ಅಮೆರಿಕದಲ್ಲಿ ಮದುವೆಯಾದ ಸೂರತ್‌ ವರ ಹಾಗೂ ಕರ್ನಲ್‌ ವಧುವಿಗೆ ಭಾರತದಿಂದಲೇ ವರ್ಚುವಲ್‌ ಆಗಿ ಹರಸಿದ ಕುಟುಂಬಸ್ಥರು

ತಾಂತ್ರಿಕ ಲೋಕದಲ್ಲಿ ಪ್ರತಿನಿತ್ಯವೂ ಏನಾದರೊಂದು ಸುಧಾರಣೆಗಳು ಆಗುತ್ತಲೇ ಇರುತ್ತವೆ. ಕೋವಿಡ್-19 ಸಾಂಕ್ರಾಮಿಕದ ವೇಳೆ ಈ ವಿಚಾರ ನಮಗೆ ಇನ್ನಷ್ಟು ಸ್ಪಷ್ಟವಾಗಿ ಮನದಟ್ಟಾಗಿದೆ.

ಆನ್ಲೈನ್ ಶಿಕ್ಷಣದಿಂದ ಮಾಸ್ಕ್ ಧರಿಸಿ ಮದುವೆಗಳಾಗುವವರೆಗೂ, ಸಾಂಕ್ರಮಿಕದ ಕಾಲಘಟ್ಟದಲ್ಲಿ ಇಂಥ ಅನೇಕ ಮಾರ್ಪಾಡುಗಳು ನಮ್ಮ ಜೀವನ ಭಾಗಗಳಾಗಿಬಿಟ್ಟಿವೆ.

ಅಮೆರಿಕದಲ್ಲಿ ವಾಸಿಸುತ್ತಿರುವ ಸೂರತ್ತಿನ ವರ ಹಾಗೂ ಹರಿಯಾಣಾದ ಕರ್ನಲ್‌ನ ವಧು, ಅಲ್ಲಿಯೇ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ನೂತನ ವಧೂವರರಿಗೆ ಆಶೀರ್ವದಿಸಲು ಅವರಿಬ್ಬರ ಕುಟುಂಬಗಳೂ ದೂರದ ಊರಿನಿಂದಲೇ ವರ್ಚುವಲ್ ಆಗಿ ಆಶೀರ್ವದಿಸಿವೆ. ನೂತನ ರೀತಿಯಲ್ಲಿ ಜರುಗಿದ ಈ ವಿವಾಹವು ವಧೂವರರ ಊರುಗಳಲ್ಲೆಲ್ಲಾ ವೈರಲ್ ಆಗಿದೆ.

ಮಾರ್ಚ್ 19ರಂದು ಜರುಗಿದ ಈ ಮದುವೆಯನ್ನು ಹರಿಯಾಣಾದ ಸೋನಿಪತ್ ಹಾಗೂ ಕರ್ನಲ್‌ಗಳಲ್ಲಿ ಪರದೆ ಮೇಲೆ ಬಿತ್ತರಿಸಲಾಗಿದೆ. ಮದುಮಗ ಅಮಿತ್‌ ಲಾಕ್ರಾ ಸೋನಿಪತ್‌ನವರಾದರೆ ಮದುಮಗಳು ಆಶು ಕರ್ನಲ್‌ನವರಾಗಿದ್ದಾರೆ. ಇಬ್ಬರೂ ಸದ್ಯ ಅಮೆರಿಕದಲ್ಲಿ ವಾಸಿಸುತ್ತಿದ್ದು, ಕೆಲವೊಂದು ಕಠಿಣ ಪರಿಸ್ಥಿತಿಗಳ ಕಾರಣದಿಂದ ಭಾರತಕ್ಕೆ ಆಗಮಿಸಿ ಮದುವೆ ಆಗಲು ಸಾಧ್ಯವಾಗಿಲ್ಲ.

ಇಬ್ಬರ ಮದುವೆಗೆ ಸಂಪೂರ್ಣ ಸಹಕಾರ ಕೊಟ್ಟ ಗಂಡು-ಹೆಣ್ಣಿನ ಕುಟುಂಬಗಳು ತಮ್ಮ ಮಕ್ಕಳನ್ನು ಡಿಜಿಟಲ್ ಪ್ಲಾಟ್‌ಫಾರಂಗಳಲ್ಲೇ ಮದುವೆ ಮಾಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read