ಪರ – ವಿರೋಧದ ಚರ್ಚೆಗೆ ಕಾರಣವಾಗಿದೆ ‘ಆಹಾರ’ ಕುರಿತ ಸುಧಾ ಮೂರ್ತಿಯವರ ಈ ಹೇಳಿಕೆ…!

ಉದ್ಯಮಿ, ಲೇಖಕಿ ಹಾಗೂ ಸಮಾಜ ಸೇವಕಿ ಸುಧಾ ಮೂರ್ತಿ ಇತ್ತೀಚೆಗಷ್ಟೇ ಖಾನೆ ಮೇ ಕೌನ್​ ಹೈ ಎಂಬ ಯುಟ್ಯೂಬ್​​​ ಸರಣಿಯ ಇತ್ತೀಚಿನ ಸಂಚಿಕೆಯಲ್ಲಿ ಶುದ್ಧ ಸಸ್ಯಾಹಾರಿಗಳಿಗೆ ಎದುರಾಗುವ ದೊಡ್ಡ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ. ಸಸ್ಯಹಾರಿ ಹಾಗೂ ಮಾಂಸಾಹಾರಿ ಭಕ್ಷ್ಯಗಳಿಗೆ ಒಂದೇ ಚಮಚವನ್ನು ಬಳಕೆ ಮಾಡುತ್ತಾರೇನೋ ಎಂಬುದು ನನಗಿರುವ ದೊಡ್ಡ ಚಿಂತೆಯಾಗಿದೆ ಎಂದು ಹೇಳಿದ್ದಾರೆ.

ಕೆಲಸದ ವಿಚಾರದಲ್ಲಿ ನಾನು ಹೊಸ ಹೊಸ ರಿಸ್ಕ್​ಗಳನ್ನು ತೆಗೆದುಕೊಳ್ಳಲು ತಯಾರಿದ್ದರೂ ಸಹ ನನಗೆ ಈ ಆಹಾರದ ವಿಚಾರದಲ್ಲಿ ನಾನು ರಿಸ್ಕ್​ ತೆಗೆದುಕೊಳ್ಳಲು ತಯಾರಿಲ್ಲ ಎಂದಿದ್ದಾರೆ. ಆಹಾರದ ವಿಚಾರವಾಗಿ ಸುಧಾ ಮೂರ್ತಿ ಆಡಿದ ಮಾತುಗಳು ಇದೀಗ ಟ್ವಿಟರ್​​ನಲ್ಲಿ ಟ್ರೆಂಡ್​​ ಆಗಿದೆ.

ಕೆಲಸ ವಿಚಾರದಲ್ಲಿ ನಾನು ಸಾಹಸಮಯಿ. ಆದರೆ ಆಹಾರದ ವಿಚಾರದಲ್ಲಿ ನಾನು ಸಾಹಸಿಯಲ್ಲ. ನಾನು ನಿಜಕ್ಕೂ ಆಹಾರದ ವಿಚಾರಕ್ಕೆ ಬಂದರೆ ತುಂಬಾನೇ ಹೆದರುತ್ತೇನೆ. ನಾನು ಮೊಟ್ಟೆ, ಬೆಳ್ಳುಳ್ಳಿ, ಮಾಂಸಾಹಾರ ಭಕ್ಷ್ಯಗಳನ್ನು ಸೇವನೆ ಮಾಡುವುದಿಲ್ಲ. ವಿದೇಶಕ್ಕೆ ತೆರಳಿದಾಗ ನಾನು ಶುದ್ಧ ಸಸ್ಯಾಹಾರಿ ರೆಸ್ಟಾರೆಂಟ್​ಗಳನ್ನೇ ಹುಡುಕುತ್ತೇನೆ. ಸಾಧ್ಯವಾದರೆ ನನ್ನ ಆಹಾರ ನಾನೇ ತಯಾರು ಮಾಡಿಕೊಳ್ತೇನೆ. ಅವಲಕ್ಕಿಯಂತಹ ಸುಲಭವಾಗಿ ತಯಾರು ಮಾಡುವ ಆಹಾರ ಪದಾರ್ಥಗಳನ್ನು ಕೊಂಡೊಯ್ಯುತ್ತೇನೆ ಎಂದು ಹೇಳಿದ್ದಾರೆ.

ಸುಧಾಮೂರ್ತಿಯವರ ಈ ಸಂದರ್ಶನವು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಅನೇಕರು ವಿದೇಶ ಪ್ರವಾಸದ ವೇಳೆ ನಮ್ಮ ಆಹಾರವನ್ನು ನಾವು ಕೊಂಡೊಯ್ಯೋದು ಉತ್ತಮ ಎಂದು ಹೇಳಿದ್ದಾರೆ. ಮತ್ತೊಬ್ಬರು ನಾವು ಜನರನ್ನು ಅವರ ಆಹಾರದ ಆದ್ಯತೆಗಳ ಮೇಲೆ ಅಳೆಯುವುದು ಸರಿಯಲ್ಲ. ಜಾತಿಯನ್ನು ಲೆಕ್ಕಿಸದೇ ಪ್ರತಿಯೊಬ್ಬರ ಆಹಾರ ಕ್ರಮವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.

https://twitter.com/ratna_bajpai/status/1684039112729464832

 

 

https://twitter.com/Dharanyamsu/status/1684008959261442048

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read