ಸ್ನೇಹಿತರಿಂದಲೇ ವಿದ್ಯಾರ್ಥಿಯ ಕಿಡ್ನ್ಯಾಪ್: ಬರ್ಬರವಾಗಿ ಹತ್ಯೆಗೈದು ಶವ ಬಿಸಾಕಿ ಹೋದ ದುರುಳರು

ಸ್ನೇಹಿತರೇ 9ನೇ ತರಗತಿಯ ವಿದ್ಯಾರ್ಥಿಯನ್ನು ಅಪಹರಣ ಮಾಡಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನವದೆಹಲಿಯ ವಜಿರಾಬಾದ್ ಪ್ರದೇಶದಲ್ಲಿ ನಡೆದಿದೆ.

ವಿದ್ಯಾರ್ಥಿಯನ್ನು ಅಪಹರಿಸಿದ್ದ ಕಿರಾತಕರು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಬಳಿಕ ಬಾಲಕನನ್ನು ಭಲ್ಸ್ವಾ ಸರೋವರದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹರಿತವಾದ ಆಯುಧಗಳಿಂದ ಆತನನ್ನು ಇರಿದು ಕೊಂದಿದ್ದಾರೆ. ಬಳಿಕ ಶವವನ್ನು ಬಿಸಾಕಿ ಹೋಗಿದ್ದಾರೆ.

ಪ್ರಕರಣ ಸಂಬಂಧ ದೆಹಲಿ ಪೊಲೀಸರು ಮೂವರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕನ ಅಪಹರಣ ಹಾಗೂ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಬಾಲಕನ ಸ್ನೇಹಿತರೇ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read