ಬೆಂಗಳೂರು: ಮೋಜು-ಮಸ್ತಿಗಾಗಿ ಚಲಿಸುತ್ತಿದ್ದ ಕಾರಿನ ಸನ್ ರೂಫ್ ಓಪನ್ ಮಾಡಿ ಮಕ್ಕಳನ್ನು ನಿಲ್ಲಿಸುವ ಪೋಷಕರು ಈ ಸುದ್ದಿ ಓದಲೇಬೇಕು. ಇಲ್ಲೋರ್ವ ವ್ಯಕ್ತಿ ತನ್ನ ಐಷಾರಾಮಿ ಕಾರಿನಲ್ಲಿ ತೆರಳುತ್ತಿದ್ದಾಗ ಸನ್ ರೂಫ್ ಓಪನ್ ಮಾಡಿ ಮಗನನ್ನು ನಿಲ್ಲಿಸಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಮಗ ಸನ್ ರೋಫ್ ನಲ್ಲಿ ನಿಂತು ಗಾಳಿಯನ್ನು ಆಹ್ಲಾದಿಸುತ್ತಾ ಸಂತೋಷದಲ್ಲಿ ತೇಲುತ್ತಿದ್ದ ವೇಳೆ ಏಕಾಏಕಿ ಕಬ್ಬಿಣದ ಬೀಮ್ ಬಾಲಕನ ತಲೆಗೆ ಬಿಡಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೆಂಪು ಬಣ್ಣದ ಕಾರಿನಲ್ಲಿ ಸನ್ ರೂಫ್ ಓಪನ್ ಮಾಡಿ ಎದ್ದು ನಿಂತಿದ್ದ ಬಾಲಕನ ತಲೆಗೆ ಕಬ್ಬಿಣದ ಕಮಾನಿನ ಬೀಮ್ ಬಡಿದ ಪರಿಣಾಮ ಬಾಲಕ ಕಾರಿನಲ್ಲಿಯೇ ಕುಸಿದು ಬಿದ್ದಿದ್ದಾನೆ. ಬಾಲಕನ ತಲೆಗೆ ಗಂಭೀರವಾದ ಗಾಯಗಳಾಗಿವೆ.
ಪೋಷಕರಾಗಲಿ ಯಾರೇ ಆಗಲಿ ಮೋಜು-ಮಸ್ತಿಗೆಂದು ಸನ್ ರೂಫ್ ತೆಗೆದು ಮಕ್ಕಳನ್ನು ನಿಲ್ಲಿಸಿ ವಾಹನ ಚಲಾಯಿಸುವಾಗ ಇಂತಹ ಅನಾಹುತಗಳ ಬಗ್ಗೆ ಎಚ್ಚರವಹಿಸಬೇಕು. ಅದನ್ನು ಬಿಟ್ಟು ಸಾರ್ವಜನಿಕರು ಓಡಾಡುವ ಜನನಿಬಿಡ ರಸ್ತೆಯಲ್ಲಿ ಹುಚ್ಚಾಟ ಮೆರೆಯಲು ಹೋಗಿ ಜೀವಕ್ಕೆ ಕುತ್ತುತಂದುಕೊಳ್ಳುವುದು ಎಷ್ಟು ಸರಿ?