ಹೆಸರನ್ನ ತಪ್ಪಾಗಿ ಬರೆದು ಈ-ಮೇಲ್ ಮಾಡಿದ್ದ ಪ್ರಾಧ್ಯಾಪಕ; ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವಿದ್ಯಾರ್ಥಿ

ವಿದ್ಯಾರ್ಥಿಗಳು ತಪ್ಪು ಮಾಡಿದಾಗ, ಅದನ್ನು ತಿದ್ದೋದು ಶಿಕ್ಷಕನ ಜವಾಬ್ದಾರಿಯಾಗಿರುತ್ತೆ. ಆದರೆ ಶಿಕ್ಷಕನೇ ತಪ್ಪು ಮಾಡಿದಾಗ ತಿದ್ದೋದು ಯಾರು. ಅದಕ್ಕೆ ವಿದ್ಯಾರ್ಥಿಯೊಬ್ಬ ಮಾಡಿದ್ದ ಪ್ಲಾನ್ ಏನು ಗೊತ್ತಾ? ಅದನ್ನ ಕೇಳಿದ್ರೆ ನೀವು ದಂಗಾಗಿಬಿಡ್ತಿರಾ!

ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗೆ ಕಳುಹಿಸುತ್ತಿದ್ದ, ಈ-ಮೇಲ್ ಒಂದರಲ್ಲಿ ಪ್ರತಿಬಾರಿ ಹೆಸರನ್ನ ತಪ್ಪಾಗಿ ಬರೆಯುತ್ತಿದ್ದರು. ಅದನ್ನು ಆತ ಶಿಕ್ಷಕನ ಗಮನಕ್ಕೂ ತಂದಿದ್ದ. ಆದರೂ ಶಿಕ್ಷಕ ಆ ತಪ್ಪನ್ನ ತಿದ್ದುಕೊಂಡಿರಲಿಲ್ಲ.

ಕೊನೆಗೆ ಶಿಕ್ಷಕನಿಗೆ ಸಿಟ್ಟಿನಲ್ಲಿ ಮೇಲ್ ಬರೆದು ಕಳುಹಿಸಿದ್ದಾನೆ. ಆ ನಂತರ ಆ-ಮೇಲ್‌ನ ಸ್ಕ್ರಿನ್‌ಶಾಟ್‌ ತೆಗೆದು, ತನ್ನ ಟ್ವಿಟ್ಟರ್ ಅಕೌಂಟ್‌ಗೆ ಪೋಸ್ಟ್ ಮಾಡಿದ್ದಾನೆ.

ಈ-ಮೇಲ್‌ನ ಶೀರ್ಷಿಕೆಯಲ್ಲಿ ‘‘ಈ-ಮೇಲ್‌ನ್ನ ನಾನು ನನ್ನ ಪ್ರೋಫೆಸರ್‌ಗೆ ಕಳುಹಿಸಿದ್ದೇನೆ. ಪ್ರತಿಬಾರಿ ನನ್ನ ಹೆಸರಿನ ಸ್ಪೆಲ್ಲಿಂಗ್ ತಪ್ಪಾಗಿ ಬರೆಯುತ್ತಿದ್ದರು. ನಾನೇ ಬಾಸ್ ಅನ್ನೊ ಭಾವ ಕೊಟ್ಟಿರುವಂತಹ ಘಳಿಗೆ ಇದು” ಬರೆದು ಪೋಸ್ಟ್ ಮಾಡಲಾಗಿದೆ.

ಅಷ್ಟಕ್ಕೂ ಈ ಮೇಲ್‌ನಲ್ಲಿ ಬರೆದಿರೋದು ಏನಂದ್ರೆ, “ನಮಸ್ಕಾರ ಪ್ರೋಫೆಸರ್, ನಾನು ನಿಮಗೆ ಒಂದು ಪ್ರಶ್ನೆ ಕೇಳಬೇಕು ಅಂತ ಅಂದ್ಕೊಂಡಿದ್ದೇನೆ. ಯಾಕೆ ನೀವು ಪ್ರತಿಬಾರಿ ನನ್ನ ಹೆಸರನ್ನ ತಪ್ಪು ತಪ್ಪಾಗಿ ಬರೆಯುತ್ತಿರಾ? ಇದರಿಂದ ನನಗೆ ಬೇಸರವಾಗಿದೆ. ತಾವು “Aktiengesellschaft” ಇದನ್ನ ನೀವು ಹೇಗೆ ತಾನೇ ಉಚ್ಛರಿಸೋದಕ್ಕೆ ಸಾಧ್ಯ ಹೇಳಿ. ಇದು ನನ್ನ ಸರಿಯಾದ ಹೆಸರಲ್ಲ. ದಯಮಾಡಿ ನನ್ನ ಹೆಸರನ್ನ ತಪ್ಪಿಲ್ಲದೇ ಬರೆಯಿರಿ. ಇಂತಿ ನಿಮ್ಮ ವಿಧೇಯ ಸಯೀದ್‌ (ಸಾಯ್ದ್‌, ಸೈದ್‌, ಸಾದ್ ಈ ರೀತಿ ಬರೆಯಬೇಡಿ)“

