ನಷ್ಟಕ್ಕೆ ಕಾರಣವಾಗುತ್ತೆ ಮನೆಯಲ್ಲಿಡುವ ಲಕ್ಷ್ಮಿಯ ಇಂಥ ಮೂರ್ತಿ

ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಧನಲಕ್ಷ್ಮಿ ಎಂದು ಕರೆಯಲಾಗುತ್ತದೆ. ಜನರು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಮನೆಯಲ್ಲಿ ಲಕ್ಷ್ಮಿ ದೇವಿ ಫೋಟೋ, ಮೂರ್ತಿಗಳನ್ನಿಟ್ಟು ಪೂಜೆ ಮಾಡ್ತಾರೆ. ಆದ್ರೆ ಮನೆಯಲ್ಲಿಡುವ ಮೂರ್ತಿ ಕೆಲವೊಮ್ಮೆ ಲಾಭಕ್ಕಿಂತ ನಷ್ಟಕ್ಕೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿಯನ್ನಿಟ್ಟರೆ ಮಾತ್ರ ಯಶಸ್ಸು ಸಾಧ್ಯ.

ದೇವರ ಮನೆಯಲ್ಲಿ ತಾಯಿ ಲಕ್ಷ್ಮಿ ಮೂರ್ತಿ ಇದ್ದೇ ಇರುತ್ತದೆ. ಆದ್ರೆ ಕೆಲವರು ಮನೆಯಲ್ಲಿ ನಿಂತಿರುವ ಲಕ್ಷ್ಮಿ ಮೂರ್ತಿಯಿಟ್ಟು ಪೂಜೆ ಮಾಡ್ತಾರೆ. ನಿಂತಿರುವ ಲಕ್ಷ್ಮಿ ಮೂರ್ತಿಯನ್ನು ಮನೆಯಲ್ಲಿ ಇಡಬಾರದು.

ಪುರಾಣಗಳ ಪ್ರಕಾರ ದೇವಿ ಲಕ್ಷ್ಮಿ ಚಂಚಲವಾಗಿರುತ್ತಾಳೆ. ಹಾಗಾಗಿ ನಿಂತಿರುವ ಭಂಗಿಯ ಮೂರ್ತಿಯಿಟ್ಟರೆ ದೇವಿ ಯಾವುದೇ ಕ್ಷಣದಲ್ಲಾದ್ರೂ ಮನೆ ತೊರೆಯುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯಲ್ಲಿ ಎಂದೂ ಕುಳಿತಿರುವ ಲಕ್ಷ್ಮಿ ಮೂರ್ತಿಯನ್ನೇ ಇಡಬೇಕು.

ತಾಯಿ ಲಕ್ಷ್ಮಿಯ ವಾಹನ ಗೂಬೆ. ಇದು ಕೂಡ ಚಂಚಲ. ಹಾಗಾಗಿ ಲಕ್ಷ್ಮಿ ಗೂಬೆ ಮೇಲೆ ಕುಳಿತಿರುವ ಲಕ್ಷ್ಮಿಯನ್ನು ಮನೆಯಲ್ಲಿ ಇಡಬಾರದು.

ಬಹುತೇಕ ಮನೆಗಳಲ್ಲಿ ಲಕ್ಷ್ಮಿ ಮೂರ್ತಿ ಪಕ್ಕದಲ್ಲಿ ಗಣೇಶನ ಮೂರ್ತಿಯಿರುತ್ತದೆ. ವಾಸ್ತು ಪ್ರಕಾರ ಇದು ತಪ್ಪು. ಲಕ್ಷ್ಮಿ ವಿಷ್ಣುವಿನ ಪತ್ನಿ. ಹಾಗಾಗಿ ಲಕ್ಷ್ಮಿ ಮೂರ್ತಿ ಬಳಿ ವಿಷ್ಣು ಮೂರ್ತಿಯಿರಬೇಕು.

ಲಕ್ಷ್ಮಿ ಮೂರ್ತಿಯನ್ನು ಗೋಡೆಗೆ ಒತ್ತಿಡಬಾರದು. ಇದು ಶುಭಕರವಲ್ಲ. ಮೂರ್ತಿ ಹಾಗೂ ಗೋಡೆ ಮಧ್ಯೆ ಅಂತರವಿರಬೇಕು.

ದೇವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷ್ಮಿ ಮೂರ್ತಿಗಳನ್ನು ಇಡಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read