BIGG BOSS: ಸುದೀಪ್ ಸಿಟ್ಟಿಗೆ ಗುರಿಯಾದ ಚೈತ್ರಾ ಕುಂದಾಪುರ

ನಟ ಕಿಚ್ಚ ಸುದೀಪ್ ಕಳೆದ 11 ವರ್ಷದಿಂದ ‘ಬಿಗ್ ಬಾಸ್’ ಶೋ ನಿರೂಪಣೆ ಮಾಡುತ್ತಿದ್ದು, ಅವರು ಸಾಮಾನ್ಯವಾಗಿ ವೇದಿಕೆಯಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ. ತೀರಾ ಅಪರೂಪಕ್ಕೆ ಒಮ್ಮೆ ಸಿಟ್ಟಾದರೂ ಅದರಲ್ಲೂ ಮಹಿಳಾ ಸ್ಪರ್ಧಿಗಳ ಮೇಲೆ ಸಿಟ್ಟಿನಿಂದ ಮಾತನಾಡಿದ್ದು ಇಲ್ಲವೆಂದೇ ಹೇಳಬಹುದು. ಆದರೆ, ಈ ಬಾರಿ ವಾರದ ಕತೆಯಲ್ಲಿ ಚೈತ್ರಾ ಕುಂದಾಪುರ ಅವರು ಸುದೀಪ್ ಸಿಟ್ಟಿಗೆ ಗುರಿಯಾಗಿದ್ದಾರೆ.

ಚೈತ್ರಾ ಕುಂದಾಪುರ ಅನಾರೋಗ್ಯದ ಕಾರಣ ‘ಬಿಗ್ ಬಾಸ್’ ಮನೆಯಲ್ಲಿ ಕುಸಿದು ಬಿದ್ದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಿಂದ ಆಸ್ಪತ್ರೆಗೆ ಹೋಗಿದ್ದ ಅವರು ಚಿಕಿತ್ಸೆ ಪಡೆದು ಮರಳಿದ್ದಾರೆ. ಹೊರಗೆ ಯಾರು ಹೇಗೆಲ್ಲಾ ಆಟವಾಡುತ್ತಿದ್ದಾರೆ ಎಂದು ಆಸ್ಪತ್ರೆ ಕೆಲವು ಸಿಬ್ಬಂದಿ ನನಗೆ ಹೇಳಿದ್ದಾರೆ ಎಂದು ಚೈತ್ರಾ ಕತೆಗಳ ಮೂಲಕ, ಸನ್ನೆಗಳ ಮೂಲಕ ಮನೆಯವರಿಗೆ ತಿಳಿಸಿದ್ದಾರೆ.

ಇದೇ ವಿಷಯದ ಬಗ್ಗೆ ಸುದೀಪ್ ಚೈತ್ರಾ ಬಳಿ ವಾರದ ಕತೆಯಲ್ಲಿ ಮಾತನಾಡಿದ್ದಾರೆ. ಚೈತ್ರಾ ಆಸ್ಪತ್ರೆ ವಿಷಯವೇ ಬಹುತೇಕ ಚರ್ಚೆಯಾಗಿದ್ದು, ಸುದೀಪ್ ಮಾತನಾಡುವಾಗ ಮತ್ತು ಬೇರೊಬ್ಬರ ಅಭಿಪ್ರಾಯ ಪಡೆದುಕೊಳ್ಳುವಾಗ ಚೈತ್ರಾ ಪದೇ ಪದೇ ಕೈ ಎತ್ತುವುದು. ಮಧ್ಯೆ ಮಾತನಾಡುವುದನ್ನು ಮಾಡುತ್ತಿದ್ದರು. ಹೀಗೆ ಮಾಡುವುದು ಬೇಡ ಕೈ ಎತ್ತಿ ಮಾತನಾಡಿ ಎಂದು ಸುದೀಪ್ ಹೇಳಿದ್ದರೂ ಚೈತ್ರಾ ಗಮನಕ್ಕೆ ತೆಗೆದುಕೊಳ್ಳದೆ ಮಧ್ಯಮಧ್ಯ ಬಾಯಿ ಹಾಕಿದ್ದಾರೆ. ಇದರಿಂದ ಕೆರಳಿದ ಸುದೀಪ್ ಒಂದೇ ಬಾರಿಗೆ ಸಿಟ್ಟಿನಿಂದ ಮಾತನಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ್ಮೊಂದಿಗೆ ಮಾನವೀಯತೆಯಿಂದ, ಪ್ರೀತಿಯಿಂದ ನಡೆದುಕೊಳ್ಳಲು ಅವಕಾಶ ಮಾಡಿಕೊಡಿ. ನನಗೆ ಅಗೌರವ ತೋರಬೇಡಿ, ಹೊರಗೆ ಜನರ ಪ್ರೀತಿಯನ್ನು ಸಂಪಾದಿಸಿದ್ದೇನೆ. ಡಿಮ್ಯಾಂಡ್ ಮಾಡಿ ಅದನ್ನು ನಾನು ಸಂಪಾದಿಸಿಲ್ಲ. ಕಮಾಂಡ್ ಮಾಡಿ ಸಂಪಾದಿಸಿದ್ದೇನೆ. ಸಾಧ್ಯವಾದರೆ ನೀವು ಅದರಲ್ಲಿ ಸ್ವಲ್ಪ ಹಂಚಿಕೊಳ್ಳಿ ಎಂದು ಹೇಳಿದ ಸುದೀಪ್, ನಿಮ್ಮ ಬಳಿ ದನಿ ಎತ್ತಿ ಮಾತನಾಡಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಆದರೆ, ಇದಕ್ಕೆ ಚೈತ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read