‘ಕಿರುತೆರೆ’ ಪ್ರೇಕ್ಷಕರಿಗೆ ಸಿಹಿಸುದ್ದಿ : ಬಿಗ್ ಬಾಸ್-10 ಆರಂಭಕ್ಕೆ ಮುಹೂರ್ತ ಫಿಕ್ಸ್, ಯಾರೆಲ್ಲಾ ಇದ್ದಾರೆ..?

ಕಿರುತೆರೆ ಪ್ರೇಕ್ಷಕರಿಗೆ ಸಿಹಿಸುದ್ದಿ..ಕುತೂಹಲದಿಂದ ಕಾಯುತ್ತಿರುವ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-10 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಹೌದು, ಬಿಗ್ ಬಾಸ್ ಕನ್ನಡ ಸೀಸನ್ 10 ಅಕ್ಟೋಬರ್ 8, 2023 ರಿಂದ ಪ್ರಸಾರವಾಗಲಿದೆ. ಮುಂಬರುವ ಸೀಸನ್ ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸಲು ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್ ಅನ್ನು ಹೊಂದಿರುತ್ತದೆ. ಭಾರಿ ಡ್ರಾಮಾ ಮತ್ತು ವಿವಾದಗಳಿಗೆ ಹೆಸರುವಾಸಿಯಾದ ಈ ಕಾರ್ಯಕ್ರಮವು ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಸರಣಿಗಳಲ್ಲಿ ಒಂದಾಗಿದೆ. ಅಕ್ಟೋಬರ್ 8 ರಿಂದ ಬಿಗ್ ಬಾಸ್ ಕನ್ನಡ 10 ಆರಂಭವಾಗಲಿದ್ದು, ಕಾರ್ಯಕ್ರಮದ ಪ್ರೋಮೋ ವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

ಈ ಬಾರಿ ಹೊಸ ಸೀಸನ್ನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ‘ಗೀತಾ’ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ, ‘ಲಕ್ಷಣ’ ಧಾರಾವಾಹಿ ನಟಿ ಸುಕೃತಾ ನಾಗ್, ಜೊತೆಜೊತೆಯಲಿ ಧಾರವಾಹಿ ಖ್ಯಾತಿಯ ಮೇಘಾ ಶೆಟ್ಟಿ, ಡಾ. ಬ್ರೋ ಅವರ ಹೆಸರುಗಳು ಕೂಡ ಪ್ರಮುಖವಾಗಿ ಕೇಳಿಬಂದಿವೆ.ನಾಗಿಣಿ 2 ಖ್ಯಾತಿಯ ನಟಿ ನಮ್ರತಾ ಗೌಡ , ಹುಚ್ಚ ಚಿತ್ರದ ನಾಯಕಿ ರೇಖಾ , ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್, ಸೋಶಿಯಲ್ ಮೀಡಿಯಾ ಸ್ಟಾರ್  ಭೂಮಿಕಾ ಬಸವರಾಜ್, ಸೇರಿದಂತೆ ಹಲವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಾರೆ ಎಂಬುದನ್ನು ಅಧಿಕೃತವಾಗಿ ತಿಳಿಯಬೇಕಾದರೆ ಅಕ್ಟೋಬರ್ 8 ರವರೆಗೂ ನೀವು ಕಾಯಲೇಬೇಕು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read