10ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್: ಜೂನಿಯರ್ ಕೋರ್ಟ್ ಅಟೆಂಡೆಂಟ್ ಹುದ್ದೆಗಳಿಗೆ ನೇಮಕಾತಿ

ನವದೆಹಲಿ: ಸುಪ್ರೀಂ ಕೋರ್ಟ್ ಜೂನಿಯರ್ ಕೋರ್ಟ್ ಅಟೆಂಡೆಂಟ್ ಹುದ್ದೆಗಳಿಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಗಳನ್ನು ಅಧಿಕೃತ ವೆಬ್‌ಸೈಟ್, sci.gov.in ಮೂಲಕ ಸಲ್ಲಿಸಬಹುದು.

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಜೂನಿಯರ್ ಕೋರ್ಟ್ ಅಟೆಂಡೆಂಟ್‌ನ ಒಟ್ಟು 80 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ, ಪ್ರಾಯೋಗಿಕ ಟ್ರೇಡ್ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅವರ ಕಾರ್ಯಕ್ಷಮತೆಯನ್ನು ಆಧರಿಸಿ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಗಳಿಗೆ ಕರೆಯಲಾಗುವುದು. ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ಮಾನದಂಡಗಳು ಮತ್ತು ಇತರ ವಿವರಗಳಿಗಾಗಿ ಅಧಿಕೃತ ವೆಬ್ ಸೈಟ್ ಗಮನಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅವರು ಮಾನ್ಯತೆ ಪಡೆದ ಸಂಸ್ಥೆಯಿಂದ ಅಡುಗೆ / ಪಾಕಶಾಲೆಯಲ್ಲಿ ಕನಿಷ್ಠ ಒಂದು ವರ್ಷದ ಡಿಪ್ಲೊಮಾವನ್ನು ಹೊಂದಿರಬೇಕು.

ಅನುಭವ: ಪ್ರತಿಷ್ಠಿತ ಹೋಟೆಲ್/ರೆಸ್ಟೋರೆಂಟ್/ಸರ್ಕಾರಿ ಇಲಾಖೆ/ಅಂಡರ್‌ಟೇಕಿಂಗ್ ಇತ್ಯಾದಿಗಳಲ್ಲಿ ಮೂರು ವರ್ಷಗಳ ಅಡುಗೆ ಅನುಭವ.

ವಯೋ ಮಿತಿ

ಅಭ್ಯರ್ಥಿಗಳು 18 ವರ್ಷ ಮತ್ತು 27 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. SC/ ST/ OBC/ ಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ವೇತನ: ಲೆವೆಲ್ 3 ಪೇ ಮ್ಯಾಟ್ರಿಕ್ಸ್‌ ನಿಯಮಗಳ ಅಡಿಯಲ್ಲಿ ಸ್ವೀಕಾರಾರ್ಹವಾದ ಸಾಮಾನ್ಯ ಭತ್ಯೆಗಳು. HRA ಸೇರಿದಂತೆ ಅಸ್ತಿತ್ವದಲ್ಲಿರುವ ಭತ್ಯೆಗಳ ದರದ ಪ್ರಕಾರ ಅಂದಾಜು ಒಟ್ಟು ವೇತನ ತಿಂಗಳಿಗೆ 46210 ರೂ.

ಪರೀಕ್ಷೆಯ ಮಾದರಿ

ಲಿಖಿತ ಪರೀಕ್ಷೆಯು ವಸ್ತುನಿಷ್ಠ ಪ್ರಕಾರವಾಗಿದ್ದು, ಅದು ಸಾಮಾನ್ಯ ಜ್ಞಾನ ಮತ್ತು ಅಡುಗೆ ವಿಷಯಗಳನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯ ಅವಧಿಯು 1 ½ ಗಂಟೆಗಳು (90 ನಿಮಿಷಗಳು).

ಲಿಖಿತ ಪರೀಕ್ಷೆಯನ್ನು 16 ರಾಜ್ಯಗಳ 17 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 12 ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಜಿ ಶುಲ್ಕ

ಸಾಮಾನ್ಯ / OBC / EWS: 400 ರೂ.

SC / ST / PH : 200 ರೂ.

ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಪಾವತಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read