ಬೆಳಗಾವಿ: ರಾಜ್ಯದ ಎರಡನೇ ಶಕ್ತಿಸೌಧ ಬೆಳಗಾವಿ ಸುವರ್ಣವಿಧಾನಸೌಧದ ವಿದ್ಯುತ್ ಬಿಲ್ ನ್ನು ಪಾವತಿಸದೇ ಅಧಿಅಕರಿಗಳು ಬಾಕಿ ಉಳಿಸಿಒಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸುವರ್ಣಸೌಧದ ವಿದ್ಯುತ್ ಬಿಲ್ 1.20 ಲಕ್ಷ ರೂಪಾಯಿಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೆಸ್ಕಾಂ ಇಲಾಖೆಗೆ ಇನ್ನೂ ಪಾವತಿಸಿಲ್ಲ. ಈ ತಿಂಗಳು ಬಾಕಿ ಬಿಲ್ ಪಾವತಿ ಮಾಡದಿದ್ದರೆ ಸುವರ್ಣಸೌಧದ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹೆಸ್ಕಾಂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸುವರ್ಣಸೌಧಕ್ಕೆ ಬಣ್ಣ ಬಳಿಯಲು ಲೋಕೋಪಯೋಗಿ ಇಲಾಖೆ ಸಲ್ಲಿಸಿದ್ದ ೯ ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.