Watch Video | ʼನೋ ಬ್ಯಾಗ್​ ಡೇʼ ಯನ್ನು ವಿಶಿಷ್ಟವಾಗಿ ಆಚರಿಸಿದ ವಿದ್ಯಾರ್ಥಿನಿಯರು….!

ಭಾರವಾದ ಬ್ಯಾಗ್​ ಹೊರುವುದು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿರುವ ಜಗತ್ತಿನಲ್ಲಿ, ಚೆನ್ನೈನ ಕಾಲೇಜು ವಿದ್ಯಾರ್ಥಿಗಳ ಗುಂಪು ‘ನೋ ಬ್ಯಾಗ್ ಡೇ’ ಆಚರಿಸುವ ಮೂಲಕ ಹೊಸತನ ಮೆರೆದಿದೆ.

ಈ ಚಮತ್ಕಾರಿ ದಿನದಂದು, ವಿದ್ಯಾರ್ಥಿಗಳು ತಮ್ಮ ಬ್ಯಾಗ್‌ಗಳನ್ನು ಮನೆಯಲ್ಲಿಯೇ ಬಿಟ್ಟು ತರಲು ಪ್ರೋತ್ಸಾಹಿಸಲಾಯಿತು. ಈ ದಿನವನ್ನು ವಿಶೇಷವಾಗಿ ಆಚರಿಸಲು ವಿದ್ಯಾರ್ಥಿಗಳು ಸಾಕಷ್ಟು ಸೃಜನಶೀಲ ಪರಿಹಾರಗಳೊಂದಿಗೆ ಬಂದರು. ಚೆನ್ನೈನ ಮಹಿಳಾ ಕ್ರಿಶ್ಚಿಯನ್ ಕಾಲೇಜಿನ ವಿದ್ಯಾರ್ಥಿನಿಯರ ಗುಂಪು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಪ್ರೆಶರ್ ಕುಕ್ಕರ್‌ನಿಂದ ದಿಂಬಿನ ಕವರ್‌ಗಳವರೆಗೆ, ವಿದ್ಯಾರ್ಥಿಗಳು ತಮ್ಮ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ತಂದಿದ್ದರು. ಇದರ ವಿಡಿಯೋ ವೈರಲ್​ ಆಗಿದ್ದು, ಕ್ಲಿಪ್ ಜನಮನ ಸೆಳೆದಿದೆ.

ಕಾಲೇಜಿಗೆ ಪ್ರೆಶರ್ ಕುಕ್ಕರ್ ಅನ್ನು ಒಯ್ಯುವ ಕಲ್ಪನೆಯನ್ನು ಜನರು ಇಷ್ಟಪಟ್ಟಿದ್ದಾರೆ ಮತ್ತು ಇದು ಅವರೆಲ್ಲರ ಅತ್ಯಂತ ವಿನೋದಕರ ಮತ್ತು ಸೃಜನಶೀಲ ಕಲ್ಪನೆ ಎಂದು ಕಂಡುಕೊಂಡರು. ಅಂದಹಾಗೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳ ಕೆಲವು ಶಾಲೆಗಳಲ್ಲಿ ಇದಾಗಲೇ ಒಂದು ದಿನವನ್ನು ʼನೋ ಬ್ಯಾಗ್​ ಡೇʼ ಆಚರಿಸಲಾಗುತ್ತಿದೆ.

https://youtu.be/vtCobA8zjrU

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read