ಆ ನಂತರ ಸಯೀದ್ ತಮ್ಮ ಟ್ವಿಟ್ಟರ್‌ ಅಕೌಂಟ್‌ನಲ್ಲಿ, “ಈ ಮೇಲ್‌ಗೆ ಇನ್ನೂವರೆಗೂ ತನ್ನ ಶಿಕ್ಷಕನಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ಇದನ್ನು ಓದಿದ್ದಾರೆ ಅನ್ನೊ ನಂಬಿಕೆ ಕೂಡಾ ನನಗೆ ಇಲ್ಲ“ ಎಂದಿದ್ದಾರೆ

ಈ ಪೋಸ್ಟ್‌ ನೋಡಿ, ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಓರ್ವ “ನನಗೆ ಸಹ ಯಾರೂ ನನ್ನ ಹೆಸರು ತಪ್ಪು ಉಚ್ಛಾರಿಸುವುದು ಇಷ್ಟವಿಲ್ಲ. ಯಾರಾದರೂ ತನ್ನ ಹೆಸರನ್ನ ತಪ್ಪಾಗಿ ಹೇಳಿದರೆ ನನಗೆ ಮುಜುಗರವಾಗುತ್ತೆ” ಅಂತ ಕೂಡ ಬರೆದುಕೊಂಡಿದ್ದಾರೆ.

ಇನ್ನೊರ್ವ “ ನಾನು ಕೂಡಾ ಯಾರಾದರೂ ಬೇರೆಯವರ ಹೆಸರನ್ನ ತಪ್ಪಾಗಿ ಹೇಳಿದ್ದಲ್ಲಿ ಅದನ್ನ ತಿದ್ದುತ್ತೇನೆ. ಕೆಲವರು ಧನ್ಯವಾದ ಹೇಳಿ ತಮ್ಮ ತಪ್ಪನ್ನ ತಿದ್ದುಕೊಂಡಿದ್ದಾರೆ. ಇನ್ನೂ ಕೆಲವರು ಅದರ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ“ ಎಂದು ಹೇಳಿಕೊಂಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ.

https://twitter.com/SaeedDiCaprio/status/1609605876893241344?ref_src=twsrc%5Etfw%7Ctwcamp%5Etweetembed%7Ctwterm%5E1609605876893241344%7Ctwgr%5E24d95c5e599e829616a781c36cfd920b97a6752d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstudent-posts-screenshot-of-his-email-to-professor-who-keeps-misspelling-his-name-internet-supports-him-2316810-2023-01-03

https://twitter.com/SaeedDiCaprio/status/1609612899814612993?ref_src=twsrc%5Etfw%7Ctwcamp%5Etweetembed%7Ctwterm%5E1609612899814612993%7Ctwgr%5E24d95c5e599e829616a781c36cfd920b97a6752d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstudent-posts-screenshot-of-his-email-to-professor-who-keeps-misspelling-his-name-internet-supports-him-2316810-2023-01-03

https://twitter.com/JeanaEMann/status/1609839745940574208?ref_src=twsrc%5Etfw%7Ctwcamp%5Etweetembed%7Ctwterm%5E1609839745940574208%7Ctwgr%5E24d95c5e599e829616a781c36cfd920b97a6752d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstudent-posts-screenshot-of-his-email-to-professor-who-keeps-misspelling-his-name-internet-supports-him-2316810-2023-01-03

https://twitter.com/buberella/status/1609648783087878152?ref_src=twsrc%5Etfw%7Ctwcamp%5Etweetembed%7Ctwterm%5E1609648783087878152%7Ctwgr%5E24d95c5e599e829616a781c36cfd920b97a6752d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstudent-posts-screenshot-of-his-email-to-professor-who-keeps-misspelling-his-name-internet-supports-him-2316810-2023-01-03

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read