³
ಸಮಾಜವಾದಿ ಪಾರ್ಟಿ ನಾಯಕ ಫಹದ್ ಅಹ್ಮದ್‌ರನ್ನು ಮದುವೆಯಾದ ನಾಲ್ಕೇ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಬಾಲಿವುಡ್ ನಟಿ ಸ್ವರಾ ಬಾಸ್ಕರ್ ನೆಟ್ಟಿಗರಿಂದ ಭಾರೀ ಟ್ರೋಲ್‌ಗೆ ತುತ್ತಾಗಿದ್ದಾರೆ.
“ವಿವಾಹವಾದ 4.5 ತಿಂಗಳಲ್ಲಿ ಮಗುವಿಗೆ ಜನ್ಮವಿತ್ತ ಸ್ವರಾ ಭಾಸ್ಕರ್, ಸಮಯಕ್ಕೂ ಮುನ್ನ ಕೆಲಸ ಮಾಡಿ ಮುಗಿಸುವ ವಿಚಾರದಲ್ಲಿ ನಿತಿನ್ ಗಡ್ಕರಿಗೂ ದಾರಿ ತೋರಿದ್ದಾರೆ!” ಎಂದು ರಾಜು ದಾಸ್ ಎಂಬ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್‌ಗೆ ತುತ್ತಾಗುವ ವಿಚಾರ ಸ್ವರಾ ಭಾಸ್ಕರ್‌ಗೆ ಹೊಸ ಅನುಭವವೇನಲ್ಲ. ದೇಶದ ಅನೇಕ ವಿಚಾರಗಳ ಕುರಿತಾಗಿ ತಮ್ಮ ನಿಲುವುಗಳ ಬಗ್ಗೆ ಬಹಳಷ್ಟು ಬಾರಿ ವ್ಯಂಗ್ಯಕ್ಕೀಡಾಗಿದ್ದಾರೆ ಈ ನಟಿ.
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಚಳವಳಿ ಸಂದರ್ಭದಲ್ಲಿ ಫಹಾದ್‌ರನ್ನು ಭೇಟಿಯಾದ ಸ್ವರಾ ಬಳಿಕ ಆತನೊಂದಿಗೆ ಪ್ರೇಮಪಾಶದಲ್ಲಿ ಬಿದ್ದರು. ಜನವರಿ 2023ರಲ್ಲಿ ಕೋರ್ಟ್ ಒಂದಕ್ಕೆ ತಮ್ಮ ಮದುವೆಯ ಪತ್ರಗಳನ್ನು ಸಲ್ಲಿಸಿದ ಇಬ್ಬರೂ ಅಲ್ಲಿಯವರೆಗೂ ತಮ್ಮ ನಡುವಿನ ಸಂಬಂಧವನ್ನು ಗೌಪ್ಯವಾಗಿರಿಸಿದ್ದರು.
https://twitter.com/rajudasji99/status/1663999761647644681?ref_src=twsrc%5Etfw%7Ctwcamp%5Etweetembed%7Ctwterm%5E1663999761647644681%7Ctwgr%5Ee483785f21a4e83f7932def9264ca527076b4226%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fswarabhaskertrolledforgivingbirth4monthsafterherweddingwithfahadahmad-newsid-n505462110