ಹೃದಯಾಘಾತದ ಬಳಿಕ ಆಕ್ಷನ್​ ಸೀನ್​ನಲ್ಲಿ ಪಾಲ್ಗೊಂಡ ಸೀಕ್ರೆಟ್​ ರಿವೀಲ್​ ಮಾಡಿದ ಸುಶ್ಮಿತಾ ಸೇನ್​​

ಆರ್ಯ ಸೀರೀಸ್​ನ ಮೂರನೇ ಸೀಸನ್​ನ ಶೂಟಿಂಗ್​ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಬಾಲಿವುಡ್​ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್​, ಹೇಗೆ ತಾವು ಹೃದಯಾಘಾತದ ಬಳಿಕವೂ ಆ್ಯಕ್ಷನ್​ ಸೀನ್​ಗಳಲ್ಲಿ ನಟಿಸುವುದು ಸಾಧ್ಯವಾಯ್ತು ಅನ್ನೋದನ್ನ ರಿವೀಲ್​ ಮಾಡಿದ್ದಾರೆ. ಶೂಟಿಂಗ್​ ಸೆಟ್​​ನಲ್ಲಿ ತಮಗೆ ಎಂತಹ ಒಳ್ಳೆಯ ವಾತಾವರಣವನ್ನು ಕಲ್ಪಿಸಿಕೊಡಲಾಗಿತ್ತು ಎಂಬುದರ ಬಗ್ಗೆಯೂ ಮಾಜಿ ವಿಶ್ವ ಸುಂದರಿ ತಮ್ಮ ಮಾಹಿತಿ ಹಂಚಿಕೊಂಡಿದ್ದಾರೆ.

ಆರ್ಯ ಎಂಬುದು ಶಕ್ತಿಗೆ ಸಮಾನಾರ್ಥಕವಾಗಿದೆ. ಹೃದಯಾಘಾತದ ಬಳಿಕ ಈ ಆ್ಯಕ್ಷನ್​ ಸೀನ್​ಗಳನ್ನೊಳಗೊಂಡ ಪಾತ್ರದಲ್ಲಿ ನಟಿಸುವುದು ಸುಲಭವಾಗಿರಲಿಲ್ಲ. ಆದರೆ ತಮ್ಮ ಚಿಕಿತ್ಸೆಯ ಬಳಿಕ ಸುಶ್ಮಿತಾ ಸೇನ್​ ನೇರವಾಗಿ ಶೂಟಿಂಗ್​ ಸೆಟ್​ಗೆ ಬಂದಿದ್ದರು.

ವಿಶ್ರಾಂತಿಯ ಸಮಯದಲ್ಲಿ ನಾನು ಯಾವಾಗ ಕೆಲಸಕ್ಕೆ ಮರಳುತ್ತೇನೆ ಎಂಬ ಯೋಚನೆಯಲ್ಲಿದ್ದೆ. ನೀವು ಎಲ್ಲಿಯವರೆಗೆ ಸುಮ್ಮನೆ ಕುಳಿತು ಪರಿಸ್ಥಿತಿಯ ಬಗ್ಗೆ ಹೆಚ್ಚು ಅವಲೋಕನೆ ಮಾಡುತ್ತಿರೋ ಅದು ನಿಮ್ಮ ಮನಸ್ಸನ್ನು ಹೆಚ್ಚೆಚ್ಚು ಆವರಿಸುತ್ತದೆ. ಹೀಗಾಗಿ ನಾವು ಸದಾ ಬ್ಯುಸಿಯಾಗಿರಬೇಕು. ನನಗೆ ಜೀವನದಲ್ಲಿ ಮತ್ತೆ ಮುಂದುವರಿಯಲು ವೈದ್ಯರಿಂದ ಗ್ರೀನ್​ ಸಿಗ್ನಲ್​ ಬೇಕಾಗಿತ್ತು.

ನನಗೆ ಹೃದಯಾಘಾತ ಸಂಭವಿಸಿ ಒಂದು ತಿಂಗಳ ಬಳಿಕ ನಾನು ಆಕ್ಷನ್​ ಸೀನ್​ಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ಆದರೆ ನನ್ನಿಂದ ಇದು ಸಾಧ್ಯವಾಗುತ್ತದೆ ಎಂದು ನಂಬಿರಲೇ ಇಲ್ಲ. ನನ್ನ ತಂಡದ ಮೇಲೆ ನನಗಿದ್ದ ನಂಬಿಕೆ ನನ್ನಿಂದ ಈ ಕೆಲಸವನ್ನು ಮಾಡಿಸಿದೆ ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ.

ಈ ಸೀರಿಸ್​ಗೆ ರಾಮ ಮಾಧ್ವನಿ ನಿರ್ದೇಶನ ಮಾಡಿದ್ದಾರೆ ಹಾಗೂ ಅಮಿತಾ ಮಾಧ್ವನಿ ಸಹ ನಿರ್ದೇಶಿಸಿದ್ದಾರೆ. ನವೆಂಬರ್​ ಮೂರರಂದು ಆರ್ಯ 3 ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಪ್ರಸಾರವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read