣಾ ಸೇವೆ ನೀಡುವ ಹಲವು ಅಪ್ಲಿಕೇಷನ್ ಗಳಿವೆ. ಇವುಗಳಲ್ಲಿ ಒಂದಾದ ಸ್ವಿಗ್ಗಿ ತನ್ನ ವಾರ್ಷಿಕ ವರದಿಯಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವ ವಿಷಯವೊಂದನ್ನ ಬಹಿರಂಗಪಡಿಸಿದೆ.

ಅದೇನೆಂದರೆ, ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ನ ವಾರ್ಷಿಕ ವರದಿಯ ಪ್ರಕಾರ, ಮುಂಬೈ ನಿವಾಸಿಯೊಬ್ಬರು ಬರೋಬ್ಬರಿ 42.3 ಲಕ್ಷ ರೂಪಾಯಿ ಮೌಲ್ಯದ ಆಹಾರವನ್ನು ಈ ವರ್ಷವೊಂದರಲ್ಲಿ ಆರ್ಡರ್ ಮಾಡಿದ್ದಾರೆ. ಇದು ಓರ್ವ ವ್ಯಕ್ತಿಯ ಸಿಟಿಸಿ ಮೊತ್ತಕ್ಕಿಂತಲೂ ಹೆಚ್ಚು ಎನ್ನುವುದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

2023 ಕೊನೆಗೊಳ್ಳುತ್ತಿದ್ದು ಸ್ವಿಗ್ಗಿ ತನ್ನ ವಾರ್ಷಿಕ ಆಹಾರ ವಿತರಣಾ ವರದಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಆನ್ ಲೈನ್ ನಲ್ಲಿ ಹೆಚ್ಚು ಆರ್ಡರ್ ಮಾಡಿದ ಫುಡ್ ನಲ್ಲಿ ಬಿರಿಯಾನಿ ಅಗ್ರ ಸ್ಥಾನದಲ್ಲಿದೆ. ಈ ಮೂಲಕ ಬಿರಿಯಾನಿ ದೇಶದ ಅತ್ಯಂತ ಪ್ರೀತಿಯ ಖಾದ್ಯವಾಗಿ ಹೊರಹೊಮ್ಮಿದೆ. ಪ್ರತಿಸೆಕೆಂಡಿಗೆ 2.5 ಬಿರಿಯಾನಿ ಆರ್ಡರ್ ಮಾಡಲಾಗಿದ್ದು ಇದು ಮತ್ತೊಮ್ಮೆ ಜನರ ಫೇವರಿಟ್ ಖಾದ್ಯವಾಗಿದೆ ಅನ್ನೋದು ಸಾಬೀತಾಗಿದೆ.

ವರದಿಯ ಚಾರ್ಟ್‌ನಲ್ಲಿ ಕೇಕ್, ಗುಲಾಬ್ ಜಾಮೂನ್ ಮತ್ತು ಪಿಜ್ಜಾಗಳಂತಹ ಭಕ್ಷ್ಯಗಳು ಆರ್ಡರ್ ಮಾಡಿರುವ ಆಹಾರಗಳ ಪೈಕಿ ಅಗ್ರಸ್ಥಾನದಲ್ಲಿವೆ.

ಹೈದರಾಬಾದ್ ಆಹಾರ ಪ್ರಿಯರೊಬ್ಬರು ಬಿರಿಯಾನಿ ಪ್ರಿಯರಾಗಿ ಹೊರಹೊಮ್ಮಿದ್ದಾರೆ. ಅವರು ವರ್ಷದಲ್ಲಿ ಒಟ್ಟು 1,633 ಬಿರಿಯಾನಿ ಖಾದ್ಯವನ್ನು ಆರ್ಡರ್ ಮಾಡಿದ್ದಾರೆ. ಅಂದರೆ ಪ್ರತಿ ದಿನ ಸರಾಸರಿ ನಾಲ್ಕು ಪ್ಲೇಟ್‌ಗಳಿಗಿಂತ ಹೆಚ್ಚು.

ಮಾಂಸಾಹಾರಿ ಆಹಾರ ಪಟ್ಟಿಯಲ್ಲಿ ಚಿಕನ್ ಬಿರಿಯಾನಿ ಅಗ್ರಸ್ಥಾನದಲ್ಲಿದ್ದರೆ, ಸಸ್ಯಾಹಾರಿಗಳು ಪ್ರತಿ ಸೆಕೆಂಡ್ ಗೆ 5.5 ವೆಜ್-ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ. ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ವೇಳೆ ಬಿರಿಯಾನಿ ಹೆಚ್ಚು ಆರ್ಡರ್ ಪಡೆದಿದ್ದನ್ನ ಉಲ್ಲೇಖಿಸಲಾಗಿದೆ.

ಚಂಡೀಗಢದ ಕುಟುಂಬವೊಂದು ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಒಂದೇ ಬಾರಿಗೆ 70 ಪ್ಲೇಟ್‌ ಬಿರಿಯಾನಿ ಆರ್ಡರ್ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read