BREAKING : ‘ಆದಿತ್ಯ ಎಲ್-1’ ನೌಕೆ ಉಡಾವಣೆ ಯಶಸ್ವಿ : ‘ISRO’ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಚಂದ್ರಯಾನ -3 ರ ಯಶಸ್ಸಿನ ನಂತರ, ಭಾರತವು ಸೂರ್ಯ ಮಿಷನ್ ಆದಿತ್ಯ -ಎಲ್ 1 ಸೌರನೌಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಯಾಗಿದೆ.

ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
‘ಚಂದ್ರಯಾನ -3 ಯಶಸ್ಸಿನ ನಂತರ, ಭಾರತವು ತನ್ನ ಬಾಹ್ಯಾಕಾಶ ಪ್ರಯಾಣವನ್ನು ಮುಂದುವರೆಸಿದೆ.
ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳಿಗೆ ಅಭಿನಂದನೆಗಳು . ಭಾರತದ ಮೊದಲ ಸೌರ ಮಿಷನ್ ಆದಿತ್ಯ -ಎಲ್ 1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲು. ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಉಪಹಗ್ರಹವನ್ನು ಹೊತ್ತ PSLV-XLC57 ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ. 3ನೇ ಹಂತದಲ್ಲೂ ರಾಕೆಟ್ನಿಂದ ಯಶಸ್ವಿಯಾಗಿ ನೌಕೆ ಬೇರ್ಪಟ್ಟಿದೆ. ನಂತರ 4ನೇ ಹಂತದಲ್ಲೂ ನೌಕೆ-ರಾಕೆಟ್ ಬೇರ್ಪಡುವ ಕಾರ್ಯ ಯಶಸ್ವಿಯಾಗಿದೆ. ಸೂರ್ಯಯಾನಕ್ಕೆ ಸೇರಿದ ಉಪಗ್ರಹವನ್ನು ಇಂದು ಬೆಳಿಗ್ಗೆ 11.50 ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಬಂದರಿನ ಎರಡನೇ ಉಡಾವಣಾ ಪ್ಯಾಡ್ ನಿಂದ ಉಡಾವಣೆ ಮಾಡಲಾಗಿದೆ.

https://twitter.com/narendramodi/status/1697873881221231055

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read