ಅತಿಯಾದ ಆಂಟಿ ಬಯೊಟಿಕ್ ಸೇವನೆ ತಂದೊಡ್ಡಬಹುದು ಇಂಥಾ ಅಪಾಯ…..!

ಆಂಟಿಬಯೊಟಿಕ್ಸ್ ಅತ್ಯಂತ ಸ್ಟ್ರಾಂಗ್ ಆಗಿರೋ ಔಷಧ. ಕೆಲವು ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಬಲ್ಲದು. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕೊಲ್ಲುವ ಅಥವಾ ನಿಧಾನಗೊಳಿಸುವ ಶಕ್ತಿ ಇವುಗಳಲ್ಲಿದೆ. ಮಾತ್ರೆ, ಕ್ರೀಮ್‌, ಕ್ಯಾಪ್ಸುಲ್‌, ಮುಲಾಮು, ದ್ರವರೂಪದ ಔಷಧ ಹೀಗೆ ವಿವಿಧ ರೂಪಗಳಲ್ಲಿ ಆಂಟಿಬಯೊಟಿಕ್ಸ್ ದೊರೆಯುತ್ತದೆ.

ಮಿತವಾಗಿ ಬಳಸಿದ್ರೆ ಆಂಟಿಬಯೊಟಿಕ್ಸ್, ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳು ಮತ್ತು ಅಪಾಯಗಳಿಂದ ನಿಮಗೆ ರಕ್ಷಣೆ ನೀಡುತ್ತದೆ. ಆದರೆ ಅದರ ಅತಿಯಾದ ಬಳಕೆ ಅತ್ಯಂತ ಅಪಾಯಕಾರಿ. ಇದರಿಂದ ಹಲವು ರೀತಿಯ ಅಡ್ಡ ಪರಿಣಾಮಗಳು ನಿಮ್ಮ ದೇಹದ ಮೇಲಾಗುತ್ತವೆ.

ಜೀರ್ಣಕ್ರಿಯೆಯಲ್ಲಿ ಸಮಸ್ಯೆ: ಆಂಟಿಬಯೊಟಿಕ್ ಗಳು ಕರುಳಿನಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದರಿಂದ ತೊಂದರೆಯಾಗಬಹುದು. ಅತಿಸಾರ, ವಾಂತಿ, ಸೆಳೆತ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೀವು ಆಂಟಿಬಯೊಟಿಕ್ ಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದ್ರೆ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು. ಜ್ವರ, ಮಲದಲ್ಲಿ ರಕ್ತ ಅಥವಾ ಮಲದಲ್ಲಿನ ಲೋಳೆ ಹೋಗುವ ಸಾಧ್ಯತೆಯೂ ಇರುತ್ತದೆ.

ಫಂಗಲ್ ಇನ್ಫೆಕ್ಷನ್: ಉತ್ತಮ ಬ್ಯಾಕ್ಟೀರಿಯಾಗಳು ಫಂಗಲ್ ಇನ್ಫೆಕ್ಷನ್ ನಿಂದ ನಿಮ್ಮನ್ನು ರಕ್ಷಿಸುತ್ತವೆ. ಆದ್ರೆ ಆಂಟಿಬಯೊಟಿಕ್ಸ್ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರಿಂದಾಗಿ ಬಾಯಿ, ಗಂಟಲು ಅಥವಾ ಯೋನಿಯಲ್ಲಿ ಫಂಗಲ್ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆ ಹೆಚ್ಚು. ಜ್ವರ, ಬಾಯಿ ರುಚಿ ಕಳೆದುಕೊಳ್ಳುವುದು, ಅಸಹಜ ಯೋನಿ ವಿಸರ್ಜನೆ, ಸಂಭೋಗದ ಸಮಯದಲ್ಲಿ ನೋವು ಇತ್ಯಾದಿ ಲಕ್ಷಣಗಳು ಫಂಗಲ್ ಇನ್ಫೆಕ್ಷನ್ ನಿಂದ ಕಾಣಿಸಿಕೊಳ್ಳುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read