ಮಂಗಳೂರು: ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಪ್ರಕರಣದಲ್ಲಿ ಸುಜಾತ್ ಭಟ್ ರಿಂದ ಅನನ್ಯಾ ಭಟ್ ನಾಪತ್ತೆ ಎಂಬ ಕಟ್ಟು ಕಥೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ದಕ್ಷಿಣ ಭಾರತದ ಖ್ಯಾತ ನಟನ ಸಹೋದರನಿಗೆ ಇದೇ ಪ್ರಕರಣದಲ್ಲಿ ಎಸ್ ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ. ದಕ್ಷಿಣ ಭಾರತದ ಖ್ಯಾತ ನಟ, ಖಳನಾಯಕ ಹಾಗೂ ನಿರ್ದೇಶಕನ ಸಹೋದರನಾಗಿರುವ ಕಾಲಿವುಡ್ ನಟನಿಗೆ ಎಸ್ ಐಟಿ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸುಜಾತಾ ಭಟ್ ಅವರ ಕಟ್ಟುಕಥೆ ಹಾಗೂ ಕೊಡಗು ಮೂಲದ ವಾಸಂತಿ ಸಾವಿನ ಬಗ್ಗೆ ತನಿಖೆ ನಡೆಸಿರುವ ಎಸ್ ಐಟಿ ಅಧಿಕಾರಿಗಳಿಗೆ ಹಲವು ಮಹತ್ವದ ಮಾಹಿತಿ ಲಭ್ಯವಾಗಿದೆ. ವಾಸಂತಿ ಮದುವೆ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದರು. ವಾಸಂತಿ ಪತಿ ಹಾಗೂ ನಟ ಇಬ್ಬರೂ ಸ್ನೇಹಿತರಾಗಿದ್ದರು. ವಾಸಂತಿಹಾಗೂ ಆಕೆಯ ಪತಿ ಇದ್ದ ಮನೆಗೆ ನಟ ಆಗಾಗ ಭೇಟಿ ಕೊಡುತ್ತಿದರು. ವಾಸಂತಿ ಹಾಗೂ ಆಕೆಯ ಪತಿಯ ಬಗ್ಗೆ ಆತನಿಗೆ ಚನ್ನಾಗಿ ಗೊತ್ತಿತ್ತು ಎನ್ನಲಾಗಿದೆ. ವಾಸಂತಿ ಪತಿಯೊಂದಿಗೆ ನಟ ಬಹಳ ಅನ್ಯೋನ್ಯವಾಗಿದ್ದ. ಈ ಹಿನ್ನೆಲೆಯಲ್ಲಿ ನಟನನ್ನು ವಿಚಾರಣೆ ನಡೆಸಲು ಎಸ್ ಐಟಿ ಮುಂದಾಗಿದೆ.
ಚೆನ್ನೈ ಬೀಚ್ ಪ್ರದೇಶದ ಆಸು ಪಾಸಿನಲ್ಲಿ ಆತನ ನಿವಾಸವಿದ್ದು, ಪತ್ತೆ ಹಚ್ಚಿವ ನಿಟ್ಟಿನಲ್ಲಿ ಎಸ್ ಐಟಿ ಮಾಹಿತಿ ಕಲೆ ಹಾಕಿದೆ ಎಂದು ತಿಳಿದುಬಂದಿದೆ.