ಮಡಿಕೇರಿ: ಸುಜಾತ್ ಭಟ್ ತೋರಿಸುತ್ತಿರುವ ಫೋಟೋ ಅವರ ಮಗಳಲ್ಲ. ಆಕೆ ನನ್ನ ಸಹೋದರಿ ವಾಸಂತಿ ಎಂದು ವಾಸಂತಿ ಸಹೋದರ ವಿಜಯ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಾಸಂತಿ ಸಹೋದರ ವಿಜಯ್, ಸುಜಾತಾ ಭಟ್, ನನ್ನ ತಂಗಿಯ ಫೋಟೋ ಇಟ್ಟುಕೊಂಡು ಇದು ತನ್ನ ಮಗಳು ಅನನ್ಯಾ ಭಟ್ ಎಂದು ಹೆಳುತ್ತಿದ್ದಾರೆ. ಅವರು ಯಾವ ಉದ್ದೇಶಕ್ಕೆ ಈ ರೀತಿ ಹೇಳುತ್ತಿದ್ದಾರೆ ಗೊತಿಲ್ಲ ಎಂದು ತಿಳಿಸಿದ್ದಾರೆ.
ಸುಜಾತಾ ಭಟ್ ತೋರಿಸುತ್ತಿರುವ ಫೋಟೋ ಅನನ್ಯಾ ಭಟ್ ಅಲ್ಲ, ಅದು ನನ್ನ ಸಹೋದರಿ ವಾಸಂತಿ ಫೋಟೊ. ನನ್ನ ತಂಗಿಯ ಫೋಟೊ ದುರ್ಬಳಕೆ ಮಾಡಿಕೊಳ್ಲುತ್ತಿದ್ದಾರೆ. ಸುಜಾತಾ ಭಟ್ ತೋರಿಸುತ್ತಿರುವ ಫೋಟೊ ನೋಡಿ ನಮಗೂ ಆಘಾತವಾಯಿತು. ಇದು ನನ್ನ ತಂಗಿ ವಾಸಂತಿ ಫೋಟೊ ಎಂದು ತಿಳಿಸಿದ್ದಾರೆ.
ನನ್ನ ತಂಗಿ ಶ್ರೀವತ್ಸ ಅವರನ್ನು ಪ್ರೀತಿಸಿ 2007 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಒಂದೇ ತಿಂಗಳಿಗೆ ವಿರಾಜಪೇಟೆಗೆ ಆಗಮಿಸಿದ್ದರು. ಬಳಿಕ ಅವರು ಕೆದ್ದಮುಳ್ಳುರು ಗ್ರಾಮದ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನದಿಯಲ್ಲಿ ಶವ ಪತ್ತೆಯಾದಾಗ ಅಪರಿಚಿತ ಶವ ಎಂದು ಸ್ಥಳೀಯ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು. ಮೃತದೇಹದ ಮೇಲಿನ ಬಟ್ಟೆ, ಮುಖದ ಚಹರೆ ನೋಡಿ ನನ್ನ ತಂಗಿ ವಾಸಂತಿ ಎಂಬುದು ದೃಢವಾಗಿತ್ತು. ನನ್ನ ತಂಗಿಯನ್ನು ತನ್ನ ಮಗಳು ಎಂದು ಸುಜಾತಾ ಭಟ್ ಯಾಕೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಈಗ ಎಸ್ ಐಟಿಯವರು ತನಿಖೆ ನಡೆಸುತ್ತಿದ್ದಾರೆ. ಮುಂದೆ ಈ ಬಗ್ಗೆ ಕುಟುಂಬದವರ ಜೊತೆ ಚರ್ಚಿಸಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.
ಅನನ್ಯಾ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಸುಜಾತಾ ಭಟ್ ಯಾವುದೇ ಫೋಟೋ ಬಿಡುಗಡೆ ಮಾಡಿರಲಿಲ್ಲ. ಆದರೆ ಆಕೆಯ ಯಾವುದಾದರೂ ಫೋಟೊ ಇದೆಯೇ ತೋರಿಸಿ ಎಂದು ಕೇಳಿದಾಗ ವಾಸಂತಿ ಫೋಟೋ ತೋರಿಸಿ ಇದು ಅನನ್ಯಾ ಭಟ್ ಫೋಟೊ ಎಂದು ಬಿಡುಗಡೆ ಮಾಡಿದ್ದಾರೆ. ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ಅನನ್ಯಾ ಭಟ್ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದಳು. ನನ್ನ ಮಗಳನ್ನು ಸ್ನೇಹಿತರು ಬಟ್ಟೆ ತರಲು ಹೋಗುತ್ತೇವೆ ಎಂದು ಹೇಳಿ ಆಕೆಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ವಾಪಸ್ ಅವರು ಬಂದು ನೋಡಿದಾಗ ಅನನ್ಯಾ ಭಟ್ ಅಲ್ಲಿ ಇರಲಿಲ್ಲ. ಅಂದಿನಿಂದ ಈವರೆಗೂ ಅನನ್ಯಾ ಭಟ್ ಸುಳಿವಿಲ್ಲ. ಮಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋಗಾದ ಅಂದಿನ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ನನ್ನ ಮೇಲೆ ಧರ್ಮಸ್ಥಳದಲ್ಲಿ ಹಲ್ಲೆ ನಡೆದಿತ್ತು ಎಂದು ಆರೋಪಿಸಿದ್ದಾರೆ. ಒಟ್ಟಾರೆ ಸುಜಾತಾ ಭಟ್ ತೋರಿಸುತ್ತಿರುವ ಫೋಟೋ ಹಾಗೂ ಅವರ ಹೇಳಿಕೆಗಳು ಸಾಕಷ್ಟು ಅನುಮಾನಕ್ಕೆ ಕಾರಣವಗಿದ್ದು, ತನಿಖೆ ಬಳಿಕವೇ ಸತ್ಯಾಸತ್ಯತೆ ಬಯಲಾಗಬೇಕಿದೆ.