ಕುಡಿದು ರಸ್ತೆಯಲ್ಲಿ ತೂರಾಡಿದ್ರಾ ಸನ್ನಿ ಡಿಯೋಲ್ ? ಇಲ್ಲಿದೆ ವೈರಲ್ ವಿಡಿಯೋದ ಅಸಲಿಯತ್ತು

ಮುಂಬೈ: ಬಾಲಿವುಡ್ ನಟ ಸನ್ನಿ ಡಿಯೋಲ್ ಕುಡಿದ ಮತ್ತಿನಲ್ಲಿ ಮುಂಬೈ ಜುಹು ರಸ್ತೆಯಲ್ಲಿ ತೂರಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಈ ದೃಶ್ಯದ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

ಸನ್ನಿ ಡಿಯೋಲ್ ಮುಂಬೈನ ಜುಹು ಸರ್ಕಲ್ ನಲ್ಲಿ ತಡ ರಾತ್ರಿ ಕುಡಿದು ಓಡಾಡುತ್ತಿದ್ದು, ಇದೇ ವೇಳೆ ಬಂದ ಆಟೋ ಚಾಲಕನೊಬ್ಬ ಆಟೋ ನಿಲ್ಲಿಸಿ ತಮ್ಮ ಆಟೋದಲ್ಲಿ ಕರೆದೊಯ್ದಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಸನ್ನಿ ಡಿಯೋಲ್ ಅವರ ಈ ವಿಡಿಯೋ ನಕಲಿ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಇದು ಅವರ ಹೊಸ ಚಿತ್ರದ ದೃಶ್ಯವಿರಬಹುದು ಎಂದು ಹೇಳಿದ್ದರು.

ಇದೀಗ ಈ ವಿಡಿಯೋದ ಫ್ಯಾಕ್ಟ್ ಚೆಕ್ ನಲ್ಲಿ ಸತ್ಯಾಂಶ ಬಯಲಾಗಿದೆ. ಸನ್ನಿ ಡಿಯೋಲ್ ಕುಡಿದು ರಸ್ತೆಯಲ್ಲಿ ಓಡಾಡುತ್ತಿದ್ದುದು ಸುಳ್ಳು ಎಂಬುದು ಸಾಬೀತಾಗಿದೆ. ಅಲ್ಲದೇ ಸ್ವತಃ ಸನ್ನಿ ಡಿಯೋಲ್ ವೈರಲ್ ಆಗಿರುವ ವಿಡಿಯೋದ ಇನ್ನಷ್ಟು ತುಣುಕುಗಳನ್ನು ಸಾಮಾಜಿಕ ಸಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸಿನಿಮಾ ತಂಡದವರು ಚಿತ್ರೀಕರಣ ಮಾಡುತ್ತಿರುವ ದೃಶ್ಯ ಕೂಡ ಇದೆ.

ಸನ್ನಿ ಡಿಯೋಲ್ ರಸ್ತೆಯಲ್ಲಿ ನಡೆದು ಬರುತ್ತಿರುವ ದೃಶ್ಯವನ್ನು ಸೆರೆ ಹಿಡಿಯುತ್ತಿರುವ ಚಿತ್ರ ತಂಡ ಕೂಡ ವಿಡಿಯೋದಲ್ಲಿ ಇದೆ. ಇದು ಸನ್ನಿ ಡಿಯೋಲ್ ಅವರ ಹೊಸ ಚಿತ್ರ ಸಫಾರ್ ಶೂಟಿಂಗ್ ದೃಶ್ಯವಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಸನ್ನಿ ಡಿಯೋಲ್ ಕುಡಿದು ರಸ್ತೆಯಲ್ಲಿ ತೂರಾಡುತ್ತಿದ್ದರು ಎಂಬುದು ಸುಳ್ಳು ಸುದ್ದಿ ಎಂಬುದು ಬಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read