ಕೋರ್ಟ್ ಮುಂದೆ ಕಣ್ಣೀರಿಟ್ಟ ʼವಿಕ್ರಾಂತ್ ರೋಣʼ ನಟಿ…..!

ವಿಕ್ರಾಂತ್ ರೋಣ ಸಿನಿಮಾದಲ್ಲಿ ರಕ್ಕಮ್ಮನಾಗಿ ಸೊಂಟ ಬಳುಕಿಸಿದ್ದ ನಟಿಗೀಗ ಜೀವನದಲ್ಲಿ ನೆಮ್ಮದಿ ಇಲ್ಲದ ಹಾಗಾಗಿದೆಯಂತೆ. ಹೀಗಂತ ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ ನಟಿ ಜಾಕ್ವೆಲಿನ್. ಸುಕೇಶ್ ಕುರಿತಾಗಿ ನೊಂದು ಮಾತನಾಡಿರುವ ಅವರು, ಆತನಿಂದ ನನಗೆ ನೆಮ್ಮದಿಯೇ ಇಲ್ಲದಂತಾಗಿದೆ ಎಂದಿದ್ದಾರೆ.

ಹೌದು, ಬಹುಕೋಟಿ ವಂಚನೆ ಆರೋಪಿ ಸುಕೇಶ್ ಜೊತೆ ಸಂಪರ್ಕದಲ್ಲಿ ಈ ನಟಿ ಇದ್ದರು. ಹಾಗೂ ದುಬಾರಿ ಗಿಫ್ಟ್ ತೆಗೆದುಕೊಂಡಿದ್ದಾರೆ ಎಂದು ಈ ನಟಿಯನ್ನೂ ವಿಚಾರಣೆ ಮಾಡಲಾಗಿತ್ತು. ಕೋರ್ಟ್ ಗೆ ಹಾಜರಾಗಿದ್ದ ಈ ನಟಿ ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇಡಿ ವಿಚಾರಣೆ ಎದುರಿಸಿದ ನಂತರ ಕೋರ್ಟ್ ಗೆ ಹಾಜರಾಗಿದ್ದ ಈ ನಟಿಗೆ ಇದೀಗ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆಯಂತೆ.

ಇನ್ನು ಈತ ಪರಿಚಯ ಆಗಿದ್ದರ ಬಗ್ಗೆಯೂ ಹೇಳಿದ್ದಾರೆ. ಸುಖೇಶ್ ತಮಗೆ ಪರಿಚಯವಾಗಿದ್ದು ಪಿಂಕಿ ಇರಾನಿ ಎನ್ನುವ ಮಹಿಳೆಯಿಂದ. ಇನ್ನು ಸುಖೇಶ್ ನನ್ನು ಗೃಹ ಸಚಿವಾಲಯದ ಅಧಿಕಾರಿ ಎಂದು ಆಕೆ ಪರಿಚಯ ಮಾಡಿದ್ದಳು. ಈ ಪರಿಚಯ ಸ್ನೇಹವಾಯಿತು. ಆತ್ಮೀಯತೆ ಬೆಳೆಯಿತು. ಸುಖೇಶ್ ನಿಂದ ಕೆಲವು ಗಿಫ್ಟ್ ಗಳು ಬಂದಿದ್ದು ಪಿಂಕಿ ಇರಾನಿ ಕಡೆಯಿಂದ. ಸುಖೇಶ್ ನೇರವಾಗಿ ಕೊಟ್ಟಿಲ್ಲ. ಆ ವ್ಯಕ್ತಿ ಬಗ್ಗೆ ಆಕೆಗೆ ಗೊತ್ತಿದ್ದರೂ ನನ್ನ ಬಳಿ ಅದನ್ನು ಮುಚ್ವಿಟ್ಟಳು. ಈತನಿಂದ ನನ್ನ ವೃತ್ತಿಗೂ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read