ಹಾಸನ: ಹಾಸನಾಂಬೆ ಉತ್ಸವದ ವೇಳೆ ಕರ್ತವ್ಯಲೋಪ ಆರೋಪದಲ್ಲಿ ಮೂವರು ಅಡುಗೆ ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೆಶ ಹೊರಡಿಸಲಾಗಿದೆ.
ಆನಂದ್, ಪ್ರಸಾದ್.ಹೆಚ್. ಮಧುಕುಮಾರ್ ಅಮಾನತುಗೊಂಡಿರುವ ಅಡುಗೆ ಸಿಬ್ಬಂದಿಗಳು. ಅಕ್ಟೋಬರ್ 13ರಂದು ತೇರಾಪಂಥ ಭವನಕ್ಕೆ ಅಧಿಕಾರಿಗಳು ಊಟಕ್ಕೆ ಬಂದಿದ್ದಾಗ ಗೈರಾಗಿದ್ದ ಹಿನ್ನೆಲೆಯಲ್ಲಿ ಮೂವರು ಅಡುಗೆ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮೂವರು ಅಡಿಗೆ ಸಿಬ್ಬಂದಿ ಗೈರಾಗಿದ್ದರಿಂದ ಲೋಪವುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಆದರೆ ಅಮಾನತು ಆದೇಶಕ್ಕೆ ಮನನೊಂದಿರುವ ಮಧುಕುಮಾರ್, ತಾನು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಾನು ಅಕ್ಟೋಬರ್ 7ರಿಂದ ಅಕ್ಟೋಬರ್ 13ರವರೆಗೂ ಕೆಲಸ ಮಾಡಿದ್ದೇನೆ. ಎಲ್ಲಾ ಜಿಪಿಎಸ್ ಫೋಟೋಗಳು ನಮ್ಮ ಬಳಿ ಇವೆ. ಅಕ್ಟೋಬರ್ 13ರ ರಾತ್ರಿ ಡಿಒ ಸಾಹೇಬರ ಅನಿರೀಕ್ಷಿತ ಭೇಟ್ ವೇಳೆ ನಾನು ಶೌಚಾಲಯಕ್ಕೆ ಹೋಗಿದ್ದೆ. ಹಾಗಾಗಿ ಆ ಸ್ಥಳದಲ್ಲಿ ಇರಲಿಲ್ಲ. ಈಗ ನನ್ನನ್ನೇ ಗುರಿಯಾಗಿಸಿಕೊಂಡು ಅಮಾನತು ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.