ಹೀಗಿರಲಿ ಕನ್ನಡಕ ಧರಿಸುವವರ ಕಣ್ಣಿನ ಮೇಕಪ್

ಕನ್ನಡಕ ಧರಿಸುವ ಹುಡುಗಿಯರಿಗೆ ಕಣ್ಣಿನ ಮೇಕಪ್ ಮಾಡುವುದು ಕಷ್ಟದ ಕೆಲಸವೇ. ಹೇಗೆ ಮೇಕಪ್ ಮಾಡಿಕೊಂಡರೂ ಕನ್ನಡಕ ಅದನ್ನು ಮರೆಮಾಚುವುದರಿಂದ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ.

ಕನ್ನಡದ ಧರಿಸುವಾಗ ಹುಬ್ಬುಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯ. ಹುಬ್ಬನ್ನು ತುಸು ಮೇಲೆ ಕಾಣುವಂತೆ ಮಾಡಿ. ಅದು ನಿಮ್ಮ ಮುಖಕ್ಕೆ ಹೊಂದಿಕೊಳ್ಳುವಂತಿರಲಿ. ಐಬ್ರೋ ಜೆಲ್ ಅಥವಾ ಪೆನ್ಸಿಲ್ ಬಳಸುವ ಮೂಲಕ ನೀವಿದನ್ನು ಮಾಡಿಕೊಳ್ಳಬಹುದು.

ನಿಮ್ಮ ಉಡುಪಿಗೆ ಹೊಂದಿಕೊಳ್ಳುವ ಬಣ್ಣದ ಲೈನರ್ ಆಯ್ದುಕೊಳ್ಳಿ. ಪೆನ್ಸಿಲ್ ಗಳನ್ನೂ ಇದಕ್ಕಾಗಿ ಬಳಸಬಹುದು. ಇದು ನಿಮ್ಮ ಕಣ್ಣಿನ ಬಣ್ಣವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಇಷ್ಟೆಲ್ಲಾ ಮಾಡಿ ಐ ಶ್ಯಾಡೋಸ್ ಬಳಸದಿದ್ದರೆ ಕಣ್ಣಿನ ಆಕರ್ಷಣೆ ಕಾಣದೆ ಉಳಿಯಬಹುದು. ಹಾಗಾಗಿ ಸಿಲ್ವರ್ ಬಣ್ಣದ ಶ್ಯಾಡೋಸ್ ಬಳಸಿ, ಇದು ಎಲ್ಲಾ ಉಡುಪುಗಳಿಗೂ ಹೊಂದಿಕೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read