FB ಗೆಳೆಯನ ಮದುವೆಯಾಗಲು ಸ್ವೀಡನ್​ನಿಂದ ಭಾರತಕ್ಕೆ ಬಂದ ಯುವತಿ

ಲಖನೌ: ಪ್ರೀತಿಗೆ ಯಾವುದೇ ಗಡಿ ಇಲ್ಲ. ಹೇಗೆ, ಯಾವಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳುವುದೇ ಕಷ್ಟ. ಅಂಥದ್ದೇ ಒಂದು ಪ್ರೇಮ ಕಥನ ಇಲ್ಲಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಅದು ಪ್ರೀತಿಗೆ ತಿರುಗಿರುವ ಸ್ಟೋರಿ ಇದು. ಫೇಸ್​ಬುಕ್​ ಗೆಳೆಯನ ಕೈ ಹಿಡಿಯಲು ಸ್ವಿಡನ್‌ನಿಂದ ಉತ್ತರ ಪ್ರದೇಶಕ್ಕೆ ಯುವತಿ ಬಂದಿದ್ದಾಳೆ..

ಪ್ರೀತಿಸಿದ ಯುವಕನನ್ನು ಪಡೆಯಲು ಭಾರತಕ್ಕೆ ಬಂದಿರುವ ಈ ಯುವತಿ ಇಲ್ಲಿ ಪ್ರಿಯಕರನ ಜೊತೆ ಮದುವೆಯಾಗಿದ್ದಾಳೆ.

ಉತ್ತರ ಪ್ರದೇಶದ ಇಟಾಹ್‌ ಮೂಲದ ಯುವಕನನ್ನು ಸ್ವೀಡನ್ ಯುವತಿ ಫೇಸ್‌ಬುಕ್‌ನಲ್ಲಿ ಪ್ರೀತಿಸಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾಳೆ. ಇವರಿಬ್ಬರೂ 10 ವರ್ಷದಿಂದ ಫೇಸ್‌ಬುಕ್‌ನಲ್ಲಿ ಫ್ರೆಂಡ್ಸ್​. ಕೊನೆಗೂ ಇಬ್ಬರು ಮದುವೆಯಾಗಲು ತೀರ್ಮಾನಿಸಿ ಉತ್ತರಪ್ರದೇಶದಲ್ಲಿ ಸಪ್ತಪದಿ ತುಳಿದಿದ್ದಾರೆ.

ಪವನ್ ಕುಮಾರ್ ಡೆಹ್ರಾಡೂನ್‌ನಲ್ಲಿ ಬಿ.ಟೆಕ್ ಮುಗಿಸಿ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದು‌,  ಅವಘರ್‌ನ ಪ್ರೇಮಾದೇವಿ ಶಾಲೆಯಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಮಕ್ಕಳ ಸಂತೋಷದಲ್ಲಿ ನಮ್ಮ ಸಂತೋಷ ಅಡಗಿದೆ ಎಂದು ವರನ ತಂದೆ ಗೀತಮ್ ಸಿಂಗ್ ಹೇಳಿದ್ದಾರೆ. ಇನ್ನು ಯುವತಿ, ನನಗೆ ಭಾರತ ಅಂದ್ರೆ ತುಂಬಾ ಪ್ರೀತಿ. ಈ ಮದುವೆ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read