ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಆರ್ಯ’ ತೆರೆ ಮೇಲೆ ಬಂದು ಇಂದಿಗೆ 20 ವರ್ಷ

19 Years For 'Arya': Fans Rejoice As The Allu Arjun Starrer, 46% OFF

ಸುಕುಮಾರ್ ನಿರ್ದೇಶನದ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಸೂಪರ್ ಡೂಪರ್ ಹಿಟ್ ಚಿತ್ರ ‘ಆರ್ಯ’ ತೆರೆ ಮೇಲೆ ಬಂದು ಇಂದಿಗೆ 20 ವರ್ಷಗಳಾಗಿವೆ. 2004 ಮೇ ಏಳರಂದು ತೆರೆಕಂಡಿದ್ದ ಈ ಸಿನಿಮಾ ಟಾಲಿವುಡ್ ನಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಅಲ್ಲು ಅರ್ಜುನ್ ಅವರನ್ನು ಸ್ಟಾರ್ ನಟರನ್ನಾಗಿ ಮಾಡಿತು. ಇಂದು 20 ವರ್ಷ ಪೂರೈಸಿರುವ ಈ ಸಂತಸವನ್ನು ಚಿತ್ರತಂಡ  ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಳ್ಳುವ ಮೂಲಕ  ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ.

ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಸೇರಿದಂತೆ ಅನುರಾಧ ಮೆಹತಾ, ಶಿವ ಬಾಲಾಜಿ ಮುಖ್ಯ ಭೂಮಿಕೆಯಲ್ಲಿದ್ದು, ರಜನ್ ದೇವ್, ಸುಬ್ಬರಾಜು, ಸುನಿಲ್, ವೇಣು ಮಹದೇವ್, ಸುಧಾ, ವಿದ್ಯಾ, ಶ್ರಾವ್ಯ, ದೇವಿ ಚರಣ್, ಜೋಗಿ ನಾಯ್ಡು, ಮತ್ತು ಶ್ರೀಕಾಂತ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ವೆಂಕಟೇಶ್ವರ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read