GOOD NEWS : ‘ಕಬ್ಬು’ ಬೆಳೆಗಾರರಿಗೆ ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ‘FRP’ ದರ ಹೆಚ್ಚಳ

ನವದೆಹಲಿ : ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಒಂದು ಟನ್ ಕಬ್ಬಿಗೆ 100 ರೂಪಾಯಿ ಎಫ್ ಆರ್ ಪಿ (FRP)  ಬೆಲೆ ಹೆಚ್ಚಳ ಮಾಡಿದೆ.

ಕಬ್ಬು ಬೆಳೆಗಾರರ ಬೇಡಿಕೆಯಂತೆ ಕೇಂದ್ರ ಸರ್ಕಾರ ಒಂದು ಟನ್ ಕಬ್ಬಿಗೆ 100 ರೂಪಾಯಿ ನ್ಯಾಯೋಚಿತ ಮತ್ತು ಲಾಭದಾಯದ ಬೆಲೆ ಹೆಚ್ಚಳ ಮಾಡಿದೆ.

ಎಫ್ ಆರ್ ಪಿ ಬೆಲೆ ಹೆಚ್ಚಳ ಮಾಡುವಂತೆ ಹಲವು ದಿನಗಳಿಂದ ದೇಶಾದ್ಯಂತ ರೈತರು ಒತ್ತಡ ಹೇರುತ್ತಿದ್ದರು. ರೈತರ ಒತ್ತಡದಕ್ಕೆ ಮಣಿದ ಕೇಂದ್ರ ಸರ್ಕಾರ 100 ರೂ ಎಫ್ ಆರ್ ಪಿ (FRP) ದರ ಹೆಚ್ಚಳ ಮಾಡಿದೆ. ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುವ ಪ್ರತಿ ಟನ್ ಕಬ್ಬಿಗೆ 3,150 ಎಫ್ ಆರ್ ಪಿ ನಿಗದಿ ಮಾಡಲಾಗಿದೆ. ಪ್ರತಿ ಕ್ವಿಂಟಲ್ ಕಬ್ಬಿಗೆ 315 ರೂಪಾಯಿ ಸಿಗಲಿದೆ. ಕಬ್ಬಿಗೆ ಎಫ್ ಆರ್ ಪಿ ಬೆಲೆ ಹೆಚ್ಚಳ ಮಾಡುವಂತೆ ದೇಶದ ಹಲವು ಕಡೆ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕರ್ನಾಟಕದಲ್ಲೂ ಕೂಡ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read