ಅಚ್ಚರಿ….! ಹೊಟ್ಟೆ ಬೊಜ್ಜು ಕಡಿಮೆ ಮಾಡುತ್ತೆ ವಿಕ್ಸ್‌ ವೇಪರಬ್

ಪ್ರತಿಯೊಬ್ಬರೂ ಫಿಟ್ ಆಗಿರಲು ಬಯಸ್ತಾರೆ. ಅದಕ್ಕಾಗಿ ಏನೆಲ್ಲ ಕಸರತ್ತುಗಳನ್ನು ಮಾಡ್ತಾರೆ. ಜಿಮ್, ವ್ಯಾಯಮ, ಯೋಗ, ಡಯಟ್ ಹೀಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಆದ್ರೆ ಹೊಟ್ಟೆ ಕೊಬ್ಬು ಮಾತ್ರ ಕರಗೋದಿಲ್ಲ. ಹೊಟ್ಟೆ ಕೊಬ್ಬನ್ನು ಕರಗಿಸುವ ಸುಲಭ ಉಪಾಯ ಇಲ್ಲಿದೆ.

ಹೊಟ್ಟೆ ಕೊಬ್ಬು ಕರಗಿಸಲು ಬೇಕಾಗುವ ಸಾಮಗ್ರಿ ವಿಕ್ಸ್ ವೇಪರಬ್ ಮತ್ತು ಸಾಸಿವೆ ಎಣ್ಣೆ. ವಿಕ್ಸ್ ವೇಪರಬ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶೀತ-ನೆಗಡಿ, ತಲೆ ನೋವಿಗೆ ಇದನ್ನು ಹೆಚ್ಚಾಗಿ ಬಳಸ್ತೇವೆ. ಶೀತಕ್ಕೆಂದು ಮನೆಯಲ್ಲಿ ತಂದಿಟ್ಟುಕೊಂಡಿರುವ ವಿಕ್ಸ್ ವೇಪರಬ್ ನಿಂದ ಇನ್ನೊಂದು ಪ್ರಯೋಜನವಿದೆ.

ಸಾಸಿವೆ ಎಣ್ಣೆ ನಮ್ಮ ದೇಹವನ್ನು ಬಿಸಿ ಮಾಡುವ ಕೆಲಸ ಮಾಡುತ್ತದೆ. ಹಾಗೆ ವಿಕ್ಸ್ ನಲ್ಲಿರುವ ಮಿಥೈನ್ ಮತ್ತು ಕರ್ಪೂರ ಕೊಬ್ಬು ಕರಗಿಸುವ ಕೆಲಸ ಮಾಡುತ್ತದೆ. ಮೊದಲು ಒಂದು ಪಾತ್ರೆಗೆ ಸಾಸಿವೆ ಎಣ್ಣೆ ಹಾಗೂ ಒಂದು ಚಮಚ ವಿಕ್ಸ್ ವೇಪರಬ್ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ.

ವ್ಯಾಯಾಮ ಮಾಡುವ ಮೊದಲು ಹೊಟ್ಟೆಗೆ ಇದನ್ನು ಹಚ್ಚಿ. Cling wrap ನಿಂದ ಕಟ್ಟಿ. ಇದ್ರಿಂದ ಮಿಶ್ರಣ ಹೊಟ್ಟೆಯ ಎಲ್ಲ ಭಾಗವನ್ನು ತಲುಪುತ್ತದೆ. ಇದನ್ನು ಹಚ್ಚಿ ವ್ಯಾಯಾಮ ಮಾಡಿದ್ರೆ ಕೆಲವೇ ದಿನಗಳಲ್ಲಿ ಹೊಟ್ಟೆ ಕರಗುತ್ತದೆ. ಒಂದು ವಾರ ಸತತ ಈ ಪ್ರಯೋಗ ಮಾಡಿದ್ರೆ ಒಂದು ಇಂಚು ಹೊಟ್ಟೆ ಕೊಬ್ಬು ಕರಗುತ್ತದೆ. ಮನೆ ಮದ್ದಿನ ಬಗ್ಗೆ ಸಂಶಯವಿರುವವರು ವೈದ್ಯರನ್ನು ಸಂಪರ್ಕಿಸಿ ನಂತ್ರ ಪ್ರಯೋಗ ಮಾಡುವುದು ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read