BIG NEWS: ಬಿಬಿಎ ವಿದ್ಯಾರ್ಥಿನಿ ನಿಗೂಢ ಸಾವು ಕೇಸ್; ಕೇವಲ 2000 ರೂಪಾಯಿ ವಿಚಾರಕ್ಕೆ ಹತ್ಯೆ; ಅಪ್ರಾಪ್ತ ಬಾಲಕ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯಲ್ಲಿ ಮೇ 15ರಂದು ಬಿಬಿಎ ವಿದ್ಯಾರ್ಥಿನಿ ಬಾತ್ ರೂಮ್ ನಲ್ಲಿ ಕತ್ತು ಕುಯ್ದುಕೊಂಡ ರೀತಿಯಲ್ಲಿ ಶವವಾಗಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ.

ಬಿಬಿಎ ವಿದ್ಯಾರ್ಥಿನಿ ಪ್ರಭುದ್ಯ ಮನೆಯ ಬಾತ್ ರೂಮ್ ನಲ್ಲಿ ಕತ್ತು ಕುಯ್ದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆರಂಭದಲ್ಲಿ ಇದು ಆತ್ಮಹತ್ಯೆ ಪ್ರಕರಣ ಎನ್ನಲಾಗಿತ್ತು. ಆದರೆ ಪ್ರಬುದ್ಧ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿಯೂ ಕೊಲೆ ಎಂಬುದು ಸಾಬೀತಾಗಿತ್ತು. ಇದೀಗ ಪೊಲೀಸರ ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ವಿದ್ಯಾರ್ಥಿನಿ ಪ್ರಭುದ್ಯಳ ತಮ್ಮನ ಸ್ನೇಹಿತ ಅಪ್ರಾಪ್ತ ಬಾಲಕನೇ ಆಕೆಯನ್ನು ಹತ್ಯೆಗೈದು ಎಸ್ಕೇಪ್ ಆಗಿದ್ದ. ಬಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 2000 ರೂಪಾಯಿ ವಿಚಾರಕ್ಕಾಗಿ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪ್ರಭುದ್ಯಳ ಸಹೋದರ ಹಾಗೂ ಆರೋಪಿ ಬಾಲಕ ಆಟವಾಡುವ ವೇಳೆ ಆತನ ಕನ್ನಡಕವೊಂದು ಮುರಿದಿತ್ತು. ಕನ್ನಡ ರಿಪೇರಿ ಮಾಡಲು ಹಣ ಬೇಕಿತ್ತು. ಕನ್ನಡಕ ರಿಪೇರಿ ಮಾಡಿಸಿಕೊಡುವಂತೆ ಪ್ರಭುಧ್ಯಳ ತಮ್ಮನನ್ನು ಕೇಳಿದ್ದ. ಆದರೆ ಆತ ನಿರಾಕರಿಸಿದ್ದಾನೆ. ಪ್ರಭುದ್ಯಳ ತಮ್ಮನ ಸ್ನೇಹಿತನಾಗಿದ್ದರಿಂದ ಮನೆಗೂ ಬಾಲಕ ಆಗಾಗ ಬರುತ್ತಿದ್ದ. ಪ್ರಭುಧ್ಯಳ ಬ್ಯಾಗ್ ನಿಂದ 2000 ರೂಪಾಯಿ ಹಣ ಕದ್ದಿದ್ದ. ಈ ವಿಚಾರ ಗೊತ್ತಾಗಿ ಪ್ರಭುಧ್ಯ ಬಾಲಕನನ್ನು ಮನೆಗೆ ಕರೆಸಿ ಮೇ 15ರಂದು ಬೈದಿದ್ದಳು. ಗಲಾಟೆ ವೇಳೆ ಪ್ರಭುದ್ಯ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾಳೆ. ಈ ವೇಳೆ ಅಕ್ಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆಕೆಯ ತಮ್ಮ ಹೇಳಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ಬಾಲಕ ಒಂದು ವೇಳೆ ಹಣ ಕದ್ದ ವಿಚಾರವನ್ನು ಮನೆಯವರಿಗೆ ಹೇಳಬಹುದು ಎಂಬ ಭಯದಿಂದ ಪ್ರಭುಧ್ಯಳ ಮನೆಯಲ್ಲಿಯೇ ಇದ್ದ ಚಾಕುವಿನಿಂದ ಇರಿದು ಆಕೆಯ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಮನೆಯ ಟೆರೇಸ್ ಮೇಲಿಂದ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣದ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಆದರೆ ವಿದ್ಯಾರ್ಥಿ ಪ್ರಭುದ್ಯ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಖಚಿತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read