ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರೌಢಶಾಲೆಗಳಲ್ಲಿ ಸೈನ್ಸ್ ಲ್ಯಾಬ್ ನಿರ್ಮಿಸಲು ಸರ್ಕಾರದಿಂದ ಹಣ ಬಿಡುಗಡೆ

ಬೆಂಗಳೂರು: ರಾಜ್ಯದ 250 ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ನಿರ್ಮಿಸಲು ತಲಾ ಎರಡು ಲಕ್ಷ ರೂಪಾಯಿಯಂತೆ 5.08 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಶಾಲೆಯ ಮುಖ್ಯ ಶಿಕ್ಷಕರು ವಿಜ್ಞಾನ ಪ್ರಯೋಗಾಲಯಕ್ಕೆ ಅಗತ್ಯವಿರುವ ಪರಿಕರಗಳನ್ನು ಶಾಲೆಯ ಎಸ್.ಡಿ.ಎಂ.ಸಿ. ಅನುಮೋದನೆ ಪಡೆದುಕೊಂಡು ನಿಯಮಾನುಸಾರ ಉಪಕರಣ, ಪೀಠೋಪಕರಣ ಖರೀದಿಸಬೇಕು ಎಂದು ತಿಳಿಸಲಾಗಿದೆ.

8ರಿಂದ 10ನೇ ತರಗತಿವಾರು ನಿರ್ವಹಿಸಬೇಕಾದ ಪ್ರಯೋಗಗಳಿಗೆ ಅನುಗುಣವಾಗಿ ಉಪಕರಣ ಖರೀದಿಸಬೇಕು. ಉತ್ತಮ ಗುಣಮಟ್ಟದ, ಬಾಳಿಕೆ ಬರುವ, ಮಕ್ಕಳು ಸುಲಭವಾಗಿ ಬಳಸುವಂತಹ ಪ್ರಯೋಗಗಳಿಗೆ ಅಗತ್ಯ ಉಪಕರಣಗಳ ಖರೀದಿಗೆ ತಿಳಿಸಲಾಗಿದೆ. ಉತ್ತಮ ಗಾಳಿ, ವಿದ್ಯುತ್, ನೀರಿನ ಸೌಲಭ್ಯವಿರುವ, ಸ್ವಚ್ಛ, ಭದ್ರತಾ ವ್ಯವಸ್ಥೆ ಕೊಠಡಿಯಲ್ಲಿ ಪ್ರಯೋಗಾಲಯ ನಿರ್ಮಿಸಬೇಕು.

DSERT ವೆಬ್ ಸೈಟ್ ನಲ್ಲಿ ಪ್ರಯೋಗಾಲಯ ಕೈಪಿಡಿ ಅಪ್ಲೋಡ್ ಮಾಡಲಾಗಿದ್ದು, ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಯೋಗಗಳನ್ನು ಉತ್ತಮವಾಗಿ ನಿರ್ವಹಿಸಲು ಕ್ರಮ ವಹಿಸುವಂತೆ ತಿಳಿಸಲಾಗಿದೆ. ರಾಸಾಯನಿಕ ವಸ್ತುಗಳಿಂದ ಆಗು ಅಪಾಯಗಳ ಕುರಿತು ತಿಳಿಯಪಡಿಸುವ ಚಾರ್ಟ್ ಗಳನ್ನು ಹಾಕಬೇಕೆಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read