Video | 20 ನಿಮಿಷ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಬಾಲಕಿ; ರಕ್ಷಿಸುವಂತೆ ಕಿರುಚುತ್ತಾ ಕಣ್ಣೀರಿಟ್ಟ ಅಪ್ರಾಪ್ತೆ

ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಬಾಲಕಿಯೊಬ್ಬಳು ಬರೋಬ್ಬರಿ 20 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿಹಾಕಿಕೊಂಡ ಘಟನೆ ನಡೆದಿದೆ.

ಸುಮಾರು 5 ವರ್ಷ ವಯಸ್ಸಿನ ಬಾಲಕಿ ಲಕ್ನೋದ ಜನೇಶ್ವರ್ ಎನ್‌ಕ್ಲೇವ್ ಅಪಾರ್ಟ ಮೆಂಟ್‌ನ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಳು ಎಂದು ವರದಿಯಾಗಿದೆ. ಇಡೀ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2 ನಿಮಿಷ 13 ಸೆಕೆಂಡ್‌ಗಳ ವೀಡಿಯೊ ಕ್ಲಿಪ್‌ನಲ್ಲಿ ಪುಟ್ಟ ಹುಡುಗಿ ಸುಮಾರು 20 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿಕೊಂಡಿರುವುದನ್ನು ತೋರಿಸುತ್ತದೆ.

ಹಸಿರು ಸಮವಸ್ತ್ರವನ್ನು ಧರಿಸಿದ್ದ ಅಪ್ರಾಪ್ತ ಬಾಲಕಿ ನಿಯಾನ್ ಲಿಫ್ಟ್ ನ ಬಾಗಿಲು ಬಡಿಯುತ್ತಾ, ಕಿರುಚಾಡುತ್ತಾ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ವಿಡಯೋದಲ್ಲಿ ಕಾಣಬಹುದು. ತನ್ನನ್ನು ಲಿಫ್ಟ್ ನಿಂದ ಹೊರಗೆ ಕರೆಸಿಕೊಳ್ಳುವಂತೆ ಅಳುತ್ತಾ ಮನವಿ ಮಾಡುವ ಬಾಲಕಿಯ ಗೋಳು ಕರುಳು ಹಿಂಡುತ್ತೆ. ಅಂತಿಮವಾಗಿ ಸುಮಾರು 20 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಯಿತು. ಆದರೆ ಈ ವಿಡಿಯೋ ಮಕ್ಕಳನ್ನು ಒಂಟಿಯಾಗಿ ಲಿಫ್ಟ್ ನಲ್ಲಿ ಬಿಡಬಾರದು ಎಂಬುದನ್ನ ತಿಳಿಸುತ್ತದೆ.

https://twitter.com/Arv_Ind_Chauhan/status/1709540680773910699?ref_src=twsrc%5Etfw%7Ctwcamp%5Etweetembed%7Ctwterm%5E1709540680773910699%7Ctwgr%5E76bdd9394d2fdb1ef339db091830c01d1a3e2406%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fstudentstuckinliftinuttarpradeshvideominorgirlgetstrappedinelevatorofapartmentinlucknowfor20minutesscreamsandpleadsforhelpcctvclipofincidentsurfaces-newsid-n544114414

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